Breaking News
Home / ಬೆಳಗಾವಿ / ಶಬರಿಮಲೆ ದರ್ಶನಕ್ಕೆ ಪ್ರಯಾಣಿಸಲು ಬೆಳಗಾವಿಯಿಂದ ಚೆಂಗನ್ನೂರ್ ರೈಲು ನಿಲ್ದಾಣಕ್ಕೆ ವಿಶೇಷ ರೈಲು ಸೇವೆ ಆರಂಭಿಸುವoತೆ ಒತ್ತಾಯಿಸಿ ರಾಜ್ಯಸಭಾ ಸದಸ್ಯರಿಗೆ ಮನವಿ

ಶಬರಿಮಲೆ ದರ್ಶನಕ್ಕೆ ಪ್ರಯಾಣಿಸಲು ಬೆಳಗಾವಿಯಿಂದ ಚೆಂಗನ್ನೂರ್ ರೈಲು ನಿಲ್ದಾಣಕ್ಕೆ ವಿಶೇಷ ರೈಲು ಸೇವೆ ಆರಂಭಿಸುವoತೆ ಒತ್ತಾಯಿಸಿ ರಾಜ್ಯಸಭಾ ಸದಸ್ಯರಿಗೆ ಮನವಿ

Spread the love

ಬೆಳಗಾವಿ: ಜಿಲ್ಲೆಯ ಅಯ್ಯಪ್ಪ ಸ್ವಾಮಿ ಭಕ್ತರು ಶಬರಿಮಲೆಗೆ ತೆರಳಲು ಅನುಕೂಲವಾಗುವಂತೆ ಡಿಸೆಂಬರ್ 09 ರಿಂದ ಬೆಳಗಾವಿ- ಕೊಲ್ಲಂ ನಿಲ್ದಾಣಗಳ ನಡುವೆ ವಿಶೇಷ ರೈಲು ಸಂಚರಿಸಲಿದೆ ಎಂದು ನೈರುತ್ಯ ರೈಲ್ವೆ ಇಲಾಖೆ ವೇಳಾಪಟ್ಟಿ ಬಿಡುಗಡೆ ಮಾಡಿದೆ ಎಂದು ರಾಜ್ಯಸಭಾ ಸಂಸದ ಹಾಗೂ ನೈರುತ್ಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಸೋಮವಾರ ನ-25 ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ನವೆಂಬರನಿAದ ಜನವರಿವರೆಗೆ ಜಿಲ್ಲೆಯಿಂದ ಸುಮಾರು 50 ಸಾವಿರ ಅಧಿಕ ಭಕ್ತರು ಅಯ್ಯಪ್ಪ ದರ್ಶನಕ್ಕೆ ಹೋಗುತ್ತಿದ್ದಾರೆ. ಸದರಿ ಅಯ್ಯಪ್ಪ ಸ್ವಾಮಿ ಭಕ್ತರ ಅನುಕೂಲಕ್ಕಾಗಿ ವಿಶೇಷ ರೈಲು ಸಂಚಾರವನ್ನು ಪ್ರಾರಂಭಿಸಬೇಕೆಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಹಾಗೂ ವಿ ಸೋಮಣ್ಣ ಮತ್ತು ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ವಿನಂತಿಸಿದ್ದೆ . ನನ್ನ ಮನವಿಗೆ ಸ್ಪಂದಿಸಿ ಬೆಳಗಾವಿಯಿಂದ ಕೊಲ್ಲಂ ನಿಲ್ದಾಣಕ್ಕೆ 6 ಟ್ರಿಪ್ ರೈಲು ಸೇವೆಯನ್ನು ಒದಗಿಸಿದ್ದಾರೆʼ ಎಂದು ಹೇಳಿದ್ದಾರೆ.

ರೈಲು ಸಂಖ್ಯೆ 07317 ಬೆಳಗಾವಿ- ಕೋಲ್ಲಂ ವಿಶೇಷ ಎಕ್ಸ್ಪ್ರೆಸ್ ರೈಲು ಡಿಸೆಂಬರ 09,16,23,30 ಹಾಗೂ ಜನೇವರಿ 06,13 ರಂದು ಬೆಳಗಾವಿಯಿಂದ ಕೋಲ್ಲಂ ರೈಲು ನಿಲ್ಲಾಣದವರೆಗೆ ಸಂಚರಿಸಲಿದೆ.
ರೈಲು ಸಂಖ್ಯೆ 07318 ಕೋಲ್ಲಂ-ಬೆಳಗಾವಿ ವಿಶೇಷ ಎಕ್ಸ್ಪ್ರೆಸ್ ರೈಲು ಡಿಸೆಂಬರ 10,17,24,31 ಹಾಗೂ ಜನೇವರಿ 07,14 ರಂದು ಕೋಲ್ಲಂ ರೈಲು ನಿಲ್ಲಾಣದಿಂದ ಬೆಳಗಾವಿವರೆಗೆ ಸಂಚರಿಸಲಿದೆ.

ಬೆಳಗಾವಿ, ಖಾನಾಪೂರ, ಲೋಡಾ, ಧಾರವಾಡ, ಹುಬ್ಬಳ್ಳಿ, ಹಾವೇರಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ದಾವಣಗೆರೆ, ಬೀರೂರು, ಅರಸಿಕೆರೆ, ತುಮಕೂರು, ಚಿಕ್ಕಬಣಾವರ, ಎಸ್‌ಎಂಟಿ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರು, ಪೋದನೂರು, ಪಾಲಕ್ಕಾಡ್, ತ್ರಿಶೂರ್, ಅಲುವ, ಎರ್ನಾಕುಲಂ ಟೌನ್, ಎಟ್ಟುಮನೂರ್ ಮತ್ತು ಕೊಟ್ಟಾಯಂ, ಕೋಲ್ಲಂ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ಜಿಲ್ಲೆಯ ಭಕ್ತಾಧಿಗಳು ಈ ರೈಲು ಸೇವೆಯ ಸದುಪಯೋಗ ಪಡಿಸಿಕೊಳ್ಳಬೇಕೆಂದು ವಿನಂತಿಸಿದ್ದಾರೆ.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ