Breaking News
Home / ಬೆಳಗಾವಿ / ‘ಮನುಷ್ಯನನ್ನು ಗುಣದಿಂದ ಅಳೆಯಬೇಕು ಹೊರತು ದುಡ್ಡು, ಅಧಿಕಾರ, ಅಂತಸ್ತಿನಿಂದಲ್ಲ’- ದುರದುಂಡೀಶ್ವರ ಮಠದ ಪೀಠಾಧಿಪತಿ ಗುರುಬಸವಲಿಂಗ ಸ್ವಾಮಿಜಿ

‘ಮನುಷ್ಯನನ್ನು ಗುಣದಿಂದ ಅಳೆಯಬೇಕು ಹೊರತು ದುಡ್ಡು, ಅಧಿಕಾರ, ಅಂತಸ್ತಿನಿಂದಲ್ಲ’- ದುರದುಂಡೀಶ್ವರ ಮಠದ ಪೀಠಾಧಿಪತಿ ಗುರುಬಸವಲಿಂಗ ಸ್ವಾಮಿಜಿ

Spread the love

‘ಮನುಷ್ಯನನ್ನು ಗುಣದಿಂದ ಅಳೆಯಬೇಕು’

ಮೂಡಲಗಿ: ‘ಮನುಷ್ಯನನ್ನು ಗುಣದಿಂದ ಅಳೆಯಬೇಕು ಹೊರತು ದುಡ್ಡು, ಅಧಿಕಾರ, ಅಂತಸ್ತಿನಿಂದಲ್ಲ’ ಎಂದು ಅರಭಾವಿಯ ದುರದುಂಡೀಶ್ವರ ಮಠದ ಪೀಠಾಧಿಪತಿ ಗುರುಬಸವಲಿಂಗ ಸ್ವಾಮಿಗಳು ಹೇಳಿದರು.
ತಾಲ್ಲೂಕಿನ ಅರಭಾವಿಯ ಜಗದ್ಗುರು ದುರದುಂಡೀಶ್ವರ ಪುಣ್ಯಾರಣ್ಯ ಮಠದಲ್ಲಿ ಮಾಸಿಕ ಶಿವಾನುಭವ ಗೋಷ್ಠಿಯ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ಪ್ರಸ್ತುತ ಸಮಾಜವು ಗುಣವಂತರನ್ನು ಮರೆತು ಅಧಿಕಾರ ಮತ್ತು ಹಣವಂತರಿಗೆ ಬೆಲೆ ಕೊಡುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದರು.
ಇಂದು ಅವಿಭಕ್ತ ಕುಟುಂಬಗಳು ಒಡೆದು ವಿಭಕ್ತ ಕುಟುಂಬಗಳಾಗುತ್ತಿದ್ದು ಇದರಿಂದ ತಂದೆ, ತಾಯಿ, ಸಹೋದರ, ಸಹೋದರಿಯರ ಸಂಬಂಧಗಳು ಕಳಚಿಕೊಳ್ಳುತ್ತಿವೆ ಎಂದರು.
ಸದಲಗಾದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ವಿರೇಶ ಪಾಟೀಲ ‘ಕೌಟುಂಬಿಕ ಮೌಲ್ಯಗಳು’ ವಿಷಯ ಕುರಿತು ಮಾತನಾಡಿ ತಂದೆ, ತಾಯಿ ತಮ್ಮ ಜವಾಬ್ದಾರಿಗಳನ್ನು ಮರೆಯುತ್ತಿರುವುದರಿಂದ ಮಕ್ಕಳ ಭವಿಷ್ಯದಲ್ಲಿ ಏರುಪೇರು ಆಗುತ್ತಲಿದೆ. ಕುಟುಂಬದ ವ್ಯವಸ್ಥೆ ಚೆನ್ನಾಗಿದ್ದರೆ ಮಕ್ಕಳು ಏಳ್ಗೆಯನ್ನು ಕಾಣುವರು ಎಂದರು.
ಘಟಪ್ರಭಾ ಪಿಎಸ್‍ಐ ಎಸ್.ಆರ್. ಕಣವಿ, ಹೆಸ್ಕಾಂಕ ಕಾರ್ಯನಿರ್ವಾಹಕ ಅಭಿಯಂತರು ಮಹೇಶ ಬಾಗಡೆ ಮಾತನಾಡಿದರು.
ಯಲ್ಲಪ್ಪ ಗೌಡರ, ಲಕ್ಷ್ಮಣ ಸಂಗೋಟಿ, ಆನಂದ ಹಣಜಾಗೋಳ ಅವರನ್ನು ಸನ್ಮಾನಿಸಿದರು.
ಅಪ್ಪಾಸಾಹೇಬ ಕುರುಬರ ತಂಡದಿಂದ ಸಂಗೀತ ಕಾರ್ಯಕ್ರಮ ಜರುಗಿತು. ಪ್ರೊ. ವಿ.ಕೆ. ನಾಯಿಕ ನಿರೂಪಿಸಿದರು.


Spread the love

About inmudalgi

Check Also

ಸಾಹಿತಿ ಚಿದಾನಂದ ಹೂಗಾರ ರವರ ಭಟ್ಟಿನೀಯ ಭ್ರಾಂತಿ ಚಿತ್ತ* ಕವನ ಸಂಕಲನ ಲೋಕಾರ್ಪಣೆ

Spread the loveಮೂಡಲಗಿಯ ಚೈತನ್ಯ ಸೊಸೈಟಿಯಲ್ಲಿ ಮೂಡಲಗಿ ತಾಲ್ಲೂಕು ಚುಸಾಪ ಮತ್ತು ಮಲ್ಲಿಕಾರ್ಜುನ ಪ್ರಕಾಶನದಿಂದ ಏರ್ಪಡಿಸಿದ ಚಿದಾನಂದ ಹೂಗಾರ ಅವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ