ಬೆಟಗೇರಿ ಗ್ರಾಮದಲ್ಲಿ ಸಂಭ್ರಮದಿಂದ ಎಳ್ಳು ಬೆಲ್ಲ ವಿನಿಮಯ
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಮಕರ ಸಂಕ್ರಾತಿಯ ಪ್ರಯುಕ್ತ ಪುರ ಜನರಿಂದ ಸಂಜೆ ಹೊತ್ತು 7 ಗಂಟೆಯಿಂದ 10:30 ಗಂಟೆ ತನಕ ಒಬ್ಬರಿಗೊಬ್ಬರೂ ಎಳ್ಳು ಬೆಲ್ಲ ವಿನಿಮಯ, ಸವಿರುಚಿ ಸವಿಯುವ ಕಾರ್ಯಕ್ರಮ ಜ.14 ರಂದು ನಡೆಯಿತು.
ಬೆಟಗೇರಿ ಗ್ರಾಮದ ಮಕ್ಕಳು, ಮಹಿಳೆಯರು, ಪುರುಷರು ಪ್ರತಿ ಮನೆಗಳಲ್ಲಿ ಹಾಗೂ ಅಕ್ಕ-ಪಕ್ಕದ ಮನೆಗಳಿಗೆ ಭೇಟಿ ನೀಡಿ ನಾವು… ನೀವು… ಎಳ್ಳು ಬೆಲ್ಲದಂಗ ಇರೋಣ… ಅಂತಾ ಮನೆಗಳಲ್ಲಿರುವ ಕಿರಿಯರಿಗೆ, ವೃದ್ಧರಿಗೆ ಎಳ್ಳು ಬೆಲ್ಲ ಕೊಟ್ಟು ಕಾಲಿಗೆ ನಮಸ್ಕರಿಸಿ ಆರ್ಶೀವಾದ ಪಡೆದುಕೊಳ್ಳುವದಲ್ಲದೇ ಊರಿನ ಎಲ್ಲೆಡೆ ಒಬ್ಬರಿಗೊಬ್ಬರೂ ಎಳ್ಳುಬೆಲ್ಲ ವಿನಿಮಯ ಮಾಡಿಕೊಂಡು ಸವಿರುಚಿ ಸವಿದು ಸಂಭ್ರಮಿಸಿದರು.
IN MUDALGI Latest Kannada News