Breaking News
Home / Recent Posts / ಶ್ರೀ ಪುಂಡಲೀಕ ಮಹಾರಾಜರ ಪುಣ್ಯಾರಾಧನೆ, ಸಂಭ್ರಮದ ಮೇರವಣಿಗೆ

ಶ್ರೀ ಪುಂಡಲೀಕ ಮಹಾರಾಜರ ಪುಣ್ಯಾರಾಧನೆ, ಸಂಭ್ರಮದ ಮೇರವಣಿಗೆ

Spread the love

ಶ್ರೀ ಪುಂಡಲೀಕ ಮಹಾರಾಜರ ಪುಣ್ಯಾರಾಧನೆ, ಸಂಭ್ರಮದ ಮೇರವಣಿಗೆ

ತೊಂಡಿಕಟ್ಟಿ: ರಾಮದುರ್ಗ ತಾಲೂಕಿನ ಸುಕ್ಷೇತ್ರ ತೊಂಡಿಕಟ್ಟಿ ಗ್ರಾಮದ ಶ್ರೀ ಅವಧೂತ ಗಾಳೇಶ್ವರ ಮಠದ ಪೀಠಾಧಿಪತಿಗಳಾಗಿದ ಶಾಂತಯೋಗಿ ವಾಕ್ ಸಿದ್ಧಿ ಪುರುಷ ಪ.ಪೂ ಶ್ರೀ ಪುಂಡಲೀಕ ಮಹಾರಾಜರ ಪ್ರಥಮ ಪುಣ್ಯಾರಾಧನೆಯ ನಿಮಿತ್ಯ ಗುರುವಾರ ಸಂಜೆ ಗ್ರಾಮದಲ್ಲಿ ಶ್ರೀಗಳ ಭಾವಚಿತ್ರದ ಉತ್ಸವದ ಮೇರವಣಿಗೆಯು ಮಹಿಳೆಯರ ಆರತಿ ಮೇಳ ಮತ್ತು  ವಿವಿಧ ವಾಧ್ಯಮೇಳದೊಂದಿಗೆ ಸಂಭ್ರಮದಿಂದ ಜರುಗಿತು.


ಶ್ರೀ ಗಾಳೇಶ್ವರ ಮಠದ ಆವರಣದಲ್ಲಿ ಶ್ರೀ ಪುಂಡಲೀಕ ಮಹಾರಾಜರ ಭಾವ ಚಿತ್ರ ಇರುವ ರಥಕ್ಕೆ ಶ್ರೀ  ಮಠದ ಅಭಿನವ ಶ್ರೀ ವೆಂಕಟೇಶ ಮಹಾರಾಜರು ಪೂಜೆಸಲ್ಲಿಸಿ ಉತ್ಸವದ ಮೇರವಣಿಗೆಗೆ ಚಾಲನೆ ನೀಡಿದರು.
ಮೇರವಣಿಗೆಯು ಶ್ರೀಗಳ ಮನೆಯ ರಸ್ತೆಯ ಮೂಲಕ ಗ್ರಾಮದ ದುರ್ಗಮ್ಮಾ ದೇವಸ್ಥಾನ, ಶಿವಾಜಿ ವೃತ್ತ, ಕನ್ನಡ ಶಾಲೆ, ಗಾಂಧಿ ವೃತ್ತ, ಹನುಮಾನ ದೇವಸ್ಥಾನ ಹಾಗೂ ಬಸ್ ನಿಲ್ದಾನ ಮೂಲಕ ಶ್ರೀ ಮಠದವರಿಗೆ ನಡೆದ ಮೇರವಣಿಗೆಯಲ್ಲಿ ಸಂಧರ್ಭದಲ್ಲಿ ಶ್ರೀಗಳ ಭಾವಚಿತ್ರ ಇರುವ ರಥಕ್ಕೆ ಗ್ರಾಮಸ್ಥರು ಪೂಜೆ ಸಲ್ಲಿಸಿ ನಮಿಸಿದರು.


ಮೇರವಣಿಗೆಯಲ್ಲಿ ತೊಂಡಿಕಟ್ಟಿ ಮತ್ತು, ಬುದ್ನಿ ಖುರ್ದ, ಗುತ್ತಿಗೋಳಿ-ಹೊಸಕೋಟಿ, ಕಮಕೇರಿ, ಕನಸಗೇರಿ, ಕಿಲ್ಲಾಹೊಸಕೋಟಿ, ದಾದನಟ್ಟಿ, ಅಡಿಗಿನಾಳ, ಕಳ್ಳಿಗುದ್ದಿ, ಬಿಸಗುಪ್ಪಿ ಸೇರಿದಂತೆ ವಿವಿಧ ಗ್ರಾಮಗಳ ಭಕ್ತಾಧಿಗಳು ಭಾಗವಹಿಸಿದರು.


Spread the love

About inmudalgi

Check Also

ಬೆಟಗೇರಿ ವಿವಿಧೆಡೆ ಸಂಭ್ರಮದಿಂದ ನಡೆದ 76 ನೇ ಗಣರಾಜ್ಯೋತ್ಸವ ದಿನಾಚರಣೆ

Spread the love ಬೆಟಗೇರಿ ವಿವಿಧೆಡೆ ಸಂಭ್ರಮದಿಂದ ನಡೆದ 76 ನೇ ಗಣರಾಜ್ಯೋತ್ಸವ ದಿನಾಚರಣೆ ಬೆಟಗೇರಿ :ಗೋಕಾಕ ತಾಲೂಕಿನ ಬೆಟಗೇರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ