Breaking News
Home / Recent Posts / ಚಂಪಾ ಅವರ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಅರ್ಪಿಸಿದ -ಅರವಿಂದ ದಳವಾಯಿ

ಚಂಪಾ ಅವರ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಅರ್ಪಿಸಿದ -ಅರವಿಂದ ದಳವಾಯಿ

Spread the love

 

ಚಂಪಾ ಅವರ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಅರ್ಪಿಸಿದ -ಅರವಿಂದ ದಳವಾಯಿ.

ಮೂಡಲಗಿ: ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು, ಕನ್ನಡ ಹೋರಾಟಗಾರ, ಚಿಂತಕ ಹಾಗೂ ಸಾಹಿತಿ ಪೆÇ್ರ. ಚಂದ್ರಶೇಖರ್ ಪಾಟೀಲ (ಚಂಪಾ) ಅವರು ಸೋಮವಾರ ನಿಧನರಾಗಿರುವ ಸುದ್ದಿ ಕೇಳಿ ತೀರ್ವ ಆಘಾತವಾಯಿತು ಎಂದು ಕಾಂಗ್ರೇಸ್ ಮುಖಂಡ ಕೌಜಲಗಿಯ ಅರವಿಂದ ದಳವಾಯಿ ಅವರು ಸಂತಾಪ ವ್ಯಕ್ತಪಡಿಸಿದಾರೆ.
ಅರವಿಂದ ದಳವಾಯಿ ಅವರು ಚಂಪಾ ಅರವರ ಅಚಿತಿಮ ದರ್ಶನ ಪಡೆದು, ನಾಡಿನ ಶ್ರೇಷ್ಠ ಸಾಹಿತಿಗಳು ಹಾಗೂ ವಿಮರ್ಶಕರು, ತಮ್ಮ ಸಂಕ್ರಮಣ ಪತ್ರಿಕೆಯ ಮೂಲಕ ನಾಡಿನ ತುಂಬೆಲ್ಲ ಪರಿಚಿತರಾಗಿದ್ದರು. ಚಂಪಾರವರು ಎಡಪಂಥೀಯ ಸಿದ್ಧಾಂತಗಳ ಮೂಲಕ ಲೋಹಿಯಾ ವಾದದ ಅನುಯಾಯಿಯಾಗಿದ್ದರು. ಚಂಪಾರವರು ತುರ್ತುಪರಿಸ್ಥಿತಿಯ ದಿನಗಳಲ್ಲಿ ಅದರ ವಿರುದ್ಧ ಪ್ರತಿಭಟಿಸಿದರು. ಗೋಕಾಕ್ ಚಳುವಳಿಯ ಪ್ರಮುಖ ನಾಯಕರಲ್ಲಿ ಒಬ್ಬರು. ಕನ್ನಡ ಭಾμÉ, ನಾಡು-ನುಡಿಗಾಗಿ ನಡೆಯುವ ಹೋರಾಟಗಳಲ್ಲಿ ಮೊದಲಿಗರಾಗಿದ್ದರು. ಶ್ರೀಯುತ ಚಂಪಾ ರವರೊಂದಿಗೆ ನನ್ನ ಒಡನಾಟ ಗುರು-ಶಿಷ್ಯರ ಸಂಬಂಧದಂತಿತ್ತು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ತುರ್ತುಪರಿಸ್ಥಿತಿಯ ವಿರುದ್ಧ ಮಾತನಾಡಲು ಅವರು 1976 ರಲ್ಲಿ ಗೋಕಾಕಕ್ಕೆ ಬಂದಿದ್ದರು. ಗೋಕಾಕದ ಗಾಂಧಿ ಮೈದಾನದಲ್ಲಿ ಅವರ ಕಂಚಿನ ಕಂಠದ ಭಾಷಣ ಕೇಳಿ ಪ್ರಭಾವಿತನಾಗಿದ್ದೆ. ಇಂದು ನಾಡು ಚಂಪಾರ್ ಅವರನ್ನು ಕಳೆದುಕೊಂಡು ದುಃಖದಲ್ಲಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಮತ್ತು ಅವರ ಕುಟುಂಬದವರಿಗೆ ದುಃಖ ಸಹಿಸುವ ಶಕ್ತಿ ನೀಡಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಅರವಿಂದ ದಳವಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


Spread the love

About inmudalgi

Check Also

ವೇಮನ ಒಬ್ಬ ದಾರ್ಶನಿಕ ಕವಿ-ಸಾಹಿತಿ ಸಂಗಮೇಶ ಗುಜಗೊಂಡ

Spread the love ಮೂಡಲಗಿ: ಜಾತಿ, ಮತ-ಪಂಥ ಕಾಂದಾಚಾರಗಳನ್ನು ಖಂಡಿಸುತ್ತಾ ಜೀವನದ ಪರಮ ಸತ್ಯಗಳನ್ನು ನಿರ್ಭೀತಿಯಿಂದ ಸಾರಿದ ವೇಮನ ಒಬ್ಬ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ