Breaking News
Home / inmudalgi (page 351)

inmudalgi

ನಿಜಕ್ಕೂ ಅನ್ನದಾನ ಶ್ರೇಷ್ಠ ದಾನ….

ಮೂಡಲಗಿ; ಇಲ್ಲಿನ ಸ್ಥಳೀಯ ಯುವ ಜೀವನ ಸೇವಾ ಸಂಸ್ಥೆಯ ಅಧ್ಯಕ್ಷ ಈರಪ್ಪ ಢವಳೇಶ್ವರ ಹಾಗೂ ಯುವ ಧುರೀಣ ಹನುಮಂತ ಸತರಡ್ಡಿ ಇವರು ಇಂದು ಕೊರೋನಾ ವೈರಸ್ ನಿಯಂತ್ರಣ ಮತ್ತು ಸಾರ್ವಜನಿಕ ಸುರಕ್ಷತೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಪೋಲೀಸ, ಪುರಸಭೆ, ತಹಸೀಲ್ದಾರ್, ಪತ್ರಕರ್ತ, ಅಗ್ನಿಶಾಮಕ, ಈ ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡಿದ್ದರು. ನಿಜಕ್ಕೂ ಅನ್ನದಾನ ಶ್ರೇಷ್ಠ ದಾನ…... ಇಂತಹ ಸಮಾಜ ಸೇವೆ ಮಾಡುವ ಅವಕಾಶ ಪಡೆದ ಇವರು ಧನ್ಯರು. ….

Read More »

ಟ್ಯಾಂಕರ್ ಮೂಲಕ : ಔಷಧಿ ಸಿಂಪಡಣೆ

ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗ ದರ್ಶನದಲ್ಲಿ ಟ್ಯಾಂಕರ್ ಮೂಲಕ : ಔಷಧಿ ಸಿಂಪಡಣೆ ಮೂಡಲಗಿ ಪಟ್ಟಣದಲ್ಲಿ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗ ದರ್ಶನದಲ್ಲಿ ಆಪ್ತ ಕಾರ್ಯದರ್ಶಿ ನಾಗಪ್ಪ ಶೇಖರಗೊಳ, ಸಿ ಪಿ ಐ ವೆಂಕಟೇಶ ಮೂರನಾಳ, ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ ಕೊರೊನಾ ವೈರಸ್ ತಡೆಗಟ್ಟಲು ಔಷಧಿ ಸಿಂಪಡಣೆಗೆ ಚಾಲನೆ ನೀಡಿದರು. ಔಷಧಿ ಸಿಂಪಡಣೆ ಕಾರ್ಯಕ್ಕೆ ಗೋಕಾಕ ಅಗ್ನಿಶಾಮಕ ಠಾಣಾ ಅಧಿಕಾರಿ ಎ ಬಿ ನದಾಪ್, ಪ್ರಮುಖ ಅಗ್ನಿಶಾಮಕ …

Read More »

ಸೇವಾ ಸಂಸ್ಥೆ .. ಮಾಡಿತು ಸಂತೆಗೆ ವ್ಯವಸ್ಥೆ.

ಸೇವಾ ಸಂಸ್ಥೆ .. ಮಾಡಿತು ಸಂತೆಗೆ ವ್ಯವಸ್ಥೆ. ಮೂಡಲಗಿ; ಇಲ್ಲಿನ ಸ್ಥಳೀಯ ಯುವ ಜೀವನ ಸೇವಾ ಸಂಸ್ಥೆಯು ಕೊರೋನಾ ಸೋಂಕು ಬರದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಸರಕಾರವು ಸೂಚಿಸಿದ ಪ್ರಕಾರ ಒಬ್ಬರಿಂದ ಒಬ್ಬರು ಅಂತರದಲ್ಲಿ ಇರುವ ಹಾಗೆ ಸಂತೆ ನಡೆಸಲು ನಗರದ ಪ್ರಮುಖ ಸ್ಥಳಗಳಲ್ಲಿ, ಗಾಂಧಿ ಚೌಕ, ಲಕ್ಷ್ಮಿ ನಗರದ ಬಿಇಒ ಕಚೇರಿ ಹತ್ತಿರ,ಕೆಇಬಿ ಆಂಜನೇಯ ಸ್ವಾಮಿ ದೇವಸ್ಥಾನ ಹತ್ತಿರ ಹೀಗೆ ಅನೇಕ ಕಡೆ ಸಂತೆ ನಡೆಸಲು ವ್ಯಾಪಾರಿಗಳಿಗೆ ಹಾಗೂ …

Read More »

ಮಾಹಾಮಾರಿ ಕರೋನಾ ವೈರಸ್ ನಿಯಂತ್ರಣಕ್ಕೆ ಮತ್ತು ಸಾರ್ವಜನಿಕರ ಸುರಕ್ಷತೆಗಾಗಿ ಸೇವಾ ನಿರತ ಪೋಲಿಸ್ ಪಡೆಗೆ ಮತ್ತು ಪತ್ರಕರ್ತರಿಗೆ ಇಲ್ಲಿಯ ಆಕಾಶ ಇಲೆಕ್ಟ್ರಾನಿಕ್ ಮಾಲಿಕ,ಯುವಕ ಮೀರಾಸಾಬ ಮುಲ್ಲಾ ಮೂರು ದಿನಗಳಿಂದ ಬಿಸಲೇರಿ ನೀರಿನ ಬಾಟಲಿ, ಮನೆಯಿಂದ ಚಹಾ, ಚೂಡಾ ತಯಾರಿಸಿ ಕೊಡುತ್ತಿದ್ದು “ಇದು ನನ್ನ ಚಿಕ್ಕ ಅಳಿಲು ಸೇವೆ” ಎನ್ನುತ್ತಾನೆ ಈ ಯುವಕ ಇವನಂತೆ ಉಳ್ಳವರು ಇಂತಹ ಸೇವೆ ಮಾಡಲಿ ಎಂದು ಇನ್ ಮೂಡಲಗಿ ತಂಡದ ಆಶಯವಾಗಿದೆ.

Read More »

ಕೊರೊನಾ ಭೀತಿ: ಮೂಡಲಗಿ ಖಾಸಗಿ ವೈದ್ಯರು ಪೊಲೀಸ್ ಅಧಿಕಾರಿಗಳಿಗೆ ಊಟದ ವ್ಯವಸ್ಥೆ ಮಾಡಿ ರಾಜ್ಯ ಸರ್ಕಾರ ನಾಚುವಂತೆ ಮಾಡಿದ್ದಾರೆ

ಕೊರೋನಾ ಭೀತಿ: ನಿರಂತರ ಕರ್ತವ್ಯ ಸೇವೆ ನಿರತರಿಗೆ ಊಟದ ವ್ಯವಸ್ಥೆ; ಮಾನವೀಯತೆಗೆ ಮುನ್ನುಡಿ. ಮೂಡಲಗಿ : ಇತ್ತೀಚೆಗೆ ಮಹಾಮಾರಿ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ತಗೆದುಕೊಂಡು ಕ್ರಮಗಳಿಗೆ ನಗರ ಪ್ರದೇಶ, ಗ್ರಾಮೀಣ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೋಲೀಸ, ಪುರಸಭೆ, ತಹಸೀಲ್ದಾರ್, ಎಲ್ಲ ಸಿಬ್ಬಂದಿ ಹಗಲಿರುಳು ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವುದು ನಮಗೆಲ್ಲ ತಿಳಿದಿರುವ ವಿಷಯವಿದೆ. ಆದರೆ ಇಡೀ ದೇಶವೇ …

Read More »

ಭಾರತ ಲಾಕ್‍ಡೌನ್ ಹಿನ್ನೆಲೆ ಸಾವಳಗಿ ಜಗದ್ಗುರು ಶ್ರೀ ಶಿವಲಿಂಗೇಶ್ವರ ಜಾತ್ರೆ ರದ್ದು

ಭಾರತ ಲಾಕ್‍ಡೌನ್ ಹಿನ್ನೆಲೆ ಸಾವಳಗಿ ಜಗದ್ಗುರು ಶ್ರೀ ಶಿವಲಿಂಗೇಶ್ವರ ಜಾತ್ರೆ ರದ್ದು ಗೋಕಾಕ: ಕೊರೊನಾ ಸೋಂಕು ಭೀತಿಯ ವರ್ತಮಾನ ಕಾಲದ ದುಸ್ಥಿತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿಯಮಾನಕ್ರಮಗಳ ಆಜ್ಞೆಯಂತೆ ಏ. 9ರಿಂದ ಏ. 17ರ ವರೆಗೆ ನಡೆಯಬೇಕಾಗಿದ್ದ ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಹೆಸರಾಗಿರುವ ಸಾವಳಗಿಯ ಜಗದ್ಗುರು ಶ್ರೀ ಶಿವಲಿಂಗೇಶ್ವರ ಜಾತ್ರೆಯನ್ನು ರದ್ದು ಪಡಿಸಲಾಗಿದೆ ಎಂದು ಪೀಠಾಧಿಪತಿ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಾತ್ರೆಯ ಎಲ್ಲ ಧಾರ್ಮಿಕ …

Read More »

ಸುವ್ಯವಸ್ಥೆ ಪಾಲಿಸುತ್ತಿರುವ ಪೋಲಿಸ್ ಸಿಬ್ಬಂದಿಗೆ -ತಂಪು ಪಾನೀಯ ವಿತರಣೆ

ಮೂಡಲಗಿ: ಕರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಏ.14ರ ವರೆಗೆ ಲಾಕ್‍ಡೌನ್ ಘೋಷಿಸಿರುವುದರಿಂದ ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಜನರ ಆರೋಗ್ಯ ಕಾಪಾಡಲು ಕಾನೂನು ಸುವ್ಯವಸ್ಥೆ ಪಾಲಿಸುತ್ತಿರುವ ಪೋಲಿಸ್ ಸಿಬ್ಬಂದಿ, ಆರೋಗ್ಯ ಇಲಾಖೆಯ ವೈದ್ಯಧಿಕಾರಿಗಳು, ಸಿಬ್ಬಂದಿಗಳು, ಆಶಾಕಾರ್ಯಕರ್ತೆಯರಿಗೆ, ಕೆಇಬಿ ನೌಕರರು, ಹಾಗೂ ಪೌರ ಕಾರ್ಮಿಕರಿಗೆ, ಪಟ್ಟಣದ ಗಾರ್ಡನ್ ಅಭಿವೃದ್ದಿ ಸಂಸ್ಥೆಯ ಸದಸ್ಯರು ತಂಪು ಪಾನೀಯ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಸುಧೀರ ನಾಯರ್, ಕಾರ್ಯದರ್ಶಿ ಸುಭಾಸ್ ಗೊಡ್ಯಾಗೋಳ, …

Read More »

ಮೂಡಲಗಿ: ಕೊರೋನಾ ಮಾರಕ ವೈರಸ್‍ದಿಂದ ದೇಶವೇ ಬೆಚ್ಚಿ ಬಿಳಿಸುವಂತೆ ಮಾಡಿದೆ. ಪ್ರತಿಯೊಬ್ಬರಿಗೆ ಅವರ ಜೀವ ಕಾಪಾಡಿಕೊಳ್ಳುವದು ಅತ್ಯವಶ್ಯಕವಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ಹೇಳಿದರು.

ಮೂಡಲಗಿ: ಕೊರೋನಾ ಮಾರಕ ವೈರಸ್‍ದಿಂದ ದೇಶವೇ ಬೆಚ್ಚಿ ಬಿಳಿಸುವಂತೆ ಮಾಡಿದೆ. ಪ್ರತಿಯೊಬ್ಬರಿಗೆ ಅವರ ಜೀವ ಕಾಪಾಡಿಕೊಳ್ಳುವದು ಅತ್ಯವಶ್ಯಕವಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ಹೇಳಿದರು. ಅವರು ಗುರುವಾರ ಮೂಡಲಗಿ ತಾಲೂಕಿನ ಸುಣಧೋಳಿ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ನಿರ್ಧೇಶನದಂತೆ ಗ್ರಾಮೀಣಾಭೀವೃದ್ಧಿ, ಶಿಕ್ಷಣ, ಪೋಲಿಸ್, ಆರೋಗ್ಯ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ಕೊರೋನಾ ಮುಂಜಾಗೃತ ಕ್ರಮಗಳ ಕುರಿತ ಸಭೆಯಲ್ಲಿ ಮಾತನಾಡಿದರು. ದೇಶಕ್ಕೆ ದೇಶವೇ …

Read More »

ಕೊರೊನಾ : ಜನರ ರಕ್ಷಣೆ ಮಾಡುತ್ತಿರುವ ಪೋಲಿಸರಿಗೆ ರಕ್ಷಣೆ ಕೊಡದ ಸರಕಾರ

ಕೊರೊನಾ : ಜನರ ರಕ್ಷಣೆ ಮಾಡುತ್ತಿರುವ ಪೋಲಿಸರಿಗೆ ರಕ್ಷಣೆ ಕೊಡದ ಸರಕಾರ ವಿಶ್ವದಲ್ಲೆಡೆ ಮರಣ ಮೃದಂಗ ಭಾರಿಸುತ್ತಿರುವ ಕೊರೊನಾ ವೈರಸ್ ಹಿನ್ನೆಲೆ ರಾತ್ರಿ ಹಗಲು ಬಿಸಿಲು ಅನ್ನದೆ ತಮ್ಮ ಮನೆ ಬಿಟ್ಟು ದಿನಾಲು ಜನರನ್ನು ರಕ್ಷಣೆ ಮಾಡುತ್ತಿರುವ ಪೋಲಿಸ್ ಅಧಿಕಾರಿಗಳಿಗೆ ಯಾವದೆ ರಕ್ಷಣೆ ಕೂಡಾ ಸರಕಾರ ನೀಡಿಲ್ಲಾ. ಹೌದು ಕೊರೊನಾ ವೈರಸ್ ಬರಿ ಸಾರ್ವಜನಿಕರಿಗೆ ಮಾತ್ರ ಬರುತ್ತಾ ಜನರ ರಕ್ಷಣೆ ಮಾಡುವ ಅಧಿಕಾರಿಗಳಿಗೆ ಬರೋದಿಲ್ವ ಅವರು ಮನುಷ್ಯರು ಅಲ್ವಾ, ಪೊಲೀಸ್ …

Read More »

ಮೂಡಲಗಿ : ಸತ್ಸಂಗ ಸಮ್ಮೇಳನ ರದ್ದು

ಮೂಡಲಗಿ : _ಸತ್ಸಂಗ ಸಮ್ಮೇಳನ ರದ್ದು_ ಮೂಡಲಗಿ ಪಟ್ಟಣದಲ್ಲಿ ಇಂದಿನಿಂದ ಮಾಚ೯ 31 ರವರೆಗೆ ಐದು ದಿನಗಳಕಾಲ ಸಂಪ್ರದಾಯದಂತೆ ಜರುಗ ಬೇಕಿದ್ದ ಸತ್ಸಂಗ ಸಮ್ಮೇಳನವು ಆದರೆ ಜಗತ್ತಿನಲ್ಲಿ ಹರಡಿರುವ ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಸಲುವಾಗಿ ಹಾಗೂ ಕೇಂದ್ರ ಸರ್ಕಾರದ ಆದೇಶ ಪಾಲನೆಗಾಗಿ ಜನರ ಹಿತರಕ್ಷಣೆಗಾಗಿ ಇಂದು ನಡೆಯಬೇಕಿದ್ದ ಕಂಬಿ ಐದೇಶಿ ನಿಮಿತ್ಯವಾಗಿ ಸತ್ಸಂಗ ಸಮ್ಮೇಳನವನ್ನು ರದ್ದು ಮಾಡಲಾಗಿದೆ ಎಂದು ಶಿವಪುತ್ರಯ್ಯಾ ಮಠಪತಿ (ಸ್ವಾಮೀಜಿಗಳು) ತಿಳಿಸಿದ್ದಾರೆ.

Read More »