Breaking News
Home / ಬೆಳಗಾವಿ / *ಭಾರತಕ್ಕೆ ಚಾಂಪಿಯನ್ ಟ್ರೋಫಿ – ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಿನಂದನೆ*

*ಭಾರತಕ್ಕೆ ಚಾಂಪಿಯನ್ ಟ್ರೋಫಿ – ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಿನಂದನೆ*

Spread the love

*ಭಾರತಕ್ಕೆ ಚಾಂಪಿಯನ್ ಟ್ರೋಫಿ – ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಿನಂದನೆ*

ಬೆಂಗಳೂರು: ದುಬೈನಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ವಿರುದ್ಧ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಅಭೂತಪೂರ್ವ ಗೆಲುವು ದಾಖಲಿಸಿ ಚಾಂಪಿಯನ್ ಕಿರೀಟ್ ಧರಿಸಿರುವುದಕ್ಕೆ ಅರಭಾವಿ ಶಾಸಕ ಮತ್ತು ಕಹಾಮ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರು ಹರ್ಷ ವ್ಯಕ್ತಪಡಿಸಿ, ಟೀಂ ಇಂಡಿಯಾವನ್ನು ಅಭಿನಂದಿಸಿದ್ದಾರೆ.
ಈ ಮೂಲಕ ಒಟ್ಟು ಮೂರು ಬಾರಿ ಚಾಂಪಿಯನ್ ಟ್ರೋಫಿ ಪಡೆದಿರುವ ಭಾರತವು ವಿಶ್ವದ ಮೊದಲ ತಂಡವಾಗಿದೆ.
ಭಾನುವಾರದಂದು ದುಬೈ ಕ್ರೀಡಾಂಗಣದಲ್ಲಿ ಜರುಗಿದ ಕಿವಿಸ್ ಎದುರು ಫೈನಲ್ ಫೈಟ್ ನಲ್ಲಿ ಕೊನೆಗೂ ಕಿವೀಸ್ ವಿರುದ್ಧ ಗೆಲ್ಲುವ ಮೂಲಕ ಭಾರತ ಚಾಂಪಿಯನ್ ಪಟ್ಟಕ್ಕೇರಿತು. ಈ ಮೂಲಕ ಕಳೆದ ೨೫ ವರ್ಷಗಳ ಹಿಂದಿನ ಸೇಡು ತೀರಿಸಿಕೊಂಡಿದೆ.
ಅಲ್ಲದೇ ಈ ಚಾಂಪಿಯನ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತವು ಒಂದೂ ಪಂದ್ಯವನ್ನು ಸೋಲದೇ ಅಜೇಯವಾಗಿ ಫೈನಲ್ ಪ್ರವೇಶ ಮಾಡಿ ಕಿವೀಸ್ ವಿರುದ್ಧ ೪ ವಿಕೆಟ್ ಗೆಲುವು ಪಡೆದುಕೊಂಡಿತು.
ಟೀಂ ಇಂಡಿಯಾ ಹೊಸ ಚಾಂಪಿಯನ್ ಆಗುತ್ತಿದ್ದಂತೆಯೇ ದೇಶಾದ್ಯಂತ ಸಂಭ್ರಮ ಮುಗಿಲು ಮುಟ್ಟಿದೆ.
ಪಟಾಕಿ ಸಿಡಿಸಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.


Spread the love

About inmudalgi

Check Also

ಫೆ. 19ರಿಂದ ಹೊನಕುಪ್ಪಿ ಚಂದ್ರಮ್ಮಾದೇವಿ ಜಾತ್ರೆ

Spread the loveಮೂಡಲಗಿ: ‘ಮೂಡಲಗಿ ತಾಲ್ಲೂಕಿನ ಹೊನಕುಪ್ಪಿಯ ಚಂದ್ರಮ್ಮಾದೇವಿ ಜಾತ್ರೆಯು ಫೆ. 19ರಿಂದ ಫೆ. 23ರ ವರೆಗೆ ಜರುಗಲಿದ್ದು, ಜಾತ್ರೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ