ಮೂಡಲಗಿ : ದಿವಾಣಿ ಹಾಗೂ ಜೆ.ಎಮ್.ಎಪ್.ಸಿ. ನ್ಯಾಯಾಲಯದ ಆವರಣದಲ್ಲಿ ಬೈಲಹೊಂಗಲದ ನ್ಯಾಯವಾದಿ ಎಸ್.ಡಿ.ಮದಲಮಟ್ಟಿ ಅವರ ಮೇಲೆ ನಡೆದ ಹಲ್ಲೆಯನ್ನು ಪ್ರತಿಭಟಿಸಿ ತಾಲೂಕಿನ ನ್ಯಾಯವಾದಿ ಸಂಘದವರು ಮಂಗಳವಾರ ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ಕೊರ್ಟ ಕಲಾಪಗಳಿಂದ ಹೊರಗುಳಿದ ಪ್ರತಿಬಟಿಸಿದರು.
ಹಿರಿಯ ನ್ಯಾಯವಾದಿ ಆರ್.ಆರ್. ಭಾಗೋಜಿ ಮಾತನಾಡುತ್ತಾ, ಕುತುಬುದ್ದಿನ್ ಮುಲ್ಲಾ ಎಂಬಾತ ಅವನ ಜೊತೆ ಸುಮಾರು ನಲವತ್ತು ಜನರ ಗುಂಡಾ ಜನರನ್ನು ಕರೆದುಕೊಂಡು ಬಂದು ಅವಾಚ್ಯ ಶಬ್ದಗಳನ್ನು ಬೈದು ದೈಹಿಕ ಹಲ್ಲೆ ಮಾಡಿ ಜೀವದ ಧಮಕಿ ಹಾಕಿ ಮತ್ತು ಅನುಚಿತವಾಗಿ ವರ್ತಿಸಿ ವಕಿಲರಿಗೆ ಅವಮಾನ ಮಾಡಿರುವುದನ್ನು ನಾವು ಖಂಡಿಸುತ್ತೇವೆ ಎಂದರು.
ನ್ಯಾಯವಾದಿ ಬಿ.ಎನ್. ಸಣ್ಣಕ್ಕಿ ಮಾತನಾಡಿ, ಯಾವುದೇ ತಪ್ಪು ಮಾಡದ ನ್ಯಾಯವಾದಿಗಳ ಮೇಲೆ ಪದೇ ಪದೇ ನಡೆಯುತ್ತಿರುವ ಹಲ್ಲೆಗಳನ್ನು ಖಂಡಿಸಿ ಇಂತಹ ಗೂಂಡಾ ಜನರ ವಿರುದ್ಧ ಸಂಬಂಧಿಸಿದ ಮೇಲಾಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಪ್ರತಿಭಟಣೆಯಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಪಿ.ಮಗದುಮ್, ಉಪಾಧ್ಯಕ್ಷ ಎಸ್.ವಾಯ್. ಹೊಸಟ್ಟಿ, ಕಾರ್ಯದರ್ಶಿ ಎಲ್. ವಾಯ್. ಅಡಿಹುಡಿ, ಡಿ.ಎಸ್. ರೊಡ್ಡನವರ, ಬಿ.ಹೆಚ್.ಮಳ್ಳಿವಡೆರ್, ವಿ.ಕೆ.ಪಾಟೀಲ, ಎ. ಎಚ್. ಗೋಡ್ಯಾಗೋಳ, ಎ.ಕೆ.ಮದಗನ್ನವರ, ಎಮ್.ಎಲ್. ಸವಸುದ್ದಿ, ವಿ.ವಿ. ನಾಯಕ, ಎ.ಎಸ್. ಕೌಜಲಗಿ, ಎ.ಬಿ. ಬಾಗೋಜಿ, ಎಲ್.ಬಿ. ವಡೇರ್,ಎಮ್.ಐ.ಬಡಿಗೇರ, ಆರ್.ಎಸ್.ತೋಳಮರಡಿ, ಎಸ್. ಎಮ್ ಗಿಡೊಜಿ, ಆರ್.ಎಮ್.ಐಹೊಳೆ, ಎಸ್.ಎಲ್. ಪಾಟೀಲ್, ಪಿ.ಎಲ್. ಮನ್ನಿಕೇರಿ ವಾಯ್ ಎಸ್. ಖಾನಟ್ಟಿ, ಎಲ್ ಎಸ್ ಯಡ್ರಾವಿ, ಕೆ.ಎಮ್.ಪೋಳ,ಎಸ್.ಎಸ್.ಗೋಡಿಗೌಡರ ಭಾಗವಹಿಸಿದ್ದರು.
ವರದಿ- ಈಶ್ವರ್ ಢವಳೇಶ್ವರ