ಅರಭಾವಿ ತೋಟಗಾರಿಕೆ ಕಾಲೇಜುದಲ್ಲಿ
ಫೆ. 3ರಂದು ‘ಟೊಮ್ಯಾಟೊ ಬೆಳೆಯ ಕ್ಷೇತ್ರೋತ್ಸವ’
ಮೂಡಲಗಿ: ತಾಲ್ಲೂಕಿನ ಅರಭಾವಿಯ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದ, ವಿಸ್ತರಣಾ ಶಿಕ್ಷಣ ಘಟಕ ಹಾಗೂ ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇವುಗಳ ಸಹಯೋಗದಲ್ಲಿ ಫೆ. 3ರಂದು ಬೆಳಿಗ್ಗೆ 10.30ಕ್ಕೆ ಟೊಮ್ಯಾಟೊ ಬೆಳೆಯ ಕ್ಷೇತ್ರೋತ್ಸವ ಸಮಾರಂಭವು ಇರುವುದು.
ಬೆಳಗಾವಿಯ ರಾಮಕೃಷ್ಣ ಮಿಶನ ಆಶ್ರಮದ ಸ್ವಾಮಿ ಮೊಕ್ಷಾತ್ಮನಂದಾಜೀ ಮಹಾರಾಜರು ಸಾನ್ನಿಧ್ಯವಹಿಸುವರು. ಬಾಗಲಕೋಟ ತೋಟಗಾರಿಕೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಕೆ.ಎಂ. ಇಂದಿರೇಶ ಗೌರವ ಉಪಸ್ಥಿತಿ ಹಾಗೂ ಮುಖ್ಯ ಅತಿಥಿಗಳಾಗಿ ತೋಟಗಾರಿಕೆ ವಿವಿಯ ವಿಸ್ತರಣಾ ನಿರ್ದೇಶಕ ಡಾ. ಎಸ್.ಐ. ಅಥಣಿ ಮತ್ತು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ಮಲ್ಲಿಕಾರ್ಜುನ ಜಾನಮಟ್ಟಿ ಭಾಗವಹಿಸುವರು. ಮಹಾವಿದ್ಯಾಲಯದ ಡೀನ್ ಡಾ. ಎಂ.ಜಿ. ಕೆರುಟಗಿ ಅಧ್ಯಕ್ಷತೆವಹಿಸುವರು.
ತಾಂತ್ರಿಕ ಗೋಷ್ಠಿಗಳಲ್ಲಿ ‘ಟೊಮ್ಯಾಟೊ ಬೆಳೆಯಲ್ಲಿ ಆಧುನಿಕ ಉತ್ಪಾದನಾ ತಾಂತ್ರಿಕತೆಗಳು’ ಕುರಿತು ಡಾ ವಿಜಯಕುಮಾರ ರಾಠೋಡ, ‘ಟೊಮ್ಯಾಟೊ ಬೆಳೆಯಲ್ಲಿ ಸಮಗ್ರ ಕೀಟ ನಿರ್ವಹಣೆ’ ಕುರಿತು ರೇಣುಕಾ ಹಿರೇಮಠ, ‘ಟೊಮ್ಯಾಟೊ ಬೆಳೆಯಲ್ಲಿ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಕುರಿತು ಡಾ. ಕಿರಣಕುಮಾರ ಗೋರಬಾಳ ಹಾಗೂ ‘ಟೊಮ್ಯಾಟೊ ಬೆಳೆಯ ಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆ ವ್ಯವಸ್ಥೆ’ ಕುರಿತು ಡಾ. ಸಚಿನಕುಮಾರ ನಂದಿಮಠ ಉಪನ್ಯಾಸ ನೀಡುವರು. ರೈತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿಲು ಸಸ್ಯರೋಗ ಶಾಸ್ತ್ರ ವಿಭಾಗದ ಪ್ರಶಾಂತ ಎ. ಹಾಗೂ ವಿಸ್ತರಣಾ ಮುಂದಾಳು ಡಾ. ಕಾಂತರಾಜು ವಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.