Breaking News
Home / Recent Posts / ‘ಬಸವೇಶ್ವರರ ಕಾಯಕ ತತ್ವವು ಸರ್ವಕಾಲಿಕವಾಗಿದೆ’ – ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಷ ಜಿ. ಢವಳೇಶ್ವರ

‘ಬಸವೇಶ್ವರರ ಕಾಯಕ ತತ್ವವು ಸರ್ವಕಾಲಿಕವಾಗಿದೆ’ – ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಷ ಜಿ. ಢವಳೇಶ್ವರ

Spread the love

‘ಬಸವೇಶ್ವರರ ಕಾಯಕ ತತ್ವವು ಸರ್ವಕಾಲಿಕವಾಗಿದೆ’ – ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಷ ಜಿ. ಢವಳೇಶ್ವರ

ಮೂಡಲಗಿ: ಮಂಗಳವಾರ ಬಸವ ಜಯಂತಿಯ ಅಂಗವಾಗಿ ಶೃಂಗಾರಗೊಳಿಸಿದ್ದ ಜೋಡೆತ್ತುಗಳ ಮೆರವಣಿಗೆಯು ಗಮನಸಳೆಯಿತು. ಎತ್ತುಗಳಿಗೆ ಗುಲಾಲು, ಕೋಡುಗಳಿಗೆ ಬಣ್ಣ ಬಣ್ಣದ ರಿಬ್ಬನ್, ಬಲೂನ್ ಹಾಗೂ ಮೈಮೇಲೆ ಕಸೂತಿಯ ವಸ್ತ್ರಗಳಿಂದ ಎತ್ತುಗಳು ಆಕರ್ಷಕವಾಗಿ ಕಾಣುತ್ತಿದ್ದವು.


ಇಲ್ಲಿಯ ಬಸವೇಶ್ವರ ಕಲ್ಯಾಣ ಮಂಟಪ ಸಮಿತಿ, ವೀರಶೈವ ಲಿಂಗಾಯತ ಮತ್ತು ರಾಷ್ಟ್ರೀಯ ಬಸವ ದಳದ ಆಶ್ರಯದಲ್ಲಿ ಬಸವ ಜಯಂತಿಯನ್ನು ಸಂಭ್ರಮದಿಂದ ಅಚರಿಸಿದರು.
ಬಸವೇಶ್ವರ ಕಲ್ಯಾಣ ಮಂಟಪದ ಬಳಿಯಲ್ಲಿ ಎತ್ತುಗಳಿಗೆ ಪೂಜೆ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಿದ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹಾಗೂ ಸಂಘಟನಾ ಸಮಿತಿ ಅಧ್ಯಕ್ಷರೂ ಆಗಿರುವ ಸುಭಾಷ ಜಿ. ಢವಳೇಶ್ವರ ಮಾತನಾಡಿ ‘ಒಕ್ಕುಲತ ಹಿನ್ನೆಲೆ ಇರುವ ಮೂಡಲಗಿಯಲ್ಲಿ ಬಸವ ಜಯಂತಿಯಂದ ಎತ್ತುಗಳ ಮೆರವಣಿಗೆಯನ್ನು ಮಾಡುವುದನ್ನು ಪೂರ್ವಜರು ನಡೆಸಿಕೊಂಡು ಬಂದಿದ್ದಾರೆ. ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೊರಟಿರುವೆವು. ಇದು ಬಸವೇಶ್ವರರ ಕಾಯಕ ತತ್ವವನ್ನು ಬಿಂಬಿಸುತ್ತದೆ. ಕಾಯಕ ತತ್ವವು ಸರ್ವಕಲಾಕಿವಾಗಿದೆ’ ಎಂದರು.


25 ಕ್ಕೂ ಅಧಿಕ ಸಂಖ್ಯೆಯಲ್ಲಿ ಶೃಂಗರಿಸಿ ಜೋಡಿ ಎತ್ತುಗಳು ಮೆರವಣಿಗೆಯಲ್ಲಿ ಇದ್ದವು. ಮೆರವಣಿಗೆಯ ಪೂರ್ವದಲ್ಲಿ ಬಸವೇಶ್ವರ ದೇವಸ್ಥಾನದಲ್ಲಿ ಮಹಿಳೆಯರು ಬಸವೇಶ್ವರರ ತೊಟ್ಟಿಲೋತ್ಸವವನ್ನು ನೆರವೇರಿಸಿದರು.

ಶ್ರೀಶೈಲ್ ಹಿರೇಮಠ ತೊಟ್ಟಿಲೋತ್ಸವ ಪೂಜೆ ನೆರವೇರಿಸಿದರು.
ಬಸವೇಶ್ವರರ ಜಯಂತಿ ಹಾಗೂ ಮೆರವಣಿಗೆಯಲ್ಲಿ ಮುಸ್ಲಿಂ ಸಮಾಜದವರು ಭಾಗವಹಿಸಿದ್ದರಿಂದ ಬಸವ ಜಯಂತಿಯು ಸಾರಮಸ್ಯಕ್ಕೆ ಸಾಕ್ಷಿಯಾಯಿತು.
ಆರ್ಚಕ ಈರಯ್ಯ ಹಿರೇಮಠ, ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಕೆ.ಟಿ. ಗಾಣಿಗೇರ, ಭೀಮಪ್ಪ ಗಡಾದ, ರುದ್ರಪ್ಪ ವಾಲಿ, ಬಸವರಾಜ ಪಾಟೀಲ, ಆರ್.ಪಿ. ಸೋನವಾಲಕರ, ಶಂಕರಯ್ಯ ಹಿರೇಮಠ, ಬಿ.ವೈ. ಶಿವಾಪುರ, ಪಂಚಯ್ಯ ಹಿರೇಮಠ, ರವೀಂದ್ರ ಸಣ್ಣಕ್ಕಿ, ಅಜೀಜ್ ಡಾಂಗೆ, ರಮೇಶ ಸಣ್ಣಕ್ಕಿ, ಅನ್ವರ ನಧಾಪ, ಮರೆಪ್ಪ ಮರೆಪ್ಪಗೋಳ, ಮಲ್ಲು ಢವಳೇಶ್ವರ, ಬಸವರಾಜ ತೇಲಿ, ಶಂಕರ ತಾಂವಸಿ, ಡಾ. ಎಸ್.ಎಸ್. ಪಾಟೀಲ, ಡಾ. ಅನಿಲ ಪಾಟೀಲ, ಡಾ. ಬಸವರಾ ಪಾಲಬಾವಿ, ಮಲ್ಲಿಕಾರ್ಜುನ ಜಕಾತಿ, ಗಿರೀಶ ಢವಳೇಶ್ವರ, ರಮೇಶ ಬಂಗೆನ್ನವರ, ಈರಪ್ಪ ಬನ್ನೂರ, ಸಂಗಪ್ಪ ಅಂಗಡಿ, ಚನ್ನಬಸು ಬಡ್ಡಿ ಇದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ