ಬನವಾಸಿ: ಸಮಾಜದಲ್ಲಿ ಪ್ರತಿಯೊಬ್ಬರು ನೆಮ್ಮದಿಯಿಂದ ಬದುಕಬೇಕಾದರೆ ಮನೆ ಮನಸ್ಸುಗಳ ಜೊತೆಗೆ ಧಾರ್ಮಿಕ ಕೇಂದ್ರಗಳು ಸ್ವಚ್ಛವಾಗಿರಬೇಕಾಗಿದ್ದು ಅನಿವಾರ್ಯ ಎಂದು ಶ್ರೀ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆಯ ಬನವಾಸಿ ವಲಯ ಮೇಲ್ವೀಚಾರಕ ಉಮೇಶ ಹೇಳಿದರು.
ಅವರು ಶ್ರೀ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆಯಿಂದ ಬುಧವಾರ ಹಮ್ಮಿಕೊಂಡಿದ್ದ ಶ್ರದ್ದಾ ಕೇಂದ್ರಗಳ ಸ್ವಚ್ಚತಾ ಕಾರ್ಯಕ್ರಮದಲ್ಲಿ ಉಂಚಳ್ಳಿಯ ಲೋಕನಾಥೇಶ್ವರ ದೇವಸ್ಥಾನ ಸ್ವಚ್ಚಗೊಳಿಸಿ ಮಾತನಾಡುತ್ತ, ಧರ್ಮಸ್ಥಳಕ್ಕೆ ಸ್ವಚ್ಚ ಧಾರ್ಮಿಕ ನಗರಿ ಎಂಬ ಪ್ರಶಸ್ತಿ ಲಭಿಸಿದ ವರುಷದಿಂದ ಪೂಜ್ಯರ ಆಶಯದಂತೆ ಗ್ರಾಮದ ಎಲ್ಲಾ ಶ್ರದ್ದಾ ಕೇಂದ್ರಗಳನ್ನು ಗ್ರಾಮಭಿವೃದ್ದಿ ಯೋಜನೆಯಿಂದ ಸ್ವಚ್ಚಗೊಳಿಸಲಾಗುತ್ತಿದೆ. ಸಾಮೂಹಿಕವಾಗಿ ನಡೆಯುವ ಇಂತಹ ಕಾರ್ಯಕ್ರಮಗಳಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಈ ರೀತಿಯ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಸೇವಾ ಪ್ರತಿನಿಧಿ ಗಂಗಾಧರ್, ಒಕ್ಕೂಟದ ಅಧ್ಯಕ್ಷ ಪ್ರಶಾಂತ ಮತ್ತು ಶ್ರೀ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆಯ ಸದಸ್ಯರು ಇದ್ದರು.
