Breaking News
Home / Recent Posts / ಬನವಾಸಿ ಶ್ರೀ ಉಮಾಮಧುಕೇಶ್ವರ ದೇವಾಸ್ಥಾನದಲ್ಲಿ ಭಕ್ತ ಸಾಗರ

ಬನವಾಸಿ ಶ್ರೀ ಉಮಾಮಧುಕೇಶ್ವರ ದೇವಾಸ್ಥಾನದಲ್ಲಿ ಭಕ್ತ ಸಾಗರ

Spread the love

ಬನವಾಸಿ ಶ್ರೀ ಉಮಾಮಧುಕೇಶ್ವರ ದೇವಾಸ್ಥಾನದಲ್ಲಿ ಭಕ್ತ ಸಾಗರ

ಬನವಾಸಿ: ಬನವಾಸಿಯ ಶ್ರೀ ಉಮಾಮಧುಕೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿಯ ನಿಮಿತ್ಯ ಶ್ರೀ ಉಮಾಮಧುಕೇಶ್ವರ ಲಿಂಗಕ್ಕೆ ವಿಷೇಶ ಅಲಂಕಾರ, ಪೂಜಾ ಕಾರ್ಯಕ್ರಮಗಳು ನೇರವೇರಿತು. ದೇವಸ್ಥಾನದ ಅರ್ಚಕರಿಂದ ಬೆಳ್ಳಿಗ್ಗೆ 6 ಗಂಟೆಯಿಂದ ರಾತ್ರಿ 8ಗಂಟೆವರೆಗೆ ವಿಷೇಶ ಪೂಜೆ, ಕೀರ್ತನೆಗಳು ಜರುಗಿದವು. ಪ್ರತಿ ವರ್ಷದಂತೆ ಬೆಳ್ಳಿಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಶ್ರೀ ಮಧುಕೇಶ್ವರ ಸ್ವಾಮಿಯ ಗರ್ಭಗುಡಿಯೊಳಗೆ ಭಕ್ತಾದಿಗಳಿಗೆ ಮುಕ್ತ ಪ್ರವೇಶ ನೀಡಲಾಗಿತ್ತು. ಭಕ್ತರು ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಸಕಲ ಲೋಕಕ್ಕೂ ದೇವನಾಗಿರುವ ಶಿವನನ್ನು ಧ್ಯಾನಿಸುತ್ತ ತಾವು ತಂದ ಬಿಲ್ವಪತ್ರೆಯನ್ನು ಶಿವಲಿಂಗಕ್ಕೆ ಅರ್ಪಿಸಿ ನೀರು, ಹಾಲು ಹಣ್ಣು ಎಳನೀರುಗಳಿಂದ ಅಭಿಷೇಕ ಮಾಡಿ ಶಿವಲಿಂಗವನ್ನು ಸ್ಪರ್ಶಿಸಿ ದರ್ಶನಗೈದು ಪುನೀತರಾದರು.
ಮಧ್ಯಾಹನ 3ಗಂಟೆಯಿಂದ ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿ ಹಾಗೂ ಸ್ಥಳೀಯ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಹಾ ಶಿವರಾತ್ರಿಯ ದಿನವಾದ ಗುರುವಾರ ಶ್ರೀ ಉಮಾಮಧುಕೇಶ್ವರ ದೇವಸ್ಥಾನಕ್ಕೆ ಭಕ್ತಸಾಗರವೇ ಹರಿದು ಬಂದು ಶಿವನ ದರ್ಶನಗೈದು ಭಕ್ತಿ ಮೆರೆದರು. ತಹಶೀಲ್ದಾರ ಎಂ.ಆಯ್ ಕುಲಕರ್ಣಿ ಮಾರ್ಗದರ್ಶನದಲ್ಲಿ ತಾಲೂಕು ಆಡಳಿತದಿಂದ ಹಾಗೂ ಪೋಲಿಸ್ ಇಲಾಖೆಯವರಿಂದ ಭಕ್ತರಿಗೆ ಯಾವುದೇ ಗೊಂದಲವಾಗದೇ ಶಾಂತತೆಯಿಂದ ದರ್ಶನ ವ್ಯವಸ್ಥೆ ಕಲ್ಪಿಸಲಾಗಿತ್ತು. ಸ್ಥಳೀಯ ಸಂಘ ಸಂಸ್ಥೆಗಳು ಭಕ್ತಾದಿಗಳಿಗೆ ಅಲ್ಪೋಪಹಾರ, ತಂಪು ಪಾನೀಯ ವಿತರಿಸಿ ಭಕ್ತಿ ಮೆರೆದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ