ಐಟಿಐ ತರಬೇತಿ ಮುಗಿಸಿದ ವಿದ್ಯಾರ್ಥಿಗಳಿಗೆ
ಟೊಯೊಟಾ ಕಂಪನಿಯಲ್ಲಿ ಅಪ್ರೈಂಟಿಶಿಪ್ ತರಬೇತಿಗಾಗಿ ಸುವರ್ಣಾವಕಾಶ
ಮೂಡಲಗಿ: ಅರಭಾವಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೆಂದ್ರ(ಜಿಟಿಟಿಸಿ)ದಲ್ಲಿ ಟೊಯೊಟಾ ಕಿರ್ಲೋಸ್ಕರ್ ಮೋಟೊರ್ ಇವರಿಂದ ಅಪ್ರೈಂಟಿಶಿಪ್ ತರಬೇತಿಗಾಗಿ ಆಯ್ಕೆ ಮಾಡಲು ಜಿಟಿಟಿಸಿ ಕಾಲೆಜಿನಲ್ಲಿ ಫೆ.೭ರಿಂದ ಫೆ.೧೧ರವರೆಗೆ ಐದು ದಿನಗಳ ಕಾಲ ತರಬೇತಿ ನಡೆಯುತ್ತಿದ್ದು, ತರಬೇತಿಯ ನಂತರ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಟೊಯೊಟಾ ಕಂಪನಿಗೆ ಕಳುಹಿಸಿಕೊಡಲಾಗುವುದು ಎಂದು ಜಿಟಿಟಿಸಿ ಪ್ರಾಂಶುಪಾಲರಾದ ಉಮೇಶ ಎಸ್ ಬಡಕುಂದ್ರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ
ಆಸಕ್ತರು ತಮ್ಮ ವಯಸ್ಸು ವಿದ್ಯಾರ್ಹತೆಯ ದಾಖಲಾತಿಗಳು ಹಾಗೂ ವೈಯುಕ್ತಿಕ ವಿವರಗಳೊಂದಿಗೆ ಅರಭಾವಿಯ ನಾಡ ಕಛೆರಿ ಹತ್ತೀರ ಇರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೆಂದ್ರದಲ್ಲಿ ಅರ್ಜಿ ಸಲ್ಲಿಸಬಹುದು ಹೆಚ್ಚಿನ ಮಾಹಿತಿಗಾಗಿ ಮೊ. ಸಂಖ್ಯೆ ೯೫೩೮೫೭೦೯೫೦ ಮತ್ತು ೮೭೯೨೫೧೯೧೭೮ ಗೆ ಸಂಪರ್ಕಿಸಿ ಬಹುದು ಎಂದು ಎಂದು ಜಿಟಿಟಿಸಿ ಪ್ರಾಂಶುಪಾಲರಾದ ಉಮೇಶ ಎಸ್ ಬಡಕುಂದ್ರಿ ಹಾಗೂ ಟೊಯೊಟಾ ಕಂಪನಿಯ ತರಬೇತಿ ಅಧಿಕಾರಿ ಚಿದಾನಂದ ಹೀರೆಮಠ ತಿಳಿಸಿದ್ದಾರೆ.