
ಬೆಳಗಾವಿ- ಹಾಲು ಮತ ಸಮಾಜಕ್ಕೆ ಕೊಟ್ಟ ಮಾತಿನಂತೆ ನಡೆಯುತ್ತೇವೆ. ಅಪೆಕ್ಸ್ ಬ್ಯಾಂಕಿನ ಆಡಳಿತ ಮಂಡಳಿಗೆ ಹಾಲುಮತ ಕುರುಬ ಸಮಾಜಕ್ಕೆ ಪ್ರಾಶಸ್ತ್ಯವನ್ನು ನೀಡೇ ನೀಡುತ್ತೇವೆ ಎಂದು ಅರಭಾವಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಸ್ಪಷ್ಟಪಡಿಸಿದರು.
ಬೆಳಗಾವಿ ಡಿಸಿಸಿ ಬ್ಯಾಂಕಿನ ಎಲ್ಲ 16 ಜನ ನಿರ್ದೇಶಕರು ಕೂಡಿಕೊಂಡು ರಾಹುಲ್ ಜಾರಕಿಹೊಳಿಯವರನ್ನು ಅಪೆಕ್ಸ್ ಬ್ಯಾಂಕಿನ ನಿರ್ದೇಶಕರನ್ನಾಗಿ ಆಯ್ಕೆ ಮಾಡಿದ್ದಾರೆ. ಬ್ಯಾಂಕಿನಿಂದ ಒಬ್ಬರನ್ನು ಅಪೆಕ್ಸ್ ಬ್ಯಾಂಕಿಗೆ ಕಳುಹಿಸಿಕೊಡುವ ನಿಯಮ ಸರ್ಕಾರದ್ದಾಗಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಜಾರಕಿಹೊಳಿಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿ ಕಳಿಸಿದ್ದೇವೆ. ನಂತರ ರಾಹುಲ್ ಜಾರಕಿಹೊಳಿಯವರು ಹೆಸರನ್ನು ಸೂಚಿಸುವ ಒಬ್ಬ ವ್ಯಕ್ತಿಯನ್ನು ಬೆಳಗಾವಿ ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯರಾಗುತ್ತಾರೆ. ಇದು ಕೂಡ ಸಹಕಾರ ಸಂಘದ ನಿಯಮವಾಗಿದೆ. ಇದಿಷ್ಟು ನಿಜ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಕುರುಬ ಸಮಾಜದವರನ್ನು ಅಪೆಕ್ಸ್ ಬ್ಯಾಂಕಿನಿಂದ ನಾಮ ನಿರ್ದೇಶನ ಮಾಡಿಕೊಳ್ಳಲಾಗುತ್ತಿದೆ ಎಂದು ಬಾಲಚಂದ್ರ ಜಾರಕಿಹೊಳಿಯವರು ಎದ್ದಿರುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
IN MUDALGI Latest Kannada News