Breaking News
Home / inmudalgi (page 30)

inmudalgi

ಚೈತನ್ಯ ಕೋ.ಆಪ್ ಸೊಸೈಟಿಗೆ ರೂ. 1.53 ಕೋಟಿ ಲಾಭ

ಮೂಡಲಗಿ: ಮೂಡಲಗಿಯ ಚೈತನ್ಯ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸೈಟಿಯು 2022ರ ಮಾರ್ಚ್ ಅಂತ್ಯಕ್ಕೆ ರೂ. 1.53 ಕೋಟಿ ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಸಾಗಿದೆ ಎಂದು ಸೊಸೈಟಿ ಅಧ್ಯಕ್ಷ ತಮ್ಮಣ್ಣ ಕೆಂಚರಡ್ಡಿ ಹೇಳಿದರು. ಶುಕ್ರವಾರದಂದು ಸಂಘದ ಸಭಾ ಭವನದಲ್ಲಿ ಸಂಘದ 2021-22ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಸದ್ಯ ಸೊಸೈಟಿಯು ಬೆಟಗೇರಿ, ಧರ್ಮಟ್ಟಿ, ಯರಗಟ್ಟಿ, ಲೋಕಾಪೂರ, ಮುನ್ಯಾಳ, ಮಂಟೂರಗಳಲ್ಲಿ 6 ಶಾಖೆಗಳನ್ನು ಹೊಂದಿ ಎಲ್ಲ ಶಾಖೆಗಳು ಪ್ರಗತಿಯಲ್ಲಿವೆ. ಬೆಳ್ಳಿ …

Read More »

ಮುಸ್ಲಿಂ ಸಮಾಜದ ಜನರ ದಿಕ್ಕು ತಪ್ಪಿಸುವಂತ ಕೆಲಸ ತಹಶೀಲ್ದಾರ ಮಾಡಿದ್ದಾರೆ : ಶರೀಫ್ ಪಟೇಲ್

ಮೂಡಲಗಿ: ರಾಜ್ಯ ವಕ್ಘ್ ಬೋರ್ಡ ಬೆಂಗಳೂರು ಇವರು ಜು.30ರಂದು ಹೊರಡಿಸಿರುವ ಆದೇಶದನ್ವಯ ಮೂಡಲಗಿಯ ಬಜ್ಮೆ-ಎ-ತೋಹಿದ್ ತಂಜಿಮ ಕಮಿಟಿಯ ಆಡಳತಾಧಿಕಾರಿಯಾನ್ನಾಗಿ ತಹಶೀಲ್ದಾರ ಡಿ ಜಿ ಮಹಾತ್ ಅವರನ್ನು ನೇಮಕ ಮಾಡಿ ಅಧಿಕಾರಯವನ್ನು ವಹಿಸಿಕೊಳ್ಳಲು ಆದೇಶ ನೀಡಿತ್ತು. ಆದರೆ ತಹಶೀಲ್ದದಾರ ಅವರು ಕಮಿಟಿಯ ಸದಸ್ಯರಿಗೆ ನೋಟಿಸಿ ನೀಡದ 7ದಿನದ ಬಳಿಕ ಅಧಿಕಾರವನ್ನು ವಹಿಸಿಕೊಳ್ಳಬೇಕಾದ ತಹಶೀಲ್ದಾರ ಅವರು ನೋಟಿಸಿ ನೀಡಿದ ಮರುದಿನವೇ ಅಧಿಕಾರವನ್ನು ವಹಿಸಿಕೊಂಡಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಕಮಿಟಿಯ ಅಧ್ಯಕ್ಷ ಶರೀಫ್ ಪಟೇಲ್ …

Read More »

ಕಲ್ಲೋಳಿ ಬಸವೇಶ್ವರ ಸೊಸೈಟಿಗೆ ರೂ.2.80 ಕೋಟಿ ಲಾಭ

  ಮೂಡಲಗಿ: ‘ಕಲ್ಲೋಳಿಯ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಸ್ಥೆಯು ಪ್ರಸಕ್ತ ಮಾರ್ಚ ಅಂತ್ಯದಲ್ಲಿ ರೂ. 2.80 ಕೋಟಿ ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಸಾಗಿದೆ” ಎಂದು ಸೊಸೈಟಿಯ ಅಧ್ಯಕ್ಷ ಬಾಳಪ್ಪ ಬಿ. ಬೆಳಕೂಡ ಅವರು ಹೇಳಿದರು. ಕಲ್ಲೋಳಿಯ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಸ್ಥೆಯ 2021-22ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. 2021-22ನೇ ಆರ್ಥಿಕ ವರ್ಷದ ಕೊನೆಯಲ್ಲಿ ಸಂಸ್ಥೆಯು ರೂ. 34.70 ಕೋಟಿ ಠೇವಣಿ ಸಂಗ್ರಹಿಸಿ ರೂ.42.29 …

Read More »

ಸೋಮವಾರದಂದೇ ಮೂಡಲಗಿಯ ರಸ್ತೆ ಕಾಮಗಾರಿಗೆ ಮುಹೂರ್ತ ಫಿಕ್ಸ್ ಒಂದು ಕಿಮೀ ರಸ್ತೆಯನ್ನು ಸುಧಾರಣೆ ಮಾಡಲು ಮುಂದಾದ ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಇಲ್ಲಿಯ ಅಂಬೇಡ್ಕರ್ ವೃತ್ತದಿಂದ ಟಿಪ್ಪು ಸುಲ್ತಾನ್ ವೃತ್ತದವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಬರುವ ಸೋಮವಾರದಂದು ಗುದ್ದಲಿ ಪೂಜೆ ಜರುಗಲಿದೆ. ಗುರುವಾರದಂದು ಹದಿಗೆಟ್ಟ ರಸ್ತೆಯನ್ನು ಪರಿಶೀಲನೆ ಮಾಡಿದ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ ಅವರು, ಶಾಸಕ ಬಾಲಚಂದ್ರ ಜಾರಕಿಕೊಳಿ ಅವರು ತಮ್ಮ ಸ್ವಂತ ವೆಚ್ಚದಲ್ಲಿ ಸುಮಾರು 1.ಕಿ.ಮೀ. ರಸ್ತೆಯನ್ನು ಅಭಿವೃದ್ಧಿ ಮಾಡುವರು. ಇದಕ್ಕಾಗಿ ಸೋಮವಾರವೇ ರಸ್ತೆ ಕಾಮಗಾರಿಗೆ ಮುಹೂರ್ತ ಫಿಕ್ಸ್ ಆಗಿದೆ ಎಂದು ಹೇಳಿದರು. ಮೂಡಲಗಿ ಪಟ್ಟಣದ ಸಾರ್ವಜನಿಕರು ಮತ್ತು …

Read More »

ಆ.28ರಂದು ಅರಳಿಮಟ್ಟಿಯಲ್ಲಿ ಪುರಾಣ ಪ್ರವಚನ ಮಂಗಲೋತ್ಸವ

ಮೂಡಲಗಿ: ತಾಲೂಕಿನ ಅರಳಿಮಟ್ಟಿ ಗ್ರಾಮದಲ್ಲಿ ಕಳೆದ ಒಂದು ತಿಂಗಳಿಂದ ಶ್ರಾವಣ ಮಾಸದ ನಿಮಿತ್ಯವಾಗಿ ಜರುಗುತ್ತಿರುವ ಶ್ರೀ ಬಸವ ದರ್ಶನ ಆಜ್ಞಾತ್ಮಿಕ ಪ್ರವಚನ ಕಾರ್ಯಕ್ರಮ ಲೀಲಾಮೃತ ಆದಾರಿತ ಪುರಾಣ ಪ್ರವಚನ ಕಾರ್ಯಕ್ರಮದ ಮಂಗಲೋತ್ಸವವು ಆ.28 ರವಿವಾರದಂದು ಜರುಗಲಿದೆ. ಆ.28ರಂದು ಬೆಳಗ್ಗೆ 4ಕ್ಕೆ ವೇದಮೂರ್ತಿ ಶ್ರೀ ಅನ್ನಯ್ಯ ಶಾಸ್ತ್ರಿಗಳ ವೈಧಿಕತ್ವದಲ್ಲಿ ಶ್ರೀ ಬಸವೇಶ್ವರ ಗದ್ದುಗೆಗೆ ಮಹಾ ರುದ್ರಾಭಿಷೇಕ ಜರುಗುವುದು, 9ಕ್ಕೆ ಸಕಲ ಮಂಗಲ ವಾದ್ಯಮೇಳದೊಂದಿಗೆ ಕುಂಭೋತ್ಸವ ಹಾಗೂ ಶ್ರೀ ಬಸವೇಶ್ವರ ಪಲ್ಲಕ್ಕಿ ಉತ್ಸವ …

Read More »

‘ಬಣಜಿಗ ಸಮಾಜದ ಸದೃಢಗೋಳಿಸುವುದಕ್ಕಾಗಿ ಸಂಘಟನೆ ಅವಶ್ಯ”

  ಮೂಡಲಗಿ: ‘ಬಣಜಿಗ ಸಮಾಜವನ್ನು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಸದೃಢಗೊಳಿಸುವುದಕ್ಕೆ ಸಮಾಜದ ಸಂಘಟನೆ ಮತ್ತು ಒಗ್ಗಟ್ಟು ಅವಶ್ಯವಿದೆ’ ಎಂದು ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಅಂದಪ್ಪ ಜವಳಿ ಹೇಳಿದರು. ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಮೂಡಲಗಿ ಘಟಕದ 14ನೇ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಬಣಜಿಗ ಸಮಾಜದ ಸಂಘಟನೆಗಳಿಂದ ಸಮಾಜದಲ್ಲಿರುವ ಬಡ ಮತ್ತು ಕಷ್ಟದಲ್ಲಿರುವ ಜನರನ್ನು ಮೇಲೆತ್ತುವ …

Read More »

68 ಕೋಟಿ ರೂ. ರಸ್ತೆ ಕಾಮಗಾರಿಗಳಿಗೆ ಪ್ರಸ್ತಾವಣೆ ಸಲ್ಲಿಕೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಮಾಹಿತಿ

ಗೋಕಾಕ: ಅರಭಾವಿ ಮತಕ್ಷೇತ್ರದ ಎಲ್ಲ 34 ಗ್ರಾಮ ಪಂಚಾಯತಿಗಳಿಗೆ ರೈತರ ತೋಟದ ರಸ್ತೆಗಳ ನಿರ್ಮಾಣಕ್ಕಾಗಿ ನರೇಗಾ ಯೋಜನೆಯಡಿ 16.32 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದೆ ಎಂದು ಅರಭಾವಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ. ಬುಧವಾರ ಸಂಜೆ ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಕ್ಷೇತ್ರದ ಎಲ್ಲ ಗ್ರಾಮ ಪಂಚಾಯತಿಗಳಿಗೆ ತಲಾ 48 ಲಕ್ಷ ರೂ.ಗಳು ಬಿಡುಗಡೆಗೊಂಡಿದ್ದು, ತಕ್ಷಣವೇ ತೋಟದ ರಸ್ತೆಗಳ ಕ್ರಿಯಾ ಯೋಜನೆಗಳನ್ನು ಆಯಾ ಗ್ರಾಮ …

Read More »

ಅಂಬೇಡ್ಕರ್ ಟು ಟಿಪ್ಪು ಸುಲ್ತಾನ್ ಸರ್ಕಲ್, ಕಲ್ಲೇಶ್ವರ ಸರ್ಕಲ್ ಟು ಶಿವಬೋಧರಂಗ ಮಠತನಕ ರಸ್ತೆ ಅಭಿವೃದ್ಧಿ ಶೀಘ್ರ : ಶಾಸಕ ಬಾಲಚಂದ್ರ ಜಾರಕಿಹೊಳಿ

  ಮೂಡಲಗಿ: ಮೂಡಲಗಿ ಪಟ್ಟಣದ ಸಾರ್ವಜನಿಕರ ಕೋರಿಕೆಯ ಮೇರೆಗೆ ಪಟ್ಟಣದ ಅಂಬೇಡ್ಕರ ವೃತ್ತದಿಂದ ಟಿಪ್ಪು ಸುಲ್ತಾನ ವೃತ್ತ ಹಾಗೂ ಕಲ್ಮೇಶ್ವರ ವೃತ್ತದಿಂದ ಶಿವಬೋಧರಂಗ ಮಠದವರೆಗೆ ಸ್ವಂತ ವೆಚ್ಚದಲ್ಲಿ ರಸ್ತೆಗಳನ್ನು ನಿರ್ಮಿಸಿಕೊಡುವುದಾಗಿ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ. ಅಂಬೇಡ್ಕರ ವೃತ್ತದಿಂದ ಟಿಪ್ಪು ಸುಲ್ತಾನ ವೃತ್ತದವರೆಗೆ 9 ಮೀಟರ್ ಅಗಲದ 1 ಕಿ.ಮೀ ವರೆಗಿನ ರಸ್ತೆಯನ್ನು ಇಷ್ಟರಲ್ಲಿಯೇ ಅಭಿವೃದ್ಧಿಪಡಿಸಲಾಗುವುದು. ಕಲ್ಮೇಶ್ವರ ವೃತ್ತದಿಂದ ಮಠದವರೆಗಿನ 500 ಮೀಟರ್ ರಸ್ತೆಯನ್ನು …

Read More »

ಸದ್ಗುರು ಶ್ರೀ ಯಲ್ಲಾಲಿಂಗೇಶ್ವರ ಮಠದ 40ನೇ ವರ್ಷದ ಶ್ರಾವಣ ಮಾಸದ ಪುರಾಣ ಮಹಾಮಂಗಲೋತ್ಸವ ಹಾಗೂ ಜಾತ್ರಾ ಮಹೋತ್ಸವದ ಆಮಂತ್ರಪತ್ರಿಕೆಯನ್ನು ಬಿಡುಗಡೆ  

ಆ.28 ರಂದು ಕಲ್ಲೋಳಿಯಲ್ಲಿ ಯಲ್ಲಾಲಿಂಗೇಶ್ವರ ಮಠದಲ್ಲಿ ಪುರಾಣ ಮಂಗಲೋತ್ಸವ ಕಾರ್ಯಕ್ರಮ ಸ್ವರ್ಣಪೀಠಾಪುರ ದತ್ತಾಶ್ರಮದ ಅವಧೂತ ಶ್ರೀ ವಿನಯ ಗುರೂಜಿ ಭಾಗವಹಿಸುವರು. ಮೂಡಲಗಿ: ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಆ.28 ರವಿವಾರದಂದು ಜರುಗಲಿರುವ ಸದ್ಗುರು ಶ್ರೀ ಯಲ್ಲಾಲಿಂಗೇಶ್ವರ ಮಠದ 40ನೇ ವರ್ಷದ ಶ್ರಾವಣ ಮಾಸದ ಪುರಾಣ ಮಹಾಮಂಗಲೋತ್ಸವ ಹಾಗೂ ಜಾತ್ರಾ ಮಹೋತ್ಸವದ ಆಮಂತ್ರ ಪತ್ರಿಕೆಯನ್ನು ಸಂಘಟಕರು ಮಂಗಳವಾರ ಬಿಡುಗಡೆಗೋಳಿಸಿದರು. ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೋಳಿಸಿದ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪಲಗುದ್ದಿ ಮಾತನಾಡಿ, ಆ.28 …

Read More »

ಭಕ್ತಿಭಾವದಲ್ಲಿ ಜರುಗಿದ ವಿಠ್ಠಲ ಮಂದಿರ ಉತ್ಸವ

ಮೂಡಲಗಿ: ನೂರಾರು ಸಂಖ್ಯೆಯಲ್ಲಿ ವಿವಿಧೆಡೆಯಿಂದ ಆಗಮಿಸಿದ್ದ ಸಂತರು ತಾಳ, ಮೃದಂಗಗಳೊಂದಿಗೆ ಭಜನೆ, ಧ್ಯಾನಗಳ ಮೂಲಕ ಇಲ್ಲಿಯ ವಿಠ್ಠಲ ಮಂದಿರದಲ್ಲಿ ವಾರ್ಷಿಕ ಉತ್ಸವ ಕಾರ್ಯಕ್ರಮವು ನಾಲ್ಕು ದಿನಗಳ ವರೆಗೆ ಭಕ್ತಿಭಾವದಲ್ಲಿ ಜರುಗಿತು. ಪ್ರಾರಂಭದಲ್ಲಿ ಸಂತರಿಂದ ಗ್ರಂಥ ಸ್ಥಾಪನೆ, ಹರಿಪಾಠ, ಪ್ರವಚನ, ಕೀರ್ತನೆಗಳು, ಮಂಗಳಾರತಿ, ದಿಂಡಿ ಉತ್ಸವ, ಗೋಪಾಲ ಕಾಲಾ ಕಾರ್ಯಕ್ರಮಗಳು ಜರುಗಿದವು. ವಿಠ್ಠಲ ದೇವರ ಅಲಂಕೃತ ಪಾಲಕಿ ಉತ್ಸವವು ವಿಠ್ಠಲ ಮಂದಿರದಿಂದ ಪ್ರಾರಂಭಗೊಂಡು ಹಣಮಂತ ದೇವರ ದೇವಸ್ಥಾನಕ್ಕೆ ತೆರಳಿ ಮರಳಿ ವಿಠ್ಠಲ …

Read More »