Breaking News
Home / inmudalgi (page 84)

inmudalgi

ಶ್ರೀಮತಿ ಕೆಂಪವ್ವ ಮಲ್ಲಪ್ಪ ಬೋಳನ್ನವರ ನಿಧನ

ನಿಧನ ವಾರ್ತೆ ಮೂಡಲಗಿ: ತಾಲೂಕಿನ ಹಳ್ಳೂರ ಗ್ರಾಮದ ನಿವಾಸಿ ಶ್ರೀಮತಿ ಕೆಂಪವ್ವ ಮಲ್ಲಪ್ಪ ಬೋಳನ್ನವರ (81) ರವಿವಾರ ರಾತ್ರಿ ನಿಧನರಾದರು. ಮೃತರು ಇಬ್ಬರು ಪುತ್ರ, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲ್ಲಿದ್ದಾರೆ.

Read More »

ಪ್ರಗತಿಪರ ರೈತರಾದ ಹನುಮಂತ ವೆಂಕಪ್ಪ ಜಾಲಿಬೇರಿ ನಿಧನ

ನಿಧನ ವಾರ್ತೆ ಮೂಡಲಗಿ: ತಾಲೂಕಿನ ಢವಳೇಶ್ವರ ಗ್ರಾಮದ ರಡ್ಡಿ ಸಮಾಜದ ಹಿರಿಯರು ಹಾಗೂ ಪ್ರಗತಿಪರ ರೈತರಾದ ಹನುಮಂತ ವೆಂಕಪ್ಪ ಜಾಲಿಬೇರಿ(84) ಸೋಮವಾರ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲ್ಲಿದ್ದಾರೆ. ಮೃತರ ಅಂತ್ಯಕ್ರಿಯೆ ಮಂಗಳವಾರ ಮುಂಜಾನೆ 9 ಘಂಟೆಗೆ ಢವಳೇಶ್ವರ ಗ್ರಾಮದ ಅರಳಿಮಟ್ಟಿ ರಸ್ತೆಯ ತೋಟದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.  

Read More »

ಮೂಡಲಗಿ ಪಟ್ಟಣದ ಈರಣ್ಣ ನಗರದ ವೀರಭದ್ರೇಶ್ವರ ದೇವಸ್ಥಾನದ ಗೋಪುರ ಉದ್ಘಾಟನೆ, ಕಳಸಾರೋಹಣ ಕಾರ್ಯಕ್ರಮವು ಶ್ರೀಗಳ ಅಮೃತ ಹಸ್ತದಿಂದ ಅದ್ದೂರಿ ಜರುಗಿತ

ಮೂಡಲಗಿ : ಪಟ್ಟಣದ ಈರಣ್ಣ ನಗರದ ವೀರಭದ್ರೇಶ್ವರ ದೇವಸ್ಥಾನದ ನೂತನವಾಗಿ ನಿರ್ಮಿಸಿದ ಗೋಪುರ ಉದ್ಘಾಟನೆ, ಕಳಸಾರೋಹಣ ಕಾರ್ಯಕ್ರಮವು ಶ್ರೀಗಳ ಅಮೃತ ಹಸ್ತದಿಂದ ಅದ್ದೂರಿ ಸೋಮವಾರದಂದು ಜರುಗಿತು. ಕಾರ್ಯಕ್ರಮದ ವೇದಿಕೆಯಲ್ಲಿ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಧಾರ್ಮಿಕ ಆಚರಣೆಗಳು ನಮ್ಮ ಸಂಸ್ಕøತಿಯ ಪ್ರತೀಕವಾಗಿವೆ. ಜಾತ್ರಾಮಹೋತ್ಸವಗಳಲ್ಲಿ ಭೇದ-ಭಾವಗಳನ್ನು ಮರೆತು ಎಲ್ಲ ಜನಾಂಗದ ಜನರು ಸೇರಿ ಜಾತ್ರೆಯನ್ನು ಮಾಡುವುದರಿಂದ ನಮ್ಮ ಮಕ್ಕಳಿಗೆ ಸಂಸ್ಕøತಿ, ಸಂಪ್ರದಾಯದ ಅರಿವು ಮೂಡಿಸಿ ಭಾವೈಕ್ಯತೆಯ ಸಂಕೇತವನ್ನು ಸಾರೋಣಾ …

Read More »

ಸವದತ್ತಿ ಯಲ್ಲಮ್ಮ ದೇವಿ ದರ್ಶನ ಪಡೆದ ಶಾಸಕ ಬಾಲಚಂದ್ರ ಜಾರಕಿಹೊಳಿ

ಸವದತ್ತಿ ಯಲ್ಲಮ್ಮ ದೇವಿ ದರ್ಶನ ಪಡೆದ ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ- ಅರಭಾವಿ ಶಾಸಕ ಹಾಗೂ ಕಹಾಮ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ‌ ಅವರು ಸವದತ್ತಿ ಯಲ್ಲಮ್ಮ ದೇವಿ ದರ್ಶನ ಪಡೆದರು. ಸೋಮವಾರದಂದು ಶ್ರೀ ಕ್ಷೇತ್ರ ಸವದತ್ತಿ ಯಲ್ಲಮ್ಮದೇವಿ ದರ್ಶನ ಪಡೆದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ದೀಪಾವಳಿ ಹಬ್ಬದ ನಿಮಿತ್ತ ವಿಶೇಷ ಪೂಜಾ ಕಾರ್ಯಗಳನ್ನು ನೆರವೇರಿಸಿದರು. ನಂತರ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ದೇವಸ್ಥಾನದ ಅರ್ಚಕರು ಸನ್ಮಾನಿಸಿ ಗೌರವಿಸಿದರು. ಈ …

Read More »

ಕನ್ನಡ ಭಾಷೆ, ಸಾಹಿತ್ಯದ ಬಗ್ಗೆ ಮಕ್ಕಳಲ್ಲಿ ಜಾಗೃತ ಮೂಡಿಸಬೇಕಾಗಿದೆ

 ಕನ್ನಡ ಭಾಷೆ, ಸಾಹಿತ್ಯದ ಬಗ್ಗೆ ಮಕ್ಕಳಲ್ಲಿ ಜಾಗೃತ ಮೂಡಿಸಬೇಕಾಗಿದೆ ಮೂಡಲಗಿ: ‘ಕರ್ನಾಟಕ ಏಕೀಕರಣಕ್ಕೆ ಧಾರಾವಾಡದ ವಿದ್ಯಾವರ್ಧಕ ಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಯ ಪ್ರಭಾವವು ಅಪೂರ್ವವಾಗಿದೆ’ ಎಂದು ಮೂಡಲಗಿ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ಹೇಳಿದರು. ತಾಲ್ಲೂಕಿನ ಜೋಕಾನಟ್ಟಿ ಸರ್ಕಾರಿ ಪ್ರೌಢ ಶಾಲೆಯ ಆತಿಥ್ಯದಲ್ಲಿ ಮೂಡಲಗಿ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್‍ವು ಕರ್ನಾಟಕ ಸಂಭ್ರಮ-50 ಅಂಗವಾಗಿ ಏರ್ಪಡಿಸಿದ್ದ ‘ಕನ್ನಡ ಹಬ್ಬ’ ಕಾರ್ಯಕ್ರಮವನ್ನು ಉದ್ಘಾಟಿಸಿ …

Read More »

ಸ್ಥಳೀಯರು ನೀಡುವ ಸಹಕಾರ ಮೆಚ್ಚುವಂತದ್ದಾಗಿದೆ:ಬಸವಂತ ಕೋಣಿ

ಸ್ಥಳೀಯರು ನೀಡುವ ಸಹಕಾರ ಮೆಚ್ಚುವಂತದ್ದಾಗಿದೆ:ಬಸವಂತ ಕೋಣಿ ಬೆಟಗೇರಿ: ಜಗನ್ಮಾತೆ ಶ್ರೀ ದುರ್ಗಾದೇವಿ ಮಹಾನ್ ಶಕ್ತಿ ದೇವತೆಯಾಗಿದ್ದಾಳೆ. ಬೆಟಗೇರಿ ಗ್ರಾಮಸ್ಥರು ದೇವರ ಮೇಲೆವಿಟ್ಟಿರುವ ಭಯ, ಭಕ್ತಿ ಮೆಚ್ಚುವಂತದ್ದಾಗಿದೆ ಎಂದು ಬೆಟಗೇರಿ ತಾಪಂ ಮಾಜಿ ಸದಸ್ಯ ಬಸವಂತ ಕೋಣಿ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ನ.11ರಂದು ನಡೆದ ಸ್ಥಳೀಯ ದುರ್ಗಾದೇವಿ ಜಾತ್ರಾ ಮಹೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿ ಮಾತನಾಡಿ, ಸ್ಥಳೀಯ ಜನರು ಧಾರ್ಮಿಕ ಕಾರ್ಯಗಳಿಗೆ ನೀಡುವ ತನು, …

Read More »

ನವಭಾರತ ಸಾಕ್ಷರತಾ ಕಾರ್ಯಕ್ರಮ

ಮೂಡಲಗಿ: ಸದೃಢ ಭಾರತ ನಿರ್ಮಾಣ ಮಾಡುವಲ್ಲಿ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಸಿ ಸುಶಿಕ್ಷುತ ಸಮಾಜ ನಿರ್ಮಾಣ ಮಾಡಿದಾಗ ಮಾತ್ರ ಸಾಧ್ಯ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜಿ.ಆರ್ ಪತ್ತಾರ ಹೇಳಿದರು. ಅವರು ಸಮೀಪದ ಪಟಗುಂದಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ನವಭಾರತ ಸಾಕ್ಷರತಾ ಕಾರ್ಯಕ್ರಮದಡಿ ಸಾಮಾಜಿಕ ಚೇತನಾ ಕೇಂದ್ರದಲ್ಲಿ ಮಾತನಾಡಿ, ಭಾರತ ದೇಶವು ಜನಸಂಖ್ಯಾಧರಿತವಾಗಿ ವಿಶ್ವದ ಗಮನ ಸೆಳೆಯುತ್ತಿದೆ ಅದರ ಜೊತೆಯಲ್ಲಿ ಸುಶಿಕ್ಷಿತ ಶಿಕ್ಷಣದ ಪ್ರಾಮುಖ್ಯತೆಯಿದೆ. ಅನಕ್ಷರಸ್ಥರನ್ನು ಸಹ ಶಿಕ್ಷಿತರನ್ನಾಗಿಸಿ ಸಾಮಾಜಿಕ …

Read More »

ಬೆಟಗೇರಿ ಗ್ರಾಮದ ದುರ್ಗಾದೇವಿ ಜಾತ್ರಾ ಮಹೋತ್ಸವ

  ಬೆಟಗೇರಿ ಗ್ರಾಮದ ದುರ್ಗಾದೇವಿ ಜಾತ್ರಾ ಮಹೋತ್ಸವ ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ದುರ್ಗಾದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ನ.10ರಿಂದ ನ.11ರವರೆಗೆ ನಡೆಯಲಿದೆ. ನ.10ರಂದು ಬ್ರಾಹ್ಮೀ ಮೂಹೂರ್ತದಲ್ಲಿ ಬೆಳಿಗ್ಗೆ 5 ಗಂಟೆಗೆ ದುರ್ಗಾದೇವಿ ದೇವರ ಗದ್ದುಗೆಗೆ ಅಭಿಷೇಕ, ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದ ಬಳಿಕ ಸಾಯಂಕಾಲ 5 ಗಂಟೆಗೆ ಪುರದೇವರುಗಳ ಪಲ್ಲಕ್ಕಿಗಳನ್ನು ಬರಮಾಡಿಕೊಳ್ಳುವದು ನಂತರ ಎಲ್ಲಲಾ ದೇವರುಗಳಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ. ನ.11ರಂದು ಬೆಳಗ್ಗೆ 6 ಗಂಟೆಗೆ …

Read More »

ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಂದ ಅಸಹಕಾರ ಚಳುವಳಿ

ಮೂಡಲಗಿ ತಾಲ್ಲೂಕಾ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಸಂಘದ ಪದಾಧಿಕಾರಿಗಳು ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಬುಧವಾರ ಅಸಹಕಾರ ಚಳುವಳಿ ಮಾಡಿ ತಾಲ್ಲೂಕು ಪಂಚಾಯ್ತಿ ಇಒ ಎಫ್.ಎಸ್. ಚಿನ್ನನವರ ಅವರಿಗೆ ಮನಿವಿ ನೀಡಿದರು ———————————————– ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಂದ ಅಸಹಕಾರ ಚಳುವಳಿ ಮೂಡಲಗಿ: ರಾಜ್ಯದ ಎಲ್ಲಾ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಪ್ರಮುಖ ಬೇಡಿಕೆಗಳಾದ ಪಿಡಿಒ ಅವರ ರಾಜ್ಯ ಮಟ್ಟದ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಬೇಕು ಸೇರಿದಂತೆ ಹಲವು ಬೇಡಿಕೆಗಳಿಗೆ ಒತ್ತಾಯಿಸಿ ಮೂಡಲಗಿ …

Read More »