ಫೆ. 9ರಂದು ರಾಜಾಪುರದಲ್ಲಿ ರೈತ ದಿನಾಚರಣೆ ಆಚರಣೆ, ಮಣ್ಣು ಆರೋಗ್ಯ ಚಿಂತನ ಕಾರ್ಯಕ್ರಮ
ಮೂಡಲಗಿ: ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಗೋಕಾಕ ತಾಲ್ಲೂಕು ಘಟಕದಿಂದ ತಾಲ್ಲೂಕಿನ ರಾಜಾಪುರ ಗ್ರಾಮದ ಮಾಧವಾನಂದ ಆಶ್ರಮದಲ್ಲಿ ಫೆ. 9ರಂದು ಬೆಳಿಗ್ಗೆ 10ಕ್ಕೆ ರೈತ ದಿನಾಚರಣೆ ಮತ್ತು ಮಣ್ಣು ಆರೋಗ್ಯ ಕುರಿತು ಚಿಂತನ ಕಾರ್ಯಕ್ರಮವನ್ನು ಏರ್ಪಡಿಸಿರುವರು.
ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಾಳಪ್ಪ ಬಿ. ಬೆಳಕೂಡ ಕಾರ್ಯಕ್ರಮವನ್ನು ಉದ್ಘಾಟಿಸುವರು. ರಾಜಾಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸಿದ್ರಾಯ ಮರಸಿದ್ದಪ್ಪಗೋಳ ಅಧ್ಯಕ್ಷತೆವಹಿಸುವರು.
ಅತಿಥಿಗಳಾಗಿ ಗೋಕಾಕ ಟಿಎಪಿಸಿಎಂ ಉಪಾಧ್ಯಕ್ಷ ವಿಠ್ಠಳ ಪಾಟೀಲ, ಎಸ್‍ಎಲ್‍ಬಿಡಿ ನಿರ್ದೇಶಕ ರಾಜು ಬೈರುಗೋಳ, ಮಾಧವಾನಂದ ಯೋಗಾಶ್ರಮದ ಅಧ್ಯಕ್ಷ ರಾಮಣ್ಣ ಮುತ್ನಾಳ, ಕೃಷಿಕ ಸಸಮಾಜದ ಅಧ್ಯಕ್ಷ ಅಶೋಕ ಗದಾಡಿ, ತಾಲ್ಲೂಕಾ ಸಹಾಉಯಕ ಕೃಷಿ ನಿರ್ದೇಶಕ ಎಂ.ಎಂ. ನದಾಫ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಜನ್ಮಟ್ಟಿ, ಗ್ರಾಮ ಪಂಚಾಯ್ತಿ ಸದಸ್ಯ ಬೈರು ಯಕ್ಕುಂಡಿ ಭಾಗವಹಿಸುವರು.
ತುಕ್ಕಾನಟ್ಟಿಯ ಬಡ್ರ್ಸ್ ಸಂಸ್ಥೆಯ ಡಾ. ಧನಂಜಯ ಚೌಗಲಾ, ಡಾ. ಮಾರುತಿ ಮಳವಾಡ ವಿಶೇಷ ಉಪನ್ಯಾಸ ನೀಡುವರು ಎಂದು ಕೃಷಿ ಅಧಿಕಾರಿ ಎನ್.ಜಿ. ಘಮಾಣಿ ಹಾಗೂ ಆತ್ಮ ಯೋಜನೆಯ ಛಾಯಾ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
IN MUDALGI Latest Kannada News