
ಬೆಳಗಾವಿ: ಯುವ ಜನಾಂಗಕ್ಕೆ ಯುವಜನೋತ್ಸವ ಕೇವಲ ಮೋಜು ಮಸ್ತಿಗಾಗಿ ಮಾತ್ರವಲ್ಲ; ಅದು ಉಜ್ವಲ ಭವಿಷ್ಯದ ಸೂಚಕ ಹಾಗೂ ಜೀವನ ಮೌಲ್ಯಗಳಿಗೆ ದಾರಿ ದೀಪವಾಗಬಲ್ಲದು’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೂ ಸಿ. ಎಮ್ ತ್ಯಾಗರಾಜ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈ ಭಾರತ ಯುವ ಕೇಂದ್ರ ಬೆಳಗಾವಿ ಹಾಗೂ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ ಬೆಳಗಾವಿ , ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಇವರ ಸಹಯೋಗದಲ್ಲಿ ದಿನಾಂಕ 29 ರಂದು ಸಂಗೂಳ್ಳಿ ರಾಯಣ್ಣ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ನಡೆದ 2025ನೇ ಸಾಲಿನ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಜಿಲ್ಲೆಯಲ್ಲಿ ಯುವಕ ಮಂಡಳಗಳ ಸಂಖ್ಯೆ ಹೆಚ್ಚಿಸುವುದರ ಮೂಲಕ ರಚನಾತ್ಮಕ ಚಟುವಟಿಕೆಗಳನ್ನು ಮಾಡುವ ಉದ್ದೇಶ ಹೊಂದಲಾಗಿದೆ. ಇದನ್ನು ಸಾರ್ಥಕಪಡಿಸುವಲ್ಲಿ ಯುವ ಸಬಲೀಕರಣ ಇಲಾಖೆ ಪ್ರಯತ್ನ ಮಾಡಬೇಕು’ ಎಂದರು.
ಶಾಸಕರಾದ ಶ್ರೀ ಆಸೀಪ (ರಾಜು) ಸೇಠ ಮಾತನಾಡುತಾ ಯುವ ಶಕ್ತಿ ರಾಷ್ಟ್ರಶಕ್ತಿ ಯುವಜನರು ದುಶ್ಚಟಗಳಿಗೆ ದಾಸರಾಗಲಿ ಒಳೆಯ ಶಿಕ್ಷಣ ಪಡೆಯುವ ಮೂಲಕ ಸಮಾಜಮೂಕಿ ಕಾರ್ಯ ಮಾಡಬೇಕು ಎಂದು ಹೇಳಿದರು

ರಾಷ್ಟ್ರಪ್ರಶಸ್ತಿ ವಿಜೇತರಾದದ ಮಲ್ಲೇಶ್ ಚೌಗಲೆ ಮಾತನಾಡಿ, ‘ಯುವ ಕಲಾವಿದರಿಗೆ ಸೂಕ್ತ ಗೌರವ, ಪ್ರಶಸ್ತಿಗಳನ್ನು ದೊರಕಿಸಿ ಕೊಡುವಲ್ಲಿ ಸಚಿವರ ಸಹಾಯ ಅಪೇಕ್ಷಿಸುವುದರ ಜತೆಗೆ ಅವರ ಮಾರ್ಗದರ್ಶನ ಅತ್ಯಂತ ಅಗತ್ಯ. ಆ ರೀತಿಯ ಸಹಾಯ, ಸಹಕಾರ ಯಾವತ್ತಿಗೂ ಇರಲಿ’ ಎಂದು ಮನವಿ ಮಾಡಿದರು.
ವೇಧಿಕೆ ಮೇಲೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕರಾದ ಶ್ರೀ ಬಿ ಶ್ರೀನಿವಾಸ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಜಿಲ್ಲಾ ಅಧ್ಯಕ್ಷರಾದ ಸಿದ್ದಣ್ಣಾ ದುರದುಂಡಿ. ವಿಠ್ಠಲ ಮುರಖಿಬಾವಿ.ರಾಮಚಂದ್ರ ಕಾಂಬಳೆ. ಪೋಲಿಸ ಠಾಣೆಯ ಶ್ರೀ ಕಾಲಿಮೀಚಿ ರಾಜು ಕೋಲಕಾರ ಬಸುರಾಜ ಜಕನ್ನವರ ಹಾಗೂ ಗಣ್ಯರು ಮುಂತಾದವರು ಉಪಸ್ಥಿತರಿದ್ದರು.
ಈ ಸಂದಭ೯ದಲ್ಲಿ ರಾಜ್ಯ ಯುವ ಪ್ರಶಸ್ತಿ ವಿಜೇತರಾದ ಸಿದ್ದಣ್ಣ ದುರದುಂಡಿ. ರಾಘವೇಂದ್ರ ಲಂಬುಗೋಳ. ವಿಠ್ಠಲ ಮುರಖಿಬಾವಿ ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತರಾದ ರಾಮಚಂದ್ರ ಕಾಂಬಳೆ. ಅಕ್ಕಮಹಾದೇವಿ ಮಾದರ ಯಮನವ್ವಾ ಮಾದರ ರಜನೀಕಾಂತ್ ಮಾಳದ ಇವರಸನ್ಮಾನಿಸಲಾಯಿತು
ಮಹಮ್ಮದ್ ಅಜಿರುದ್ದನ ಕಾರ್ಯಕ್ರಮ ನಿರೂಪಿಸಿದರು. ಎ ಸಿ ಪಾಟೀಲ ಸ್ವಾಗತಿಸಿದರು. ಲಾವಣ್ಯಾ ಘೂಜಾಳ
ವಂದಿಸಿದರು.
IN MUDALGI Latest Kannada News