ಸ.2 ಮತ್ತು3 ರಂದು ಪ್ರವಚನ ಮಂಗಲೋತ್ಸವ
ಮೂಡಲಗಿ: ತಾಲೂಕಿನ ಅಳಿಮಟ್ಟಿ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ಯವಾಗಿ ಒಂದು ತಿಂಗಳ ಕಾಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಕಳೆದ 24 ವರ್ಷಗಳಿಂದ ಪ್ರತಿವರ್ಷ ಶ್ರಾವಣ ಮಾಸದಲ್ಲಿ ಜರಗುತ್ತಿರುವ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಮಂಗಲೋತ್ಸವ ಕಾರ್ಯಕ್ರಮ ಸ.2 ಮತ್ತು 3 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ ಎಂದು ಮಂಡಳಿಯ ಮುರಿಗೆಪ್ಪ ಹುಬ್ಬಳ್ಳಿ ತಿಳಿಸಿದ್ದಾರೆ.
ಸೋಮವಾರ ಸ.2 ರಂದು ರಾತ್ರಿ 10 ಗಂಟೆಗೆ ಭಜನಾ ಕಾರ್ಯಕ್ರಮಜರುಗುವುದು, ಮಂಗಳವಾರ ಸ.3 ರಂದು ಮುಂಜಾನೆ 4 ಗಂಟೆಗೆ ವೇದಮೂರ್ತಿ ಶ್ರೀ ದಾನಯ್ಯ ಶಾಸ್ತ್ರೀಗಳು ಮಠಪತಿ ಅವರ ವೈಧಿಕತ್ವದಲ್ಲಿ ಶ್ರೀ ಬಸವೇಶ್ವರ ಕೃತ್ಯ ಗದ್ದುಗೆಗೆ ರುದ್ರಾಭಿಷೇಕ ಜರುಗುವು. ಮುಂಜಾನೆ 9 ಗಂಟೆಗೆ ಸಕಲ ಮಂಗಲ ವಾದ್ಯಗಳೊಂದಿಗೆ ಕುಂಭೋತ್ಸವ ಹಾಗೂ ಶ್ರೀ ಬಸವೇಶ್ವರ ಪಲ್ಲಕ್ಕಿ ಉತ್ಸವ ಜರುಗುವುದು. ನಂತರ ಜರುಗುವ ಧರ್ಮ ಸಭೆಯಲ್ಲಿ ಮುನ್ಯಾಳ-ಬಾಗೋಜಿಕೊಪ್ಪದ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಶ್ರೀಗಳು, ಬನಹಟ್ಟಿಯ ಶ್ರೀ ಶರಣಬಸವ ಶಿವಾಚಾರ್ಯ ಶ್ರೀಗಳು, ಚಿಮ್ಮಡದ ಶ್ರೀ ಪ್ರಭು ಶ್ರೀಗಳು, ಚಿಪ್ಪಲಕಟ್ಟಿಯ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಶ್ರೀಗಳು, ರಬಕವಿಯ ಶ್ರೀ ಗುರುಸಿದ್ಧೇಶ್ವರ ಶ್ರೀಗಳು ಮತ್ತು ಪ್ರವಚನಕಾರ ರನ್ನಬೆಳಗಲಿಯ ಶ್ರೀ ಸಿದ್ಧರಾಮ ಶಿವಯೋಗಿ ಶ್ರೀಗಳು ಆಶೀವರ್ಚನ ನಿಡುವರು ಹಾಗೂ ಅರಭಾವಿ ಶಾಸಕ ಹಾಗೂ ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಭಾಗವಹಿಸುವರು. ಮಧ್ಯಾಹ್ನ 12ಕ್ಕೆ ಅನ್ನಪ್ರಸಾದ ಜರುಗುವುದು ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.