ಅರಳಿಮಟ್ಟಿಯಲ್ಲಿ ಬಸವೇಶ್ವರ ಕಾರ್ತಿಕೋತ್ಸವ
ಮೂಡಲಗಿ: ತಾಲೂಕಿನ ಅರಳಿಮಟ್ಟಿ ಗ್ರಾಮದಲ್ಲಿ ಫೆ.9 ರಿಂದ 11 ರವರಿಗೆ ಮೂರು ದಿನಗಳ ಕಾಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಬಸವೇಶ್ವರ ಕಾರ್ತಿಕೋತ್ಸವ ಸಮಾರಂಭ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.
ಫೆ.9 ರಂದು ಕಾರ್ತಿಕೋತ್ಸವ ನಿಮಿತ್ಯ ಅರಳಿಮಟ್ಟಿ ಹಾಘೂ ಆರತಿ ಕಡಕಭಾಂವಿ ಅವರಿಂದ ಭಜನಾ ಕಾರ್ಯಕ್ರಮ ಜರುಗುವವು. ಸೋಮವಾರ ಫೆ.10 ರಂದು ಮುಂಜಾನೆ 8ಕ್ಕೆ ಮಹಾಅಭಿಷೇಕ, ಸಾಯಂಕಾಲ ಕಾರ್ತಿಕೋತ್ಸವ, ರಾತ್ರಿ 10ಕ್ಕೆ ಲಕ್ಷ್ಮೇಶ್ವರ ಜೈ ಮಾತೃಭೂಮಿ ನಾಟ್ಯ ಸಂಘದಿಂದ “ಮಗ ಹೊದರು ಮಾಂಗಲ್ಯ ಬೇಕು” ಸಾಮಾಜಿಕ ನಾಟಕ ಪ್ರದರ್ಶನಗೋಳ್ಳುವುದು.
ಮಂಗಳವಾರ ಫೆ.11 ರಂದು ಮಧ್ಯಾಹ್ನ 12ಕ್ಕೆ ಶ್ರೀ ಬಸವೇಶ್ವರ ಪಲ್ಲಕ್ಕಿ ಉತ್ಸವ ಹಾಗೂ ವಿವಿಧ ಕಲಾವಿದರಿಂದ ಕರಡಿ ಮಜಲು ಮತ್ತು ಸಾರವಾಡದ ಶ್ರೀ ಶಕ್ತಿ ಗೊಂಬಿ ಕುಣಿತ , ಖಣಿ ವಾದ್ಯಗಳು ಮತ್ತು ಅನ್ನಪ್ರಸಾದ ಜರುಗಲಿದೆ ದುಂಡಪ್ಪ ಸತ್ತಿಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.