ಕಲಾವಿದರು ಜಾಗತೀಕರಣಕ್ಕೆ ಹೊಂದಿಕೊಳ್ಳಬೇಕಿದೆ- ಜಯಾನಂದ ಮಾದರ
ಮೂಡಲಗಿ: ದೇಶೀಯ ಕಲೆಗಳಿಂದ ನಾಡು ಶ್ರೀಮಂತವಾಗಿದೆ, ಕಲಾವಿದರು ಇಂದಿನ ಜಾಗತೀಕರಣಕ್ಕೆ ಹೊಂದಿಕೊಳ್ಳಲೇಬೇಕಿದೆ ಎಂದು ಕರ್ನಾಟಕ ಲಲಿತಕಲಾ ಅಕಾಡಮಿಯ ಸದಸ್ಯ ಜಯಾನಂದ ಮಾದರ ಹೇಳಿದರು.
ಅವರು ತಾಲೂಕಿನ ನಾಗನೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಜನಾ ರತ್ನ ಶ್ರೀ ರಾಮಚಂದ್ರಪ್ಪ ಮುಕ್ಕಣ್ಣವರ ಸಂಗೀತ ಪ್ರತಿಷ್ಥಾನ ಹಾಗೂ ಕನ್ನಡ ಜಶನಪದ ಪರಿಷತ್ತು ಗೋಕಾಕ ತಾಲೂಕು ಘಟಕ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಾನಪದ ಕಲಾ ಪ್ರದರ್ಶನ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಕೊರೋನ ಸಂದರ್ಭದಲ್ಲಿ ಕಲಾವಿದ ಬದುಕು ಕುರಿತು ಉಪನ್ಯಾಸದಲ್ಲಿ ಮಾತನಾಡಿ, ಕಲಾವಿದರನ್ನು ಹಾಗೂ ಜಾನಪದ ಕಲೆಯನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳಿದರು.
ಬಯಲಾಟದ ಹಿರಿಯ ಕಲಾವಿದ ಈಶ್ವರಚಂದ್ರ ಬೆಟಗೇರಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಗೋಕಾಕ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತನ ಮಾಜಿ ಅಧ್ಯಕ್ಷ ಮಹಾಂತೇಶ ತಾಂವಶಿ ಅಧ್ಯಕ್ಷತೆ ವಹಿಸಿದ್ದರು. ಕಪರಟ್ಟಿ-ಕಳ್ಳಿಗುದ್ದಿಯ ಶ್ರೀ ಮಹಾದೇವಾಶ್ರಮದ ಬಸವರಾಜ ಹಿರೇಮಠ ಮತ್ತು ಶ್ರೀ ಮಹಾಲಿಂಗೇಶ್ವರ ಮಠದ ಶ್ರೀ ಸದಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಹುಬ್ಬಳ್ಳಿ ಶ್ರೀ ಸಿದ್ದಾರೂಢ ಮಠದ ಧರ್ಮದರ್ಶಿ ಶಾಮಾನಂದ ಪೂಜಾರಿ, ಮಕ್ಕಳ ಸಾಹಿತಿ ಡಾ.ಲಕ್ಷ್ಮಣ ಚೌರಿ. ನಾಗನೂರು ಪಟ್ಟಣ ಪಂಚಾಯತ ಸದಸ್ಯ ಬಿ.ಜಿ.ಪಾಟೀಲ ಮತ್ತು ಡಿಸಿಸಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಬಾಳಗೌಡ ಪಾಟೀಲ, ಬಸವರಾಜ ತಡಸನ್ನವರ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಇದೇ ಸಂಧರ್ಭದಲ್ಲಿ ಶಿಂಗಳಾಪೂರದ ಹಿರಿಯ ಭಜನಾ ಕಲಾವಿದರಾದ ಶಿವಾಜಿ ಜಾಧವ ಬಳೋಬಾಳದ ಮಹಾದೇವ ಕಳಸನ್ನವರ, ನಾಗನೂರಿನ ನಿಜಪ್ಪಾ ಗುರವ, ಲಕ್ಷ್ಮಣ ಕರಬಣ್ಣವರ, ಕುಲಗೋಡದ ಶಿವಪುತ್ರ ಸಣ್ಣಕ್ಕಿ ಅವರನ್ನು ಸನ್ಮಾನಿಸಿದರು.
ನಾಗನೂರ, ಕಲ್ಲೋಳಿ, ಕುಲಗೋಡ, ಮೆಳವಂಕಿ ಮತ್ತು ಬಳೋಬಾಳ ಗ್ರಾಮದ ಭಜನಾ ತಂಡಗಳಿಂದ ಕಲಾ ಪ್ರದರ್ಶನ ಜರುಗಿತು
ಆನಂದ ಸೋರಗಾವಿ ನಿರೂಪಿಸಿದರು, ಗುರುನಾಥ ಮುಕ್ಕಣ್ಣವರ ಸ್ವಾಗತಿಸಿದರು, ಶಂಭುಲಿಂಗ ಮುಕ್ಕಣ್ಣವರ ವಂದಿಸಿದರು.