ಮೂಡಲಗಿ: ಮುಂಗಾರು ಹಂಗಾಮು ಮಳೆ ಬೇಗ ಬರುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆಯಿಂದ ಮುನ್ಸೂಚನೆ ಬಂದಿರುವ ಹಿನ್ನಲೆಯಲ್ಲಿ ಕೃಷಿ ಪರಿಕರ ಮಾರಾಟಗಾರರು ಬೀಜ, ರಸಗೋಬ್ಬರ ಹಾಗೂ ಕೀಟನಾಶಕಗಳನ್ನು ಸರ್ಮಪಕವಾಗಿ ದಾಸ್ತಾನು ಮಾಡಿಕೊಂಡು ಸಕಾಲಕ್ಕೆ ರೈತರಿಗೆ ನಿಗದಿತ ದರಕ್ಕೆ ಮುಟ್ಟುವಂತೆ ಏರ್ಪಾಟು ಮಾಡಿಕೊಳ್ಳಲು ಕೃಷಿ ಇಲಾಖೆಯ ಚಿಕ್ಕೋಡಿ ವಿಭಾಗದ ಉಪಕೃಷಿ ನಿರ್ದೇಶಕ ಎಲ್.ಐ.ರೂಡಗಿ ಅವರು ಕೃಷಿ ಪರಿಕರ ಮಾರಾಟಗಾರರಿಗೆ ಸೂಚಿಸಿದರು. ಶನಿವಾರದಂದು ಘಟಪ್ರಭಾ, ರಾಜಾಪೂರ, ನಾಗನೂರ, ಹಾಗೂ ಮೂಡಲಗಿ ಪಟ್ಟಣ ಕೃಷಿ …
Read More »ಒಂದು ಕೋಟಿ ರೂಪಾಯಿ ಚೆಕ್ ಮುಖ್ಯಮಂತ್ರಿಗಳ ನಿಧಿಗೆ ಹಸ್ತಾಂತರ
ಬೆಂಗಳೂರು : ಇಂದು ಬೆಂಗಳೂರಿನಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪನವರ ಕೃಷ್ಣಾ ಕಚೇರಿಯಲ್ಲಿ ಬೆಳಗಾವಿಯ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್ ವತಿಯಿಂದ ಒಂದು ಕೋಟಿ ರೂಪಾಯಿಗಳ ಚೆಕ್‌ನ್ನು ಮಾಜಿ ಸಚಿವರಾದ ಹಾಗೂ ಶಾಸಕರಾದ ಉಮೇಶ ಕತ್ತಿ, ಕೆಎಂಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಬಿಜೆಪಿ ಕಾರ್ಯಕಾರಣಿ ಸದಸ್ಯರಾದ ಹನುಮಂತ ಕೊಟಬಾಗಿ ಹಾಗೂ ರಾಜೇಂದ್ರ ದೇಸಾಯಿ ನೇತೃತ್ವದಲ್ಲಿ ವಿತರಿಸಲಾಯಿತು.
Read More »ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಪಾಸಿಟಿವ್ ಕೇಸ್ ,73 ಕ್ಕೇರಿದ ಸೊಂಕಿತರ ಸಂಖ್ಯೆ
ಬೆಳಗಾವಿ- ಶನಿವಾರ ಬೆಳಗಿನ ರಾಜ್ಯದ ಹೆಲ್ತ್ ಬುಲಿಟೀನ್ ಬಿಡುಗಡೆ ಆಗಿದೆ ,ಜಿಲ್ಲೆಯಲ್ಲಿ ಇಂದು ಮೊತ್ತೊಂದು ಪಾಸಿಟಿವ್ ಕೇಸ್ ಪತ್ತೆಯಾಗಿದ್ದು ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 73 ಕ್ಕೇರಿದೆ ಹಿರೇಬಾಗೇವಾಡಿಯ ಶಂಕಿತನಿಗೆ ಸೊಂಕು ಇರುವದು ದೃಡವಾಗಿದ್ದು,ಹಿರೇಬಾಗೇವಾಡಿ ಗ್ರಾಮದಲ್ಲಿ ಸೊಂಕಿತರ ಸಂಖ್ಯೆ 37 ಕ್ಕೇರಿದಂತಾಗಿದೆ .
Read More »ಬಾಲಚಂದ್ರ ಜಾರಕಿಹೊಳಿ ಕಲಿಯುಗದ ಕರ್ಣ- ಬಸಗೌಡ ಪಾಟೀಲ
ಮೂಡಲಗಿ: ದಾನಗಳಲ್ಲಿ ಅನ್ನದಾನ ಶ್ರೇಷ್ಠವಾಗಿದ್ದು, ಈ ದಿಸೆಯಲ್ಲಿ ಅರಭಾಂವಿ ಮತ ಕ್ಷೇತ್ರದ ಎಲ್ಲ 76 ಸಾವಿರ ಕುಟುಂಬಗಳಿಗೆ ಆಹಾರ ಧಾನ್ಯ ಕಿಟ್ ಹಂಚುತ್ತಿರುವ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯ ಶ್ಲಾಘನೀಯವಾಗಿದೆ. ಜನರ ಕಷ್ಟಗಳಿಗೆ ಸ್ಪಂದಿಸುತ್ತಿರುವ ಬಾಲಚಂದ್ರ ಜಾರಕಿಹೊಳಿ ಅವರು ಕಲಿಯುಗದ ದಾನ ಶೂರ ಕರ್ಣ ಎಂದು ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ ಹೇಳಿದರು. ತಾಲೂಕಿನ ಕಲ್ಲೋಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಕುಟುಂಬಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು …
Read More »ಜಿಲ್ಲೆಯಲ್ಲಿ ಸಂಜೆ ಬುಲೆಟಿನ್ ತುಸು ಬಿಡುವು ನೀಡಿದೆ.
ಬೆಳಗಾವಿ: ಬೆಳಗ್ಗೆ ಮೂರು ಕೊರೋನಾ ಪ್ರಕರಣ ಕಂಡು ಬಂದಿದ್ದ ಬೆಳಗಾವಿ ಜಿಲ್ಲೆಯಲ್ಲಿ ಸಂಜೆ ಬುಲೆಟಿನ್ ತುಸು ಬಿಡುವು ನೀಡಿದೆ. ಇದುವರೆಗೆ ಒಟ್ಟು 72 ಕೊರೋನ ಪಾಸಿಟಿವ್ ಪ್ರಕರಣ ಕಂಡು ಬಂದಿದೆ. ನಿನ್ನೆ ಒಂದೇ ದಿನ 14 ಪ್ರಕರಣ ಧುತ್ತೆಂದು ಕಂಡು ಬಂದಿದ್ದ ಬೆಳಗಾವಿ ಜಿಲ್ಲೆಯಲ್ಲಿ ಕರೋನ ಮಹಾಮಾರಿ ಹಿರೇಬಾಗೇವಾಡಿ, ಕುಡಚಿ, ಸಂಕೇಶ್ವರ ಮುಂತಾದ ಪ್ರದೇಶಗಳಲ್ಲಿ ಜನತೆಯನ್ನು ಇನ್ನಿಲ್ಲದಂತೆ ಕಂಗೆಡಿಸಿದೆ.
Read More »ಗೇಣುದ್ದ ಹೊಲಕ್ಕಾಗಿ ದಾಯಾದಿ ಜಗಳ ಕೊಲೆಯಲ್ಲಿ ಪರ್ಯಾವಸನಗೊಂಡಿದೆ.
ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಚಿಂತಾಮಣಿ ರಾಮಪ್ಪ ಮೇಟಿ ( 55) ಕೊಲೆಯಾದವರು. ಅವರ ಅಣ್ಣನ ಮಗ ಗೋಪಾಲ ಭೀಮಪ್ಪ ಮೇಟಿ – (35) ಆರೋಪಿ. ಬೆಳೆ ಸಂರಕ್ಷಣೆಗಾಗಿ ಲೈಸನ್ಸ್ ಪಡೆದಿದ್ದ ಬಂದೂಕಿನಿಂದ ಕೊಲೆಗೈಯಲ್ಲಾಗಿದೆ. ಎರಡು ನಳಿಕೆಯ ಬಂದೂಕಿನಿಂದ ನೇರವಾಗಿ ಎದೆಗೆ ಗುಂಡಿಕ್ಕಲಾಗಿದ್ದು, ಎರಡು ಗುಂಡುಗಳು ಎದೆಯೊಳಗೆ ತೂರಿ ಹೋಗಿದೆ. ಚಿಂತಾಮಣಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಿಕಿತ್ಸೆಗಾಗಿ ಗೋಕಾಕ ಸರಕಾರಿ ಆಸ್ಪತ್ರೆಗೆ ಒಯ್ದಾಗ …
Read More »ಬಾಲಚಂದ್ರ ಜಾರಕಿಹೊಳಿ ಅವರ ಪುಣ್ಯದ ಕೆಲಸದಲ್ಲಿ ನಾವೆಲ್ಲರೂ ಭಾಗಿಯಾಗೋಣ-ಮುರನಾಳ
ಮೂಡಲಗಿ: ಲಾಕ್ ಡೌನ್‍ದಂತಹ ಸಂಕಷ್ಟದ ವೇಳೆಯಲ್ಲಿ ಕ್ಷೇತ್ರದ ಜನರ ಸಹಾಯಕ್ಕೆ ಮುಂದೆ ಬಂದು ಅರಭಾಂವಿ ಕ್ಷೇತ್ರದ ಎಲ್ಲ ಕುಟುಂಬಗಳಿಗೆ ದಿನ ನಿತ್ಯದ ಆಹಾರ ಧಾನ್ಯಗಳನ್ನು ನೀಡುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯ ಮಾದರಿಯಾಗಿದೆ. ಇವರು ಮಾಡುತ್ತಿರುವ ಪುಣ್ಯದ ಕೆಲಸದಲ್ಲಿ ನಾವು ಭಾಗಿಯಾಗಿರುವ ಸಾರ್ಥಕದ ಕಾರ್ಯವಾಗಿದೆ ಎಂದು ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ ತಿಳಿಸಿದರು. ಶುಕ್ರವಾರದಂದು ತಾಲೂಕಿನ ನಾಗನೂರ ಪಟ್ಟಣದಲ್ಲಿ ಶಾಸಕ ಮತ್ತು ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು …
Read More »ಬೆಳಗಾವಿಯ 3 ಸೇರಿ ರಾಜ್ಯದಲ್ಲಿ ಇಂದು 11 ಜನರಿಗೆ ಕೊರೋನಾ ಸೋಂಕು
ಬೆಳಗಾವಿ – ರಾಜ್ಯದಲ್ಲಿ ಇಂದು ಹೊಸದಾಗಿ 11 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು ಇವರಲ್ಲಿ ಮಂಡ್ಯದ 8 ಹಾಗೂ ಬೆಳಗಾವಿ ರಾಯಬಾಗದ ಮೂವರು ಸೇರಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಒಟ್ಟೂ ಸೊಂಕಿತರ ಸಂಖ್ಯೆ 576ಕ್ಕೇರಿದೆ. ಬೆಳಗಾವಿಯಲ್ಲಿ 72ಕ್ಕೇರಿದೆ. ರಾಯಬಾಗದ ಮೂವರಿಗೆ ರೋಗಿ ನಂಬರ್ 301ರಿಂದ ಸೋಂಕು ತಗುಲಿದೆ.
Read More »ಬೆಳಗಾವಿಯಲ್ಲಿ ತುಸು ನೆಮ್ಮದಿ ನೀಡಿದ ಕೊರೋನಾ
ಬೆಳಗಾವಿ: ಜಿಲ್ಲೆಯಲ್ಲಿ ಸಂಜೆಯ ಬುಲೆಟಿನ್ ತುಸು ನೆಮ್ಮದಿ ತಂದಿದೆ. ಬೆಳಗ್ಗೆ ಒಟ್ಟು ಹದಿನಾಲ್ಕು ಕರೋನ ಪಾಸಿಟಿವ್ ಪ್ರಕರಣ ಬೆಳಕಿಗೆ ಬಂದಿತ್ತು. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 69 ಪ್ರಕರಣ ಕಂಡು ಬಂದಿದೆ. ಈ ಮೂಲಕ ರಾಜ್ಯದಲ್ಲಿ ತೃತೀಯ ಸ್ಥಾನದ ಕರಾಳ ಪಟ್ಟಿಯಲ್ಲಿದೆ. ಗುರುವಾರ ಒಂದೇ ದಿನ ಇಷ್ಟು ದೊಡ್ಡ ಪ್ರಮಾಣದ ಕರೋನ ಪಾಸಿಟಿವ್ ಕಂಡು ಬಂದಿದ್ದರಿಂದ ಜಿಲ್ಲೆಯ ಜನ ಬೆಚ್ಚಿ ಬಿದ್ದಿದ್ದರು.
Read More »ಸಾರ್ವಜನಿಕರಲ್ಲಿ ಮೂಡಲಗಿ ತಾಲೂಕು ದಂಡಾಧಿಕಾರಿಗಳು ಯಾರು? ಎಂಬ ಅನುಮಾನ…!!
ಮೂಡಲಗಿ ತಾಲೂಕು ದಂಡಾಧಿಕಾರಿಗಳು ಯಾರು? ಸಾರ್ವಜನಿಕರಲ್ಲಿ ಅನುಮಾನ!! ಮೂಡಲಗಿ: ಕೊರೋನಾ ಮಹಾಮಾರಿ ದೇಶವನ್ನೇ ಅಲ್ಲೋಲ ಕಲ್ಲೋಲ ಮಾಡಿದ್ದು ಈ ಸೋಂಕು ಹರಡದಂತೆ ಕೇಂದ್ರ, ರಾಜ್ಯ ಸರ್ಕಾರ ಸಾಕಷ್ಟು ಕಾನೂನುಗಳನ್ನು ಜಾರಿಗೊಳಿಸಿ ಜನರಿಗೆ ಯಾವುದೇ ಕುಂದು ಕೊರತೆ ಬರದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸುಗ್ರೀವಾಜ್ಞೆ ನೀಡಿವೆ. ದೇವರು ವರ ಕೊಟ್ಟರೂ ಪೂಜಾರಿ ವರ ನೀಡಲಿಲ್ಲ ಎಂಬಂತೆ ಮೂಡಲಗಿ ತಾಲೂಕು ದಂಡಾಧಿಕಾರಿಗಳು ಕರ್ತವ್ಯ ನಿರ್ಲಕ್ಷ್ಯದ ಆರೋಪ ಸಾರ್ವಜನಿಕರ ವಲಯದಲ್ಲಿ ವ್ಯಕ್ತವಾಗಿದೆ. ಕಳೆದ ಎರಡು ತಿಂಗಳಿಂದ …
Read More »