Breaking News
Home / ತಾಲ್ಲೂಕು / ಮೂಡಲಗಿಯ ನ್ಯಾಯವಾದಿಗಳು ಕೊರ್ಟ ಕಾರ್ಯಕಲಾಪಗಳಿಂದ ಹೊರಗುಳಿದು ಪೋಲಿಸ ಪೇದೆ ವಿರುದ್ದ ಪ್ರತಿಭಟನೆ ಮಾಡಿದರು

ಮೂಡಲಗಿಯ ನ್ಯಾಯವಾದಿಗಳು ಕೊರ್ಟ ಕಾರ್ಯಕಲಾಪಗಳಿಂದ ಹೊರಗುಳಿದು ಪೋಲಿಸ ಪೇದೆ ವಿರುದ್ದ ಪ್ರತಿಭಟನೆ ಮಾಡಿದರು

Spread the love

*ಮೂಡಲಗಿಯ ನ್ಯಾಯವಾದಿಗಳು ಕೊರ್ಟ ಕಾರ್ಯಕಲಾಪಗಳಿಂದ ಹೊರಗುಳಿದು ಪೋಲಿಸ ಪೇದೆ ವಿರುದ್ದ ಪ್ರತಿಭಟನೆ ಮಾಡಿದರು*

ಮೂಡಲಗಿ : ಸರಕಾರಿ ವಕೀಲರ ವಿರುದ್ಧವೆ ಸುಳ್ಳು ದೂರು ದಾಖಲಿಸಿದ ಧಾರವಾಡ ಪೊಲೀಸ್ ಗಣೇಶ ಕಾಂಬಳೆ ಹಾಗೂ ದೇವರಾಜ ಮೇಲೆ ಕಾನೂನು ಕಠಿಣ ಕ್ರಮ ತೆಗೆದುಕೊಳ್ಳಬೇಕು. ವಕೀಲರ ಮೇಲೆ ಈ ರೀತಿ ಮೇಲಿಂದ ಮೇಲೆ ನಡೆಯುವ ಪೊಲೀಸ ದೌರ್ಜ್ಯನಕ್ಕೆ ಸಂಬಂಧಪಟ್ಟ ಮೇಲಾಧಿಕಾರಿಗಳು ಅಪರಾದ ಎಸಗಿದ ಪೊಲೀಸ ಪೇದೆ ಮೇಲೆ ಯೊಗ್ಯ ಕ್ರಮ ತೆಗೆದುಕೊಂಡು ಅವರನ್ನು ಕೆಲಸದಿಂದ ವಜಾ ಮಾಡಬೇಕೆಂದು ಹಿರಿಯ ನ್ಯಾಯವಾದಿ ಎಮ್.ಎಲ್. ಸವಸುದ್ದಿ ಹೇಳಿದರು.

ಸ್ಥಳೀಯ ದಿವಾನಿ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯದ ಆವರಣದಲ್ಲಿ ಎಲ್ಲ ವಕೀಲರು ಸಭೆ ಸೇರಿ ಸರ್ವಾನುಮತದಿಂದ ಠರಾವು ಪಾಸಮಾಡಿ ಮಂಗಳವಾರ ಕೊರ್ಟ ಕಾರ್ಯಕಲಾಪಗಳಿಂದ ಹೊರಗುಳಿದು ಪ್ರತಿಭಟಿಸಿ ಮಾತನಾಡುತ್ತಾ, ಸರಕಾರಿ ವಕೀಲರಾದ ಸುನಿಲ ಗುಡಿ ಇವರ ಕೊರಳಪಟ್ಟಿ ಹಿಡಿದು ಹೊರ ಹಾಕಿ ದರ್ಪ ಮೆರೆದ ಧಾರವಾಡ ಗ್ರಾಮೀಣ ಪೋಲಿಸ ಠಾಣೆ ಪೇದೆ ಸರಕಾರಿ ವಕೀಲರ ಮೇಲೆ ದಬ್ಬಾಳಿಕೆ ನಡೆಸಿದ್ದಾನೆ ಇದು ಖಂಡನೀಯ ಎಂದರು.

ಹಿರಿಯ ವಕೀಲರಾದ ಮಾತನಾಡಿ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ದೌರ್ಜನ್ಯತಡೆ ಅದಿನಿಯಮದಲ್ಲಿ ಸರಕಾರಿ ವಕೀಲರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಈ ರೀತಿ ಆದರೆ ಸಾಮಾನ್ಯ ಜನರ ಗತಿ ಏನು ಎಂದರು.

ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಪಿ. ಮಗದುಮ್ಮ ಮಾತನಾಡುತ್ತಾ, ಧಾರವಾಡ ಉಪನಗರ ಪೊಲೀಸ ಠಾಣೆ ಸಿ.ಪಿ.ಐ. ಪ್ರಮೋದ ಯಲಿಗಾರವÀರು ದೂರು ಸ್ವಿಕರಿಸುವ ಮೊದಲು ಸರಿಯಾಗಿ ವಿಚಾರಣೆ ಮಾಡಿ ಘಟನೆ ನಡೆದಿದಿಯೋ ಅಥವಾ ಇಲ್ಲವೊ ಎಂಬುವುದನ್ನು ವಿಚಾರ ಮಾಡದೆ ಸರಕಾರಿ ವಕೀಲರನ್ನೇ ಆರೋಪಿಯಾಗಿ ಮಾಡಿದ್ದು ತಪ್ಪು. ವಕೀಲರ ಮೇಲೆ ಹಲ್ಲೆ ಎಸಗುವ ಪೋಲಿಸ ಪೇದೆ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವವರೆಗೆ ಉಗ್ರ ಹೊರಾಟ ಮಾಡುತ್ತೇವೆ ಎಂದರು.

ಪ್ರತಿಭಟನೆಯಲ್ಲಿ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಎಸ್.ವಾಯ್.ಹೊಸಟ್ಟಿ ಪ್ರಧಾನ ಕಾರ್ಯದರ್ಶಿ ಎಲ್.ವಾಯ್.ಅಡಿಹುಡಿ ಸಹಕಾರ್ಯದರ್ಶಿ ಡಿ.ಎಸ್.ರೊಡ್ಡನವರ ಬಿ.ಎಚ್.ಮಳ್ಳಿವಡೇರ ಖಜಾಂಚಿ ವಿ.ಕೆ.ಪಾಟೀಲ ಮಹಿಳಾ ಪ್ರತಿನಿಧಿ ಎ.ಎಚ್.ಗೊಡ್ಯಾಗೋಳ ಹಿರಿಯ ವಕೀಲರಾದ ಆರ್.ಆರ್.ಭಾಗೋಜಿ ಕೆ.ಎಲ್.ಹುಣಸ್ಯಾಳ ಯು.ಆರ್.ಜೋಕಿ ಎ.ಎಸ್.ಕೌಜಲಗಿ ಎಲ್.ಬಿ.ಒಡೆಯರ ಮಂಜು ಅರಸಪ್ಪಗೋಳ ಪಿ.ಎಸ್.ಮಲ್ಲಾಪೂರ ಹಾಗೂ ಹಿರಿಯ ನ್ಯಾಯವಾದಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವರದಿ : ಈಶ್ವರ ಢವಳೇಶ್ವರ ಮೂಡಲಗಿ


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ