Breaking News
Home / inmudalgi (page 139)

inmudalgi

ಬೆಟಗೇರಿ ಪ್ರೌಢ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಆ.19ರಂದು ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಸಂಭ್ರಮದಿಂದ ಕಾರ್ಯಕ್ರಮ ನಡೆಯಿತು. ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಅವರು, ಭಗವದ್ಗೀತೆ ಮತ್ತು ಮಹಾಭಾರತ ಹಾಗೂ ಶ್ರೀಕೃಷ್ಣನ ತತ್ವ ಸಿದ್ಧಾಂತದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಕೃಷ್ಣನ ಭಾವ ಚಿತ್ರಕ್ಕೆ ಪೂಜೆ ಪುಷ್ಪ ಸಮರ್ಪನೆ ನಡೆಯಿತು. ಪತ್ರಕರ್ತ ಅಡಿವೇಶ ಮುಧೋಳ, ಮೋಹನ ತುಪ್ಪದ, ರಾಕೇಶ ನಡೋಣಿ, ವಿ.ಬಿ.ಬಿರಾದಾರ, ಶುಭಾ.ಬಿ., ಎ.ಬಿ.ತಾಂವಶಿ, ಈಶ್ವರ ಮುನವಳ್ಳಿ, …

Read More »

ಶ್ರೀಕೃಷ್ಣನು ಶಿಷ್ಟರ ರಕ್ಷಕನಾಗಿದ್ದನು: ಕಮಲಾಕ್ಷಿ ನಾಯ್ಕ

ಬೆಟಗೇರಿ:ಶ್ರೀಕೃಷ್ಣನು ಭಗವದ್ಗೀತೆಯ ಮೂಲಕ ಆಧ್ಯಾತ್ಮ ತತ್ವವನ್ನು ಉಪದೇಶಿಸಿದ ಯೋಗಾಚಾರ್ಯ ಎನಿಸಿದ್ದಾನೆ ಎಂದು ಬೆಟಗೇರಿ ಗ್ರಾಮದ ಚೈತನ್ಯ ಗ್ರುಪ್ಸ್‍ನ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಕಮಲಾಕ್ಷಿ ನಾಯ್ಕ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಚೈತನ್ಯ ಗ್ರುಪ್ಸ್‍ನ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಆ.19 ರಂದು ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ಕೃಷ್ಣನ ಸಿದ್ಧಾಂತ ಪ್ರತಿಪಾದನೆ ಬಹಳ ವಿಶಿಷ್ಟವಾಗಿದೆ. ಶ್ರೀಕೃಷ್ಣನು ಶಿಷ್ಟರ ರಕ್ಷಕನಾಗಿದ್ದನು …

Read More »

ಮೂಡಲಗಿ : ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಧರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿಧಾನ ಸ್ಮರಿಸಿ ಗೌರವ ಸಲ್ಲಿಸುವುದರ ಜೊತೆಗೆಅವರ ಕನಸಿನ ಭಾರತವನ್ನು ನನಸು ಮಾಡಲು ಪಣತೋಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಧಾರವಾಡ ಹೈಕೋರ್ಟ ವಕೀಲರಾದಚೇತನ ಲಿಂಬಿಕಾಯಿ ಹೇಳಿದರು. ಅವರು ಮಂಜುನಾಥ ಸೈನಿಕ ತರಬೇತಿಕೇಂದ್ರ ಹಾಗೂ ಎಲ್. ವಾಯ್. ಅಡಿಹುಡಿಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮತ್ತು ಶ್ರೀ ಮಂಜುನಾಥ ಮೊಟಾರಡ್ರೈವ್ಹಿಂಗ ಸ್ಕೂಲ್ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಅಮೃತ ಮಹೋತ್ಸವದಲ್ಲಿ …

Read More »

ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪೆನ್ನು ವಿತರಣೆ

ಮೂಡಲಗಿ: ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಜೊತೆಗೆ ಸರ್ಕಾರಿ ಶಾಲೆಗಳು ಅಭಿವೃದ್ದಿ ಹೊಂದಲು ದಾನಿಗಳ ನೆರವು ಅತ್ಯವಶ್ಯವಾಗಿದೆ ಎಂದು ಯುವ ಮುಖಂಡ ಇಜಾಜ ಆಹ್ಮದ ಕೊಟ್ಟಲಗಿ ಹೇಳಿದರು. ಇಲ್ಲಿನ ಸರ್ಕಾರಿ ಉರ್ದು ಫ್ರೌಡ ಶಾಲೆಯಲ್ಲಿ ಆಜಾದಿಕಾ ಅಮೃತ ಮಹೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ನೋಟಬುಕ್ ಮತ್ತು ಪೆನ್ನು ವಿತರಿಸಿ ಮಾತನಾಡಿದ ಅವರು, ಇದೀಗ ನಮ್ಮ ಸ್ನೇಹಿತ ಬಳಗದೊಂದಿಗೆ ಪಟ್ಟಣದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ,ಕನ್ನಡ ಗಂಡು ಮಕ್ಕಳ ಶಾಲೆ,ಹೆಣ್ಣು ಮಕ್ಕಳ …

Read More »

ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯ- ಪಿಎಸ್ಐ ಹಾಲಪ್ಪ ಬಾಲದಂಡಿ

ಮೂಡಲಗಿ: ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯ, ಮನುಷ್ಯ ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಿ ಇರಬೇಕಾದರೆ ಕ್ರೀಡೆ ಅತಿ ಅವಶ್ಯಕವಾಗಿದೆ ಎಂದು ಮೂಡಲಗಿ ಪಿಎಸ್ಐ ಹಾಲಪ್ಪ ಬಾಲದಂಡಿ ಹೇಳಿದರು. ಅವರು ಮೂಡಲಗಿ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕ್ರೀಡಾ ಇಲಾಖೆ ಬೆಳಗಾವಿ ತಾಲೂಕ ಪಂಚಾಯಿತಿ ಪುರಸಭೆ ಶಿಕ್ಷಣ ಇಲಾಖೆ ಮೂಡಲಗಿ ಶಿಕ್ಷಣ ಸಂಸ್ಥೆ ಮೂಡಲಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮೂಡಲಗಿ ತಾಲೂಕ ಮಟ್ಟದ ದಸರಾ ಕ್ರೀಡಾಕೂಟದ …

Read More »

ನರೇಗಾ ಯೋಜನೆಯಡಿ ರೈತರ ತೋಟದ ರಸ್ತೆಗಳ ಸುಧಾರಣೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಎಲ್ಲ ಗ್ರಾಮ ಪಂಚಾಯತಗಳು ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಿ

  ಗೋಕಾಕ : ರೈತರ ಜಮೀನುಗಳಿಗೆ ಹೋಗುವ ರಸ್ತೆಗಳನ್ನು ಅಭಿವೃದ್ಧಿಪಡಿಸಲು ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯು ಆದೇಶ ಹೊರಡಿಸಿದೆ ಎಂದು ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಮಹಾತ್ಮಾ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಈ ತೋಟದ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಸೂಚಿಸಿದ್ದು, ಒಟ್ಟು ಕಾರ್ಮಿಕ ಆಯವ್ಯಯದ ಶೇ 25 ರ ಮಿತಿಗೆ ಒಳಪಟ್ಟು ರೈತರ ಜಮೀನುಗಳಿಗೆ …

Read More »

ಪಿಜಿ ಹುಣಶ್ಯಾಳ ಗ್ರಾಮದಲ್ಲಿ ಕ್ರೇಜಿ ಯುವಕರ ಕಳಕಳಿಯ ಕಾರ್ಯ: ದೇಶದ ಹೀರೋಗಳಿಗೆ ಸನ್ಮಾನಿಸುವುದೇ ನಿಜವಾದ ಹೀರೋಗಿರಿ: ಶಿವಲಿಂಗ ಸಿದ್ನಾಳ

  ಮೂಡಲಗಿ: ನಾವು ಹೀರೋ ಆಗುವುದು ನಮ್ಮ ಗೆಟಪ್‌ನಿಂದಲೂ ಅಲ್ಲ, ಮೇಕಪ್‌ನಿಂದಲೂ ಅಲ್ಲ, ಸಮಾಜದ ಕಳಕಳಿಯ ಕಾಯಕದಿಂದ ಮಾತ್ರ ಹೀರೋ ಆಗಲು ಸಾಧ್ಯ ಎಂದು ಕೆಎಲ್‌ಇ ಕಾಲೇಜಿನ ಉಪನ್ಯಾಸಕ ಶಿವಲಿಂಗ ಸಿದ್ನಾಳ ಹೇಳಿದರು. ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದಲ್ಲಿ ಶತಮಾನದ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಆಯೋಜಿಸಿದ್ದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಅನ್ನ ಕೊಡುವ …

Read More »

ಚೈತನ್ಯ ಗ್ರಪ್ಸ್‍ನ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಸಡಗರದಿಂದ ನಡೆದ ಸ್ವಾತ್ರಂತ್ರ್ಯ ಅಮೃತ ಮಹೋತ್ಸವ ಸಂಭ್ರಮಾಚರಣೆ

  ಬೆಟಗೇರಿ:ಗ್ರಾಮದ ಚೈತನ್ಯ ಗ್ರಪ್ಸ್‍ನ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಆ.15ರಂದು ನಡೆದ 75ನೇ ವರ್ಷದ ಸ್ವಾತ್ರಂತ್ರ್ಯ ಅಮೃತ ಮಹೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮ ಸಡಗರದಿಂದ ನಡೆಯಿತು. ಉಭಯ ಮಾಧ್ಯಮ ಪ್ರಾಥಮಿಕ ಶಾಲೆಯ ಮಕ್ಕಳು ದೇಶಕ್ಕಾಗಿ ತಮ್ಮ ಬದುಕನ್ನೆ ತ್ಯಾಗಗೈದ ಮಹಾನ್ ವೀರ ಪುರುಷ ಮತ್ತು ಮಹಿಳೆಯರ ರೂಪಕದ ವೇಷಭೂಷಣ ತೊಟ್ಟು ಎಲ್ಲರ ಗಮನ ಸೆಳೆದರು. ತಾಪಂ ಮಾಜಿ ಸದಸ್ಯ ಈರಪ್ಪ ದೇಯಣ್ಣವರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಮಹಾತ್ಮಗಾಂಧೀಜಿ …

Read More »

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ಯ 75 ಸಾಧಕರಿಗೆ ಸನ್ಮಾನ ಅರಭಾವಿ ಮತಕ್ಷೇತ್ರದಲ್ಲಿ ಅಪೂರ್ವ ಸಾಧಕರಿಗೆ ಅರಭಾವಿ ಮತಕ್ಷೇತ್ರ ರತ್ನ ಪ್ರಶಸ್ತಿ ಪ್ರಧಾನ

  ಮೂಡಲಗಿ : ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ದೇಶಾದ್ಯಂತ ಐತಿಹಾಸಿಕ, ಸ್ಮರಣಾತ್ಮಕವಾಗಿ ಆಚರಣೆ ಮಾಡಲಾಗುತ್ತಿದ್ದು, ಕೆಎಮ್‍ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಮಾರ್ಗದರ್ಶನದಲ್ಲಿ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಅದ್ಬುತವಾದ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಸಾಧಕರನ್ನು ಸನ್ಮಾನಿಸು ಕಾರ್ಯ ಶ್ಲಾಘನೀಯ ಎಂದು ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ ಹೇಳಿದರು. ಅರಭಾವಿ ಬಿಜೆಪಿ ಮಂಡಲ ಹಾಗೂ ಶ್ರೀಮತಿ ಭೀಮವ್ವ ಲಕ್ಷ್ಮಣರಾವ ಜಾರಕಿಹೊಳಿ ಮೆಮೊರಿಯಲ್ ಚಾರಿಟೆಬಲ್ ಟ್ರಸ್ಟ್ ಆಶ್ರಯದಲ್ಲಿ ಪಟ್ಟಣದ …

Read More »

75ನೇ ವರ್ಷದ ಸ್ವಾತ್ರಂತ್ರ್ಯ ಅಮೃತ ಮಹೋತ್ಸವ ಸಂಭ್ರಮಾಚರಣೆ

75ನೇ ವರ್ಷದ ಸ್ವಾತ್ರಂತ್ರ್ಯ ಅಮೃತ ಮಹೋತ್ಸವ ಸಂಭ್ರಮಾಚರಣೆ ಬೆಟಗೇರಿ ಪತ್ರೇಪ್ಪನ ತೋಟದ ಕನ್ನಡ ಶಾಲೆಯ ಮಕ್ಕಳಿಂದ ಗಮನ ಸೆಳೆದ ಮಹಾನ್ ವ್ಯಕ್ತಿಗಳ ರೂಪಕಗಳು ಬೆಟಗೇರಿ: ಗ್ರಾಮದ ಪತ್ರೇಪ್ಪನ ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಆ.15ರಂದು ನಡೆದ 75ನೇ ವರ್ಷದ ಸ್ವಾತ್ರಂತ್ರ್ಯ ಅಮೃತ ಮಹೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ದೇಶಕ್ಕಾಗಿ ತಮ್ಮ ಬದುಕನ್ನೆ ತ್ಯಾಗಗೈದ ಮಹಾನ್ ವೀರ ಪುರುಷ ಮತ್ತು ಮಹಿಳೆಯರ ರೂಪಕದ ವೇಷಭೂಷಣವನ್ನು ಇಲ್ಲಿಯ ಶಾಲೆಯ ಮಕ್ಕಳು ತೊಟ್ಟು …

Read More »