Breaking News
Home / Recent Posts / ‘ಪುಣ್ಯಾರಣ್ಯ ಪುಷ್ಪ’ ಸಂಸ್ಮರಣಗ್ರಂಥ ಬಿಡುಗಡೆ; ಶ್ರೀಗಳ ಗದ್ದುಗೆ ಉದ್ಘಾಟನೆ ಅರಭಾವಿ ಲಿಂ.ಸಿದ್ಧಲಿಂಗ ಶ್ರೀಗಳು ಭಕ್ತರೋದ್ಧರಕ್ಕಾಗಿ ಜೀವಿ ಸವಿಸಿದ ಪುಣ್ಯ ಪುರುಷರು’- ತೋಂಟದ ಸಿದ್ಧರಾಮ ಸ್ವಾಮಿಗಳು

‘ಪುಣ್ಯಾರಣ್ಯ ಪುಷ್ಪ’ ಸಂಸ್ಮರಣಗ್ರಂಥ ಬಿಡುಗಡೆ; ಶ್ರೀಗಳ ಗದ್ದುಗೆ ಉದ್ಘಾಟನೆ ಅರಭಾವಿ ಲಿಂ.ಸಿದ್ಧಲಿಂಗ ಶ್ರೀಗಳು ಭಕ್ತರೋದ್ಧರಕ್ಕಾಗಿ ಜೀವಿ ಸವಿಸಿದ ಪುಣ್ಯ ಪುರುಷರು’- ತೋಂಟದ ಸಿದ್ಧರಾಮ ಸ್ವಾಮಿಗಳು

Spread the love

ಮೂಡಲಗಿ ತಾಲ್ಲೂಕಿನ ಅರಭಾವಿಯ ದುರದುಂಡೀಶ್ವರ ಪುಣ್ಯಾರಣ್ಯ ಮಠದ ಲಿಂಗೈಕ್ಯ ಸಿದ್ಧಲಿಂಗ ಸ್ವಾಮಿಗಳ ಪ್ರಥಮ ಪುಣ್ಯಸ್ಮರಣೆಯ ಅಂಗವಾಗಿ ಸಿದ್ದಗೊಳಿಸಿದ್ದ ‘ಪುಣ್ಯಾರಣ್ಯ ಪುಷ್ಪ’ ಸಂಸ್ಮರಣ ಸಂಪುಟವನ್ನು ಗದಂಗ-ಡಂಬಳದ ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಮತ್ತು ಅರಭಾವಿ ಮಠದ ಪೀಠಾಧಿಪತಿ ಗುರುಬಸವಲಿಂಗ ಸ್ವಾಮಿಗಳು ಬಿಡುಗಡೆಗೊಳಿಸಿದರು

ಮೂಡಲಗಿ: ಅರಭಾವಿಮಠದ ಸಿದ್ದಲಿಂಗ ಸ್ವಾಮಿಗಳು ತಮ್ಮ ಜೀವನದುದ್ದಕ್ಕೂ ಭಕ್ತರ ಬಗ್ಗೆ ಅಪಾರ ಪ್ರೀತಿ, ಅನುಕಂಪವನ್ನು ಹೊಂದಿ, ಭಕ್ತರೋದ್ದಾಕ್ಕಾಗಿ ತಮ್ಮ ಜೀವನವನ್ನು ಸವಿಸಿದ ಪುಣ್ಯ ಪುರುಷರಾಗಿದ್ದರು’ ಎಂದು ಗದಗ-ಡಂಬಳದ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಹೇಳಿದರು.
ಗುರುವಾರ ಮೂಡಲಗಿ ತಾಲ್ಲೂಕಿನ ಅರಭಾವಿಯ  ದುರದುಂಡೀಶ್ವರ  ಪುಣ್ಯಾರಣ್ಯ ಮಠದ ಲಿಂಗೈಕ್ಯ ಸಿದ್ಧಲಿಂಗ ಸ್ವಾಮಿಗಳ ಪ್ರಥಮ ಪುಣ್ಯಸ್ಮರಣೆ, ಗದ್ದುಗೆಯ ಉದ್ಘಾಟನೆ ಹಾಗೂ ‘ಪುಣ್ಯಾರಣ್ಯ ಪುಷ್ಪ’ ಸಂಸ್ಮರಣ ಸಂಪುಟ ಬಿಡುಗಡೆ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಅವರು ಭಕ್ತರೆಲ್ಲರೂ ಸದಾ ಸಂತೋಷವಾಗಿರಬೇಕು ಎನ್ನುವುದೇ ಶ್ರೀಗಳ ಪರಮ ಗುರಿಯಾಗಿತ್ತು ಎಂದರು.
ಅರಭಾವಿಯ ಪುಣ್ಯಾರಣ್ಯ ಮಠದ ಪೀಠಾಧಿಪತಿಗಳಾಗಿ 45 ವರ್ಷಗಳವರೆಗೆ ಆದಿ  ದುರದುಂಡೀಶ್ವರರ ಗುರು ಪರಂಪರೆಯನ್ನು ಚಾಚೂ ತಪ್ಪದೆ ನಡೆಸಿಕೊಂಡು ಬಂದಿದ್ದರು. ಶ್ರೀಗಳು ಭೌತಿಕವಾಗಿ ಇಂದು ಇಲ್ಲವಾಗಿದ್ದರು ಸಹ ನಾಡಿನ ಭಕ್ತರ ಹೃದಯದಲ್ಲಿ ಶಾಶ್ವತವಾಗಿ ನೆಲೆ ನಿಂತಿದ್ದಾರೆ ಎಂದರು.
ಸಿದ್ಧಲಿಂಗ ಸ್ವಾಮಿಗಳ ಲಿಂಗೈಕ್ಯರಾದ ಒಂದು ವರ್ಷದ ಒಳಗಾಗಿ ಶ್ರೀಗಳ ಗದ್ದುಗೆಯನ್ನು ನಿರ್ಮಿಸುವುದು ಮತ್ತು ಶ್ರೀಗಳನ್ನು ನೆನಪಿಸುವ ಪುಣ್ಯಾರಣ್ಯ ಪುಷ್ಪ ಸಂಸ್ಮರಣ ಗ್ರಂಥವನ್ನು ತರುವ ಸಂಕಲ್ಪವು ಪವಾಡಸದೃಶ್ಯವಾಗಿ ಇಂದು ಇಡೇರಿದ್ದು ಸಂತೋಷ ತಂದಿದೆ ಎಂದರು.
ಆಪ್ತ ಬರಹಗಳಿಂದ, ಹೃದಯಾಂತರದ ಭಾವನೆಗಳ ಭಕ್ತಿಯ ಬರಹಗಳಿಂದ ರೂಪಗೊಂಡಿರುವ ಸಿದ್ಧಲಿಂಗ ಸ್ವಾಮಿಗಳ ಕುರಿತಾದ ಪುಣ್ಯಾರಣ್ಯ ಪುಷ್ಪ ಸಂಸ್ಮರಣ ಗ್ರಂಥವು ಪವಿತ್ರವಾದ ಗ್ರಂಥವಾಗಿದೆ. ಇದು ಭಕ್ತರ ಮನೆಗೆ ಬೆಳಕು ತರುವ ಗ್ರಂಥವಾಗಿದೆ ಎಂದರು. ಕರ್ನಾಟಕದಲ್ಲಿರುವ ಎಲ್ಲ ಲಿಂಗಾಯಿತ ಮಠಗಳು ಕಾಯಕ, ಶಿಕ್ಷಣ, ದಾಸೋಹ ಮತ್ತು ಸಮಾನತೆಯಂತ ಮೌಲ್ಯಗಳನ್ನು ಬೆಳೆಸುತ್ತಿದ್ದು, ಇಡೀ ದೇಶದಲ್ಲಿ ಧಾರ್ಮಿಕ ಕೇಂದ್ರಗಳಿಗೆ ಲಿಂಗಾಯಿತ ಮಠಗಳು ಮಾದರಿಯಾಗುವಂತಿವೆ ಎಂದು ಅಭಿಪ್ರಾಯಪಟ್ಟರು.
ಸಿದ್ಧಲಿಂಗ ಸ್ವಾಮಿಗಳಂತೆ ಈಗಿರುವ 12ನೇ ಪೀಠಾಧಿಪತಿ ಗುರುಬಸವಲಿಂಗ ಸ್ವಾಮಿಗಳು ಗುರು ಪರಂಪರೆಯನ್ನು ಮುಂದುವರಿಸಿಕೊಂಡು ಹೊರಟಿದ್ದು ಭಕ್ತರ ಪ್ರೀತಿ, ವಿಶ್ವಾಸವನ್ನು ಅನೂಚವಾಗಿ ಗೆದ್ದಿರುವುದು ಸಂತೋಷ ತಂದಿದೆ ಎಂದರು.
ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಶಾಸಕ ಮಹಾಂತೇಶ ಕೌಜಲಗಿ ಅವರು ಸಹ ಮಠದ ಬಗ್ಗೆ ಅಪಾರ ಬಕ್ತಿಯನ್ನು ಇಟ್ಟು ಮಠದ ಎಲ್ಲ ಕಾರ್ಯಗಳಿಗೆ ಸಹಕಾರ ನೀಡುತ್ತಿರುವದು ಶ್ಲಾಘನೀಯವಾಗಿದೆ ಎಂದರು.
ಸಮಾರಂಭದ ನೇತೃತ್ವವಹಿಸಿದ್ದ ಅರಭಾವಿ ಮಠದ ಪೀಠಾಧಿಪತಿ ಗುರುಬಸವಲಿಂಗ ಸ್ವಾಮಿಗಳು ಮಾತನಾಡಿ ಸಿದ್ಧಲಿಂಗ ಸ್ವಾಮಿಗಳ ಪ್ರೀತಿ, ವಾತ್ಸಲ್ಯ, ಅಂತ:ಕರಣ ಬಹಳದ ದೊಡ್ಡದು. ಅವರ ಅಂತ:ಕರಣದಲ್ಲಿ ಮಠದ ಸೇವೆಯನ್ನು ಮಾಡುವ ಭಾಗ್ಯ ನನ್ನದಾಗಿದೆ. ಪೂಜ್ಯರ ಕಾರುಣ್ಯದಲ್ಲಿ ಮುನ್ನಡೆಯುತ್ತೇನೆ ಎಂದರು.
ಕಡಕೋಳದ ವೀರಕ್ತಮಠದ ಸಚ್ಚಿದಾನಂದ ಸ್ವಾಮಿಗಳು, ಬೆಲ್ಲದ ಬಾಗೇವಾಡಿಯ ಶಿವಾನಂದ ಸ್ವಾಮಿಗಳು, ಹುಕ್ಕೇರಿಯ ಶಿವಬಸವ ಸ್ವಾಮಿಗಳು, ಶೇಗುಣಸಿಯ ಡಾ. ಮಹಾಂತ ಪ್ರಭು ಸ್ವಾಮಿಗಳು ಆರ್ಶಿವಚನದ ನುಡಿಗಳನ್ನು ಹೇಳಿದರು.
ಪುಣ್ಯಾರಣ್ಯ ಪುಷ್ಪ ಸಂಸ್ಮರಣದ ಸಂಪಾದಕ ಜಾನಪದ ವಿದ್ವಾಂಸ ಡಾ. ಸಿ.ಕೆ. ನಾವಲಗಿ ಪ್ರಾಸ್ತಾವಿಕ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ನಿವೃತ್ತ ಪ್ರಾದೇಶಿಕ ಆಯುಕ್ತ ಎಂ.ಜಿ. ಹಿರೇಮಠ ಮಾತನಾಡಿದರು.
ಶಿಂಧಿಕುರಬೇಟದ ಬಬಲಾದಿ ಸದಾಶಿವ ಮಠದ ಸ್ವಾಮೀಜಿ, ಬೈಲಹೊಂಗಲದ ಮಹಾಂತೇಶ ಕೌಜಲಗಿ, ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅತಿಥಿಯಾಗಿ ವೇದಿಕೆಯಲ್ಲಿ ಇದ್ದರು.
ಶ್ರೀಗಳ ಗದ್ದುಗೆ ನಿರ್ಮಾಣದ ಶಿಲ್ಪಿ ಮತ್ತು ನಿರ್ಮಾಣಕ್ಕೆ ದೇಣಿಗೆ ನೀಡಿರುವ ಮಹನೀಯರನ್ನು ಮತ್ತು ದಾಸೋಹಿಗಳನ್ನು ಸನ್ಮಾನಿಸಿದರು.
ನಾಡಿನ ವಿವಿಧೆಡೆಯಿಂದ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರೊ. ವೀರಪಾಕ್ಷಿ ನಾಯಿಕ ನಿರೂಪಿಸಿದರು.


Spread the love

About inmudalgi

Check Also

ತಾಯಿಯ ಎದೆ ಹಾಲಿನ ಮಹತ್ವ” ಬಗ್ಗೆ ಜಾಗೃತಿ ಕಾರ್ಯಕ್ರಮ

Spread the love ಮೂಡಲಗಿ : ಮೊದಲ ಹೆರಿಗೆಯ ಬಳಿಕ ತಾಯಂದಿರಿಗೆ ಹಾಲುಣಿಸುವ ಪ್ರಕ್ರಿಯೆ ಬಗ್ಗೆ ತಿಳಿದಿರುವುದಿಲ್ಲ. ಮಕ್ಕಳಿಗೆ ಎದೆಹಾಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ