Breaking News
Home / Recent Posts / ಜ. 25ರಂದು ಮಾಯಪ್ಪ ರಾಜಾಪುರ ರಚಿಸಿರುವ  ‘ಸಂತ ಶಿವರಾಮದಾದಾ ಗೋಕಾಕ’ಚರಿತಾಮೃತ ಲೋಕಾರ್ಪಣೆ

ಜ. 25ರಂದು ಮಾಯಪ್ಪ ರಾಜಾಪುರ ರಚಿಸಿರುವ  ‘ಸಂತ ಶಿವರಾಮದಾದಾ ಗೋಕಾಕ’ಚರಿತಾಮೃತ ಲೋಕಾರ್ಪಣೆ

Spread the love

 

ಜ. 25ರಂದು ಮಾಯಪ್ಪ ರಾಜಾಪುರ ರಚಿಸಿರುವ
 ‘ಸಂತ ಶಿವರಾಮದಾದಾ ಗೋಕಾಕ’ಚರಿತಾಮೃತ ಲೋಕಾರ್ಪಣೆ

ಮೂಡಲಗಿ: ಇಲ್ಲಿಯ ಸಂತ ಸಂಸ್ಕøತಿ ಪ್ರಕಾಶನ ಹಾಗೂ ಅಥಣಿ ತಾಲ್ಲೂಕಿನ ಗಡ್ಡೆ ಶ್ರೀ ಕ್ಷೇತ್ರ ಸಪ್ತಸಾಗರ ಇವರ ಸಂಯುಕ್ತ ಆಶ್ರಯದಲ್ಲಿ ಸಂತ ಮಾಯಪ್ಪ ಸಿದ್ದಪ್ಪ ರಾಜಾಪುರ ಅವರು ರಚಿಸಿರುವ ‘ಸಂತ ಶ್ರೀ ಹ.ಬ.ಪ. ಶಿವರಾಮದಾದಾ ಗೋಕಾಕ’ ಇವರ ಸಂಪೂರ್ಣ ಚರಿತಾಮೃತ ಗ್ರಂಥದ ಲೋಕಾರ್ಪಣೆಯು ಜ. 25, ಮಂಗಳವಾರ ಮಧ್ಯಾಹ್ನ 1ಕ್ಕೆ ಅಥಣಿ ತಾಲ್ಲೂಕಿನ ಸಪ್ತಸಾಗರ ಗಡ್ಡೆ(ಬನ)ದಲ್ಲಿ ಜರುಗಲಿದೆ.
ಫಂಡರಪುರದ ರಾಣು (ದೇವವೃತ) ವಾಸ್ಕರ್ ಮಹಾರಾಜರು ಮತ್ತು ಗೋಪಾಲ ಅಣ್ಣಾ ವಾಸ್ಕರ್ ಮಹಾರಾಜರು ಗ್ರಂಥ ಬಿಡುಗಡೆ ಮಾಡುವರು.
ಡಾ. ದಿಲೀಪಸಿಂಹ ವಿಜಯಸಿಂಹರಾವ ಘೋರ್ಪಡೆ ಸರಕಾರ ಸಮಾರಂಭದ ಅಧ್ಯಕ್ಷತೆವಹಿಸುವರು.
ಮುಖ್ಯ ಅತಿಥಿಗಳಾಗಿ ಸಪ್ತಸಾಗರದ ಡಾ. ಪದ್ಮಜೀತ ಅ. ನಾಡಗೌಡ ಪಾಟೀಲ, ರಾಮಚಂದ್ರ ಅಣ್ಣಾಜಿ ಪಾಟೀಲ ಭಾಗವಹಿಸುವರು. ಗ್ರಂಥ ಪರಿಚಯವನ್ನು ಮೂಡಲಗಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಧ್ಯಾಪಕ ಹಾಗೂ ಸಾಹಿತಿ ಪ್ರೊ. ಸಂಗಮೇಶ ಗುಜಗೊಂಡ ಅವರು ಮಾಡುವರು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About inmudalgi

Check Also

ಆರ್.ಡಿ.ಎಸ್. ಪಿಯು ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಬೀಳ್ಕೊಡುವ ಸಮಾರಂಭ

Spread the love  ಮೂಡಲಗಿ : ದಿನಾಂಕ 19-01-2026 ರಂದು ಇಲ್ಲಿನ ಶೈಕ್ಷಣಿಕ ಸಂಸ್ಥೆಯಾದ ಆರ್.ಡಿ.ಎಸ್. ಸ್ವತಂತ್ರ ಪದವಿ ಪೂರ್ವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ