ಮಾತುಕತೆಗೆ ಕರೆದು ಮಾಜಿ ಡಿಸಿಎಂ ಸವದಿಯವರಿಂದ ಮಾರಣಾಂತಿಕ ಹಲ್ಲೆ: ಸವದಿಯವರ ಕುಟುಂಬದ ವಿರುದ್ಧ ಗಂಭೀರ ಆರೋಪ ಮಾಡಿದ ಕರೆಣ್ಣವರ
ಬೆಳಗಾವಿ :ಅಥಣಿ ಶಾಸಕ ಲಕ್ಷ್ಮಣ ಸವದಿ ಹಾಗೂ ಅವರ ಪುತ್ರ ಚಿದಾನಂದ ಸವದಿ ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಡಿಸಿಸಿ ಬ್ಯಾಂಕ್ ಲೇಬರ್ ಯುನಿಯನ್ ಅಧ್ಯಕ್ಷ ನಿಂಗಪ್ಪ ಕರೆಣ್ಣವರ ಗಂಭೀರ ಆರೋಪ ಮಾಡಿದ್ದಾರೆ.
ಮಾತುಕತೆ ಮಾಡಲು ಮನೆಗೆ ಕರೆದಿದ್ದು, ನನ್ನ ತಲೆ ಒಡೆಯುವಂತೆ ಹೊಡೆದಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಸಧ್ಯ ಗಂಭೀರವಾಗಿ ಗಾಯಗೊಂಡ ನಿಂಗಪ್ಪ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
*ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಸವದಿ ಹೊಣೆ:*
ಮಾತುಕತೆಗೆ ಆಹ್ವಾನಿಸಿದ್ದರಿಂದ ನಾನು ಮಾಜಿ ಡಿಸಿಎಂ ಲಕ್ಷ್ಮಣ ಸವದಿಯವರ ಮನೆಗೆ ಹೋದೆ. ಅವರು ಯಾವುದೇ ಮಾತುಗಳನ್ನು ಆಡದೇ ಏಕಾಏಕಿಯಾಗಿ ನನ್ನ ಮೇಲೆ ಹಲ್ಲೆಯನ್ನು ಮಾಡಿದರು. ಲಕ್ಷ್ಮಣ ಸವದಿ ಮತ್ತು ಅವರ ಪುತ್ರ ಚಿದಾನಂದ ಸವದಿಯವರು ಮಾರಣಾಂತಿಕ ಹಲ್ಲೆ ನಡೆಸಿದರು. ಈ ಪ್ರಕರಣವನ್ನು ಸರಕಾರವು ಗಂಭೀರವಾಗಿ ಪರಿಗಣಿಸಿ ಸವದಿಯವರ ಮೇಲೆ ಶಿಸ್ತು ಕ್ರಮವನ್ನು ಕೈಕೊಳ್ಳಬೇಕು. ಒಂದು ವೇಳೆ ಕ್ರಮವನ್ನು ಕೈಕೊಳ್ಳದಿದ್ದರೆ ನಾನೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಇದಕ್ಕೆ ನೇರವಾಗಿ ಸವದಿಯವರು ಕಾರಣರಾಗುತ್ತಾರೆ ಎಂದು ಹಲ್ಲೆಗೊಳಗಾದ ಕರೆಣ್ಣವರ ವ್ಹಿಡಿಯೋ ಸಂದೇಶದ ಮೂಲಕ ಹೇಳಿಕೆಯನ್ನು ನೀಡಿದ್ದಾರೆ.
ಶಾಸಕ ಲಕ್ಷ್ಮಣ ಸವದಿ ಮನೆ ಹತ್ತಿರದಿಂದಲೇ ಗಂಭೀರವಾಗಿ ಗಾಯಗೊಂಡ ನಿಂಗಪ್ಪ ಕರೆಣ್ಣವರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಯು ಮುಂದುವರಿದಿದೆ.
IN MUDALGI Latest Kannada News