Breaking News
Home / inmudalgi (page 145)

inmudalgi

ಗಿರಿಸಾಗರದಲ್ಲಿ ಜೈ ಭವಾನಿ ಕಟ್ಟಡ ಕಾರ್ಮಿಕರು ಮತ್ತು ಇತರೆ ಕಾರ್ಮಿಕ ಕಚೇರಿಯ ಉದ್ಘಾಟನೆ

  ಮೂಡಲಗಿ: ತಾಲೂಕಿನ ಯಾದವಾಡ ಗ್ರಾಮದ ಗಿರಿಸಾಗರದಲ್ಲಿ ಜೈ ಭವಾನಿ ಕಟ್ಟಡ ಕಾರ್ಮಿಕರು ಮತ್ತು ಇತರೆ ಕಾರ್ಮಿಕ ಕಚೇರಿಯ ಉದ್ಘಾಟನಾ ಸಮಾರಂಭವು ಶ್ರೀ ಬಸಲಿಂಗಯ್ಯ ಹಿರೇಮಠ್ (ಪಟ್ಟದೇವರು) ಮತ್ತು ಶ್ರೀ ಶಿವಲಿಂಗಪ್ಪ ಹುಬ್ಬಳ್ಳಿ ಅಜ್ಜನವರ ಸಾನಿಧ್ಯದಲ್ಲಿ ಜರುಗಿತು. ಯಾದವಾಡ ಗ್ರಾಮ ಪಂಚಾಯತ ಸದಸ್ಯ ಕಲ್ಮೇಶ ಗಾಣಿಗಿ ಮಾತನಾಡಿ, ಎಲ್ಲ ಕುಶಲಕರ್ಮಿ ಕಾರ್ಮಿಕರು ತಮ್ಮ ಜೀವನೋಪಾಯಕ್ಕಾಗಿ ಮಳೆ ಬಿಸಿಲೆನ್ನದೆ ತಮ್ಮ ಕಾರ್ಯವನ್ನು ನಿರ್ವಹಿಸುತ್ತಾರೆ ಇಂತಹ ಕಾರ್ಮಿಕರಿಗೆ ಸರಕಾರದಿಂದ ದೊರೆಯುವ ಎಲ್ಲಾ ಸೌಲಭ್ಯವನ್ನು …

Read More »

ಸಮೀರಅಹ್ಮದ ದಬಾಡಿಯವರಿಗೆ “ ಶಿಕ್ಷಣ ಸಾರಥಿ ಪ್ರಶಸ್ತಿ” ಪ್ರಧಾನ

  ಮೂಡಲಗಿ: ಮೂಡಲಗಿ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಸಮೀರಅಹ್ಮದ ದಬಾಡಿಯವರಿಗೆ ಮೈಸೂರಿನ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಇವರು ರಾಜ್ಯ ಮಟ್ಟದ ಉತ್ತಮ ಸಮೂಹ ಸಂಪನ್ಮೂಲ ವ್ಯಕ್ತಿಗಳಿಗೆ ನೀಡುವ “ ಶಿಕ್ಷಣ ಸಾರಥಿ ಪ್ರಶಸ್ತಿ” ಯನ್ನು ತುಮಕೂರಿನ ಉದ್ಧಾನೇಶ್ವರ ಕಲ್ಯಾಣ ಮಂಟಪ ಸಿದ್ಧಗಂಗಾ ಮಠದಲ್ಲಿ ಜರುಗಿದ ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಿದರು. ಈ ಸಂದರ್ಭದಲ್ಲಿ ಕುಣಿಗಲ್ …

Read More »

ಬಹದ್ದೂರಬಂಡಿ ಸಿ.ಆರ್.ಪಿ.ಹನುಮಂತಪ್ಪ. ಶಿಕ್ಷಣ ಸಾರಥಿ ಪ್ರಶಸ್ತಿಗೆ ಆಯ್ಕೆ

ಕೊಪ್ಪಳ: ಬಹದ್ದೂರಬಂಡಿ ಕ್ಲಸ್ಟರನ ಸಿ.ಆರ್.ಪಿ.ಹನುಮಂತಪ್ಪ ಕುರಿ ಅವರಿಗೆ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಮೈಸೂರು ವತಿಯಿಂದ ನೀಡಲಾಗುವ ಶಿಕ್ಷಣ ಸಾರಥಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹನುಮಂತಪ್ಪ ಕುರಿ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷವಾಗಿ ಶಾಲೆ ಬಿಟ್ಟ ಮಕ್ಕಳನ್ನು ಪುನ: ಶಾಲೆಗೆ ಸೇರಿಸುವ,ಕರೋನಾ ಜಾಗೃತಿ,ಮತದಾನ ಜಾಗೃತಿ ಕುರಿತಂತೆ ಸ್ವತ ಸಾಹಿತ್ಯವನ್ನು ರಚನೆ ಮಾಡುವುದರ ಜೊತೆಗೆ ತಾನೇ ಹಾಡುವುದರ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುವುದನ್ನು ಗಮನಿಸಿ ಈ ಪ್ರಶಸ್ತಿ ನೀಡಲಾಗಿದೆ. ಶಿಕ್ಷಣ …

Read More »

ಸರ್ವ ಜನಾಂಗಗಳ ಶಾಂತಿಯ ಪ್ರತೀಕ ಶಾಸಕ ಬಾಲಚಂದ್ರ ಜಾರಕಿಹೊಳಿಯವರು : ಭೂತಪ್ಪ ಗೊಡೇರ

ಗೋಕಾಕ: 2004 ರಿಂದ ಅರಭಾವಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕ್ಷೇತ್ರದ ಎಲ್ಲ ಧರ್ಮಿಯರ ಜನಾಂಗಗಳನ್ನು ಒಂದುಗೂಡಿಸುವ ಮೂಲಕ ಸರ್ವ ಜನಾಂಗಗಳ ಶಾಂತಿಯ ಪ್ರತೀಕರಾಗಿದ್ದಾರೆ ಎಂದು ಪ್ರಭಾಶುಗರ ನಿರ್ದೇಶಕ ಭೂತಪ್ಪ ಗೊಡೇರ ಹೇಳಿದರು. ಶುಕ್ರವಾರದಂದು ಲೋಕೋಪಯೋಗಿ ಇಲಾಖೆಯಿಂದ 3 ಕೋಟಿ ರೂ. ವೆಚ್ಚದ ಉದಗಟ್ಟಿ ಕ್ರಾಸ್‍ದಿಂದ ಉದಗಟ್ಟಿವರೆಗಿನ ರಸ್ತೆ ಕಾಮಗಾರಿ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಾಲಚಂದ್ರ ಜಾರಕಿಹೊಳಿ ಅವರಿಂದ ಅರಭಾವಿ ಕ್ಷೇತ್ರದಲ್ಲಿ ಶಾಂತಿ-ಸಾಮರಸ್ಯ …

Read More »

ಕ್ರೀಡೆಗಳು ದೈಹಿಕ, ಮಾನಸಿಕ ಸ್ಥಿರತೆ ಕಾಪಾಡಿಕೊಂಡು ಆರೋಗ್ಯಯುತ ಜೀವನ ನಡೆಸಲು ಸಹಾಯಕವಾಗುವದು- ಬಿಇಒ ಅಜಿತ ಮನ್ನಿಕೇರಿ

ಮೂಡಲಗಿ: ಸಾಧನೆ ಎನ್ನುವದು ಸಾಧಕನ ಸ್ವತ್ತಾಗಿದೆ. ಯಾವುದೇ ಕ್ಷೇತ್ರವಾಗಿರಲಿ ನಿರಂತರ ಮಾರ್ಗದರ್ಶನ ಸತತ ಪ್ರಯತ್ನ ಪಟ್ಟಾಗ ಮಾತ್ರ ಸಾಧಕರಾಗಿ ಉತ್ತುಂಗಕ್ಕೇರಬಹುದು. ಕ್ರೀಡಾ ಕ್ಷೇತ್ರದಲ್ಲಿಯೂ ವಿದ್ಯಾರ್ಥಿ ದಿಸೆಯಿಂದಲೆ ಕ್ರೀಡೆಗಳನ್ನು ಸವಾಲಾಗಿ ಪರಿಗಣಿಸದೆ ಉತ್ಸಾಹದಿಂದ ಭಾಗವಹಿಸುವಿಕೆ ಮೂಲಕ ದೈಹಿಕವಾಗಿ ಸದೃಢರಾಗುವ ಮೂಲಕ ಮಾನಸಿಕ ಸದೃಢತೆ ಸಾಧಿಸಬೇಕು ಎಂದು ಬಿಇಒ ಅಜಿತ ಮನ್ನಿಕೇರಿ ಹೇಳಿದರು. ಅವರು ಗುರುವಾರ ಪಟ್ಟಣದಲ್ಲಿಯ ಸರಕಾರಿ ಉರ್ದು ಪ್ರೌಢ ಶಾಲೆಯಲ್ಲಿ ಜರುಗಿದ ವಲಯ ಮಟ್ಟದ ಪ್ರೌಢ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ …

Read More »

ರಾಜ್ಯಸಭಾ ಸದಸ್ಯರಾಗಿ ಡಾ. ವಿರೇಂದ್ರ ಹೆಗ್ಗಡೆ ಪ್ರಮಾಣ ವಚನ ಸ್ವೀಕಾರ: ಸಂಸದ ಈರಣ್ಣ ಕಡಾಡಿ ಅಭಿನಂದನೆ

  ಮೂಡಲಗಿ: ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಧರ್ಮಸ್ಥಳದ ಧರ್ಮಾಧಿಕಾರಿ, ಗ್ರಾಮೀಣಾಭಿವೃದ್ಧಿಯ ಹರಿಕಾರ ಪಧ್ಮ ವಿಭೂಷಣ ಡಾ. ಡಿ. ವಿರೇಂದ್ರ ಹೆಗ್ಗಡೆಯವರು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಸಂಸತ ಭವನದಲ್ಲಿ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಭೇಟಿಯಾಗಿ ಶ್ರದ್ದಾಪೂರ್ವಕ ಅಭಿನಂದನೆಗಳನ್ನು ತಿಳಿಸಿದರು. ಗುರುವಾರ ಜು.21 ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ಹೆಗ್ಗಡೆಯವರು ತಮ್ಮ 20 ನೇ ವಯಸ್ಸಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ 21 …

Read More »

ಮೂಲಸೌಕರ್ಯ ಸೌಲಭ್ಯಗಳಿಗೆ 61.82 ಕೋಟಿ ರೂ.ಗಳ ಆರ್ಥಿಕ ಸಹಾಯಕ್ಕೆ ಅನುಮೋದನೆ

ಮೂಡಲಗಿ: ಸಾಗರಮಾಲಾ ಯೋಜನೆಯಡಿ ಕರ್ನಾಟಕದ ಜಲಮಾರ್ಗಗಳಲ್ಲಿ ಪ್ರಯಾಣಿಕರ ಆಸನಗಳ ವ್ಯವಸ್ಥೆ ನಿರ್ಮಾಣ ಮತ್ತು ಮೂಲಸೌಕರ್ಯ ಸೌಲಭ್ಯಗಳಿಗೆ 61.82 ಕೋಟಿ ರೂ.ಗಳ ಆರ್ಥಿಕ ಸಹಾಯವನ್ನು ಅನುಮೋದಿಸಲಾಗಿದೆ ಎಂದು ಕೇಂದ್ರ ಬಂದರಗಳು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು. ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಒಳನಾಡು ಜಲಮಾರ್ಗಗಳ ಮೂಲಕ ಕರ್ನಾಟಕದಲ್ಲಿ ನಾಗರಿಕ ಪ್ರಯಾಣವನ್ನು ಉತ್ತೇಜಿಸಲು ಸರ್ಕಾರ ಕೈಗೊಂಡ ಕ್ರಮಗಳ ಕುರಿತು …

Read More »

ಮಕ್ಕಳು ಸಂಸ್ಕಾರ ರೂಪಿಸುವ ಶಿಕ್ಷಣದ ತತ್ವಗಳನ್ನು ಬೆಳಸಿಕೊಳ್ಳಬೇಕು – ಚಿದಾನಂದ ಹೂಗಾರ

  ಮೂಡಲಗಿ : ಮಕ್ಕಳು ಸಂಸ್ಕಾರ ರೂಪಿಸುವ ಶಿಕ್ಷಣದ ತತ್ವಗಳನ್ನು ಬೆಳಸಿಕೊಳ್ಳಬೇಕು ಕೇವಲ ಪಠ್ಯವಿಷಯಗಳನ್ನು ಮಾತ್ರ ಕಲಿಯದೇ ಪಠ್ಯೇತರ ಮತ್ತು ಸಾಮಾಜಿಕ ಮೌಲ್ಯಗಳನ್ನು ಬೆಳಸುವ ಜ್ಞಾನವನ್ನು ನಿರಂತರವಾಗಿ ಸಂಪಾಧಿಸಿ ಸರಳ ಸಜ್ಜನಿಕೆಯ ವಕ್ತಿತ್ವ ರೂಪಿಸಿಕೊಳ್ಳಬೇಕು. ಸಂಸ್ಕಾರಯುತವಾದ ಶಿಕ್ಷಣ ಆದರ್ಶ ವ್ಯಕ್ತಿಯನ್ನು ನಿರ್ಮಾಣ ಮಾಡುತ್ತದೆ ಅಂತಹ ಶಿಕ್ಷಣ ಪಡೆದುಕೊಂಡು ತಂದೆ ತಾಯಿ ಮತ್ತು ಗುರುಗಳ ಹೆಸರನ್ನು ತರುವಂತಹ ಸಾಧನೆ ಮಾಡಿದಾಗ ಮನುಷ್ಯನ ಜೀವನ ಸ್ವಾರ್ಥಕತೆ ಪಡೆದುಕೊಳ್ಳುತ್ತದೆ ಎಂದು ಶಿವಾಪೂರ (ಹ) ಅಡವಿಸಿದ್ದೇಶ್ವರ …

Read More »

ಕ್ರೆಡಿಟ್ ಗ್ಯಾರಂಟಿ ಯೋಜನೆಯಡಿ 2021-22ನೇ ಸಾಲಿನಲ್ಲಿ 7,17,020 ಫಲಾನುಭವಿಗಳಿಗೆ 56,176 ಕೋಟಿ ರೂ ಬಿಡುಗಡೆಗೆ ಅನುಮೋದನೆ

ಮೂಡಲಗಿ: ಸಾಂಪ್ರದಾಯಿಕ ಕೈಗಾರಿಕೆಗಳ ಉನ್ನತೀಕರಣ ಮತ್ತು ಪುನಶ್ಚೇತನ ನಿಧಿ ಯೋಜನೆಯಡಿ ಕಳೆದ ಮೂರು ವರ್ಷಗಳಲ್ಲಿ 365 ಕ್ಲಸ್ಟರ್‍ಗಳನ್ನು ಅನುಮೋದಿಸಲಾಗಿದೆ ಮತ್ತು ಸುಮಾರು ರೂ.2,09,741 ಕುಶಲಕರ್ಮಿ ಫಲಾನುಭವಿಗಳಿಗೆ 1,025 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ರಾಜ್ಯ ಸಚಿವ ಭಾನು ಪ್ರತಾಪ್ ಸಿಂಗ್ ವರ್ಮಾ ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು. ಸೋಮವಾರ ಜು-18 …

Read More »

ಶ್ರೀ ಸತ್ಯ ಸಾಯಿ ಸೇವಾ ಸಮಿತಿಯಿಂದ ಅನ್ನದಾಸೋಹ

‘ಅನ್ನಸಾಸೋಹವು ಪುಣ್ಯ ಕಾರ್ಯವಾಗಿದೆ’ ಮೂಡಲಗಿ: ಇಲ್ಲಿಯ ಶ್ರೀ ಸತ್ಯ ಸಾಯಿ ಸೇವಾ ಸಮಿತಿಯಿಂದ ಪುರಸಭೆಯ ಆವರಣದಲ್ಲಿ ಅನ್ನದಾಸೋಹ ಮಾಡುವ ಮೂಲಕ ಮಾಸಿಕ ನಾರಾಯಣ ಸೇವಾ ಕಾರ್ಯಕ್ರಮವನ್ನು ಮಾಡಿದರು. ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ‘ಅನ್ನದಾಸೋಹವು ಪವಿತ್ರವಾದ ಕಾರ್ಯವಾಗಿದೆ. ದಾಸೋಹ ಸೇವೆ ಮತ್ತು ದಾಸೋಹದಲ್ಲಿ ಭಾಗವಹಿಸುವುದು ಎರಡೂ ಪುಣ್ಯದ ಕಾರ್ಯವಾಗಿದೆ’ ಎಂದರು. ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಚಂದ್ರು ಪಾಟೀಲ, ಹಿರಿಯ ಆರೋಗ್ಯ …

Read More »