Breaking News
Home / Recent Posts / ನಮ್ಮ ಮನಸ್ಸನ್ನು ಭಗವಂತನತ್ತ ಹೊರೆಳಿಸಿದರೆ ನಮ್ಮ ಜೀವನವೇ ಧನ್ಯವಾಗುತ್ತದೆ- ಶ್ರೀ ದತ್ತಾವಧೂತಗುರುಗಳು

ನಮ್ಮ ಮನಸ್ಸನ್ನು ಭಗವಂತನತ್ತ ಹೊರೆಳಿಸಿದರೆ ನಮ್ಮ ಜೀವನವೇ ಧನ್ಯವಾಗುತ್ತದೆ- ಶ್ರೀ ದತ್ತಾವಧೂತಗುರುಗಳು

Spread the love

ಮೂಡಲಗಿ: ಭಗವಂತನ  ನಾಮಸ್ಮರಣೆಯಿಂದ ಅಸಾಧ್ಯವಾದಾದನ್ನೆಲ್ಲ ಸಾಧಿಸಬಹುದಾಗಿದೆ, ಲೌಕಿಕ ಪ್ರಪಂಚದಲ್ಲಿ ಮುಳಗಿರುವ ನಾವು ಭಗವಂತನನ್ನು ಮರೆತು ಕೇವಲ ಸುಖಕ್ಕಾಗಿ ದಢಪಡಿಸುತ್ತಿದ್ದೇವೆ, ನಮ್ಮ ಮನಸ್ಸನ್ನು ಭಗವಂತನತ್ತ ಹೊರೆಳಿಸಿದರೆ ನಮ್ಮ ಜೀವನವೇ ಧನ್ಯವಾಗುತ್ತದೆ ಎಂದು ಶ್ರೀ ಕ್ಷೇತ್ರ ಹೆಬ್ಬಳ್ಳಿಯ ಚೈತನ್ಯಾಶ್ರಮದ ಶ್ರೀ ದತ್ತಾವಧೂತಗುರುಗಳು ಹೇಳಿದರು.
ತಾಲೂಕಿನ ಯಾದವಾಡ ಗ್ರಾಮದಲ್ಲಿ ಚೈತನ್ಯ ನಾಮೋಪಾಸನಾ ಕೇಂದ್ರದ ವಾಸ್ತು ಶಾಂತಿ ಮತ್ತು ತಮ್ಮ ೭೦ನೇ ಹುಟ್ಟು ಹಬ್ಬದ ಏರ್ಪಡಿಸಲ್ಲಾಗಿದ ರುದ್ರಾಭಿಷೇಕ ಮತ್ತು ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಮನುಷ್ಯ ತನ್ನ ಜೀವನದಲ್ಲಿ ಸುಖವನ್ನು ಪಡೆಯುವದಕ್ಕಾಗಿ ಅನೇಕ ರೀತಿಯ ಪ್ರಯತ್ನ ಮಾಡುತ್ತಾನೆ ಇರುತ್ತಾನೆ, ಆದರೆ ಅವನು ಆ ಸುಖವನ್ನು ತನ್ನ ಇಂದ್ರಿಯಗಳ ಮೂಲಕ ಪಡೆಯಲು ಸಾಧ್ಯವಿಲ್ಲ, ಇಂದ್ರಿಯಗಳು ಅಶಾಶ್ವತವಾಗಿದ್ದು ಅವುಗಳಿಂದ ದೊರೆಯುವ ಸುಖವೂ ಕೂಡ ಅಶಾಶ್ವತಾಗಿರುತ್ತದೆ, ಕೇವಲ ಭಗವಂತನಲ್ಲಿ ಮಾತ್ರ ಶಾಶ್ವತ ಸುಖವಿದ್ದು, ಅದನ್ನು ಪಡೆಯಲು ಇರುವ ಏಕೈಕ ಸಾಧನೆಯೆಂದರೆ ಭಗವಂತನ ನಾಮಸ್ಮರಣೆಯೇ ಆಗಿದೆ ಎಂದರು.
ಚಿದಂಬರ ಇನಾಮದಾರ ಮಾತನಾಡಿ, ಯಾಡದಲ್ಲಿ ಎರಡು ತರಹ ಕೋಟಿ ನಾಮಸ್ಮರಣೆಯಾಗಿದ್ದು, ಈಗ ಚೈತನ್ಯ ನಾಮೋಪಾಸನಾ ಕೇಂದ್ರದ ಮೂಲಕ ಇನ್ನೂ ಹೆಚ್ಚಿನ ಸಾಧನೆ ಮಾಡಲು ಅನುಕೂಲವಾಗಲಿದೆ, ಈ ಸಾಧನೆಗೆ ಗುರುಗಳಾದ ಹಾಗೂ ಶ್ರೀ ಬ್ರಹ್ಮಚೈತನ್ಯಮಹಾರಾಜರ ಕೃಪಾರ್ಶಿರ್ವಾದವೇ ಕಾರಣ ಎಂದರು.
ಸಮಾರಂಭದಲ್ಲಿ ಬೆಳಗಾವಿ ಮತ್ತು ಬಾಗಲಕೋಟ ಜಿಲ್ಲೆ ಮತ್ತು ವಿವಿಧ ಗ್ರಾಮಗಳ ಭಕ್ತರು ಭಾಗವಹಿಸಿದರು. ಈ ಸಮಯದಲ್ಲಿ ಶ್ರೀ ಮಹಾರಜರಿಗೆ ಆರತಿ, ನೈವೇದ್ಯಗಳೊಂದಿಗೆ ಮತ್ತು ಅನ್ನ ಸಂತರ್ಪಣೆ ಜರುಗಿತು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ