ಕೃಷಿ ಪರಿಕರ ಮಾರಾಟಗಾರರಿಗೆ ವಿಸ್ತರಣಾ ಸೇವೆಗಳ ತರಬೇತಿ ಶಿಬಿರ ಉದ್ಘಾಟನೆ
ಮೂಡಲಗಿ: ಕೃಷಿ ಪರಿಕರ ಮಾರಟಾಗಾರರು ವ್ಯಾಪಾರ ಮನೋಬಾವ ಬಿಟ್ಟು ಸೇವಾ ಮನೋಬಾವದ ಕಡೆ ತಿರುಗಿ ಮತ್ತು ರೈತರಿಗೆ ಸರಿಯಾದ ಸಲಹೆಗಳನ್ನು ನೀಡಬೇಕು ಮತ್ತು ಆಧುನಿಕತೆ, ಯಾಂತ್ರಿಕತೆಯಿಂದ ಭೂಮಿ ಫಲವತ್ತತೆಯು ಕಡಿಮೆ ಆಗುತ್ತಿದೆ ಆದ್ದರಿಂದ ಮಣ್ಣಿನ ಸಂರಕ್ಷಣೆ ಕಡೆ ಗಮನ ಹರಿಸಿ ಮಣ್ಣಿನ ಫಲವತ್ತತೆಯನ್ನು ಕಾಪಾಡಬೇಕೆಂದು ಎಂದು ತಿಳಿಸಿದರು ಧಾರವಾಡ ಕೃಷಿ ವಿಶ್ವ ವಿದ್ಯಾಲಯ ಪ್ರಾಧ್ಯಪಕರು ಹಾಗೂ ದೇಶಿ ರಾಜ್ಯ ನೋಡಲ್ ಅಧಿಕಾರಿ ಹಾಗೂ ಸಂಯೋಜಕ ಡಾ. ಎಸ್. ಎನ್. ಜಾಧವ ಹೇಳಿದರು.
ತಾಲೂಕಿನ ಅರಬಾವಿ ಕಿತ್ತೂರು ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಕೃಷಿ ಇಲಾಖೆ, ಆತ್ಮಾ ಯೋಜನೆಯ ಆಶ್ರಯದಲ್ಲಿ ಮಂಗಳವಾರ ಜರುಗಿದ ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಗಳ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ದೇಸಿ, ಡಿಪೆÇ್ಲೀಮಾ ಕಾರ್ಯಕ್ರಮವು ಮುಖ್ಯವಾಗಿ ಪರಿಕರ ವಿತರಕರ ಕೃಷಿ ಜ್ಞಾನವನ್ನು ನವೀಕರಿಸುವ ಮತ್ತು ಕೃಷಿ ತಾಂತ್ರಿಕತೆಗಳನ್ನು ವರ್ಗಾಯಿಸುವ ಕಾರ್ಯದಲ್ಲಿ ಪರಿಕರ ವಿತರಕರನ್ನು ‘ಪೂರಕ ವಿಸ್ತರಣಾ ಕಾರ್ಯಕರ್ತರಾಗಿ’ ಬಳಸಿಕೊಳ್ಳುವ ಉದ್ದೇಶವನ್ನು ಹೊಂದಿದೆ. ಕೃಷಿ ಪರಿಕರ ವಿತರಕರನ್ನು ಪೂರಕ ವಿಸ್ತರಣಾ ಕಾರ್ಯಕರ್ತರನ್ನಾಗಿ ಸಿದ್ದಪಡಿಸಿ ರೈತರಿಗೆ ಉತ್ತಮ ಸೇವೆ ನೀಡುವ ಗುರಿ ಹೊಂದಿದೆ ಎಂದರು.
ಅರಬಾವಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕಿ ಲೀಲಾವತಿ ಕೌಜಗೇರಿ ಮಾತನಾಡಿ, ಪರಿಕರ ಮಾರಾಟಗಾರರು ಕ್ಷೇತ್ರ ಮಟ್ಟದಲ್ಲಿ ರೈತರು ಎದುರಿಸುತ್ತಿರುವ ದಿನನಿತ್ಯದ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ವಿವರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅರಬಾವಿ ಕಿತ್ತೂರು ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಎಮ್. ಜಿ. ಕೆರುಟಗಿ ಮಾತನಾಡಿ, ರೈತರ ಜೀವನದ ಆರ್ಥಿಕ ವ್ಯವಸ್ಥೆ ಸುಧಾರಿಸುವಲ್ಲಿ ಕೃಷಿ ಪರಿಕರುಗಳಾದ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಸರಿಯಾದ ಪ್ರಮಾಣ ಹಾಗೂ ಸೂಕ್ತ ಸಮಯದಲ್ಲಿ ಸರಿಯಾದ ನ್ಯಾಯವುತವಾದ ಬೆಲೆಗಳಲ್ಲಿ ಮಾರಲು ಸೂಕ್ತ ಕ್ರಮ ಕೈಗೊಳ್ಳುವುದು ಸುಸ್ಥಿರ ಕೃಷಿಗೆ ನಾಂದಿ ಎಂದ ಅವರು ಪರಿಕರ ಮಾರಾಟಗಾರರು ರೈತರೊಂದಿಗಿನ ನೇರ ಕೊಂಡಿಯಾಗಿದ್ದು, ಇವರ ಪಾತ್ರ ಮುಖ್ಯ ಬಹಳಷ್ಟು ಕೃಷಿ ಮಾಹಿತಿಗಳು ಪರಿಕರ ವಿತರಕರ ವಿಸ್ತರಣಾ ಚಟುವಟಿಕೆಗಳಿಂದ ರೈತರನ್ನು ಮುಟ್ಟಬೇಕಾಗಿದೆ ಎಂದರು
ದೇಸಿ ಸಂಯೋಜಕ ಡಾ. ದಿಲೀಪಕುಮಾರ ಮಸೂತಿ ಅವರು ದೇಸಿ ಕೋರ್ಸ ನಡೆದು ಬಂದ ಹಾದಿ ಹಾಗೂ ಅದರ ಪ್ರಾಮುಖ್ಯತೆ ಬಗ್ಗೆ ಮಾತನಾಡಿದರು. .
ಪ್ರಭಾವತಿ ಅಂಗಡಿ ನಿರೂಪಿಸಿ ವಂದಿಸಿದರು, ದೇಸಿ ವಿದ್ಯಾರ್ಥಿಗಳು ಮತ್ತು ಮಹಾವಿದ್ಯಾಲಯದ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.