
ಕೊಪ್ಪಳ: ಕೋವಿಡ್ 19 ರ ರೂಪಾಂತರಿ ವೈರಸ್ ” ಓಮಿಕ್ರಾನ್” ವೈರಾಣು ವೇಗವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ವಿಕಲಚೇತನ ನೌಕರರು ಮನೆಯಿಂದ ಕಚೇರಿಗೆ ಬಂದು ಕಾರ್ಯ ನಿರ್ವಹಿಸಲು ತೊಂದರೆ ಆಗುವುದನ್ನು ಗಮನಿಸಿ ಸರಕಾರವು ವಿಕಲಚೇತನ ನೌಕರರಿಗೆ ಕಚೇರಿ/ ಶಾಲೆಗೆ ಹಾಜರಾತಿಯಿಂದ ವಿನಾಯಿತಿ ನೀಡಲಾಗಿದೆ.ಸರಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ ಅವರು ಆದೇಶ ಮಾಡಿದ್ದು ಜನವರಿ 18 ರ ವರಗೆ ಜಾರಿಯಲ್ಲಿ ಇರುತ್ತದೆ.ಈ ಆದೇಶವು ಶಿಕ್ಷಣ ಇಲಾಖೆಯ ಶಿಕ್ಷಕರಿಗೆ ಸೇರಿದಂತೆ ವಿವಿಧ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ವಿಕಲಚೇತನ ನೌಕರರಿಗೆ ಅನ್ವಯವಾಗುತ್ತದೆ.ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ

ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಮನವಿ ಮಾಡಿದ್ದಾರೆ.
IN MUDALGI Latest Kannada News