ಬೆಟಗೇರಿ ಗ್ರಾಮದ ನಿವೃತ್ತ ಸೈನಿಕ ಮುತ್ತೆಪ್ಪ ನೀಲಣ್ಣವರಗೆ ಸನ್ಮಾನ
ಬೆಟಗೇರಿ:ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯ ವತಿಯಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸ್ಥಳೀಯ ಯೋಧ ಮುತ್ತೆಪ್ಪ ನೀಲಣ್ಣವರ ಅವರನ್ನು ಜ.11ರಂದು ಸತ್ಕರಿಸುವ ಕಾರ್ಯಕ್ರಮ ಜರುಗಿತು.
ಮುಖ್ಯಶಿಕ್ಷಕರಾದ ವೈ.ಸಿ.ಶೀಗಿಹಳ್ಳಿ ಅಧ್ಯಕ್ಷತೆ ವಹಿಸಿ, ಆರ್.ಬಿ.ಬೆಟಗೇರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಸೈನಿಕ ಮುತ್ತೆಪ್ಪ ನೀಲಣ್ಣವರ ಸನ್ಮಾನ ಸ್ವೀಕರಿಸಿ ಮಾತನಾಡಿ, ಇಂದು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಯುವಕರು ಮುಂದಾಗಬೇಕು. ಸೇನೆಯಲ್ಲಿ ಸೇವೆ ಸಲ್ಲಿಸುವುದರಲ್ಲಿ ಸಿಗುವ ಸಂತೋಷ ಯಾವ ವೃತ್ತಿಯಲ್ಲಿ ದೊರಕುವುದಿಲ್ಲಾ, ನಿಮ್ಮೆಲ್ಲರ ಸನ್ಮಾನ ಗೌರವದಿಂದ ನನ್ನ 17 ವರ್ಷಗಳ ಸೈನಿಕ ವೃತ್ತಿ ಬದುಕು ಸಾರ್ಥಕವಾಯಿತು ಎಂದರು.
ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ರಾಮಣ್ಣ ನೀಲಣ್ಣವರ, ಶಂಕರ ತೊಂಡಿಕಟ್ಟಿ, ಮಹಾದೇವ ಹಾದಿಮನಿ, ಮಹಾದೇವ ಮಿಡಕನಟ್ಟಿ, ಸ್ಥಳೀಯ ಹಾಲಿ ಮತ್ತು ನಿವೃತ್ತ ಸೈನಿಕರ ಬಳಗದ ಪದಾಧಿಕಾರಿಗಳು, ಸದಸ್ಯರು, ಉಭಯ ಶಾಲೆಯ ಶಿಕ್ಷಕರು, ಶಿಕ್ಷಕಿಯರು, ಸ್ಥಳೀಯರು ಇದ್ದರು.
IN MUDALGI Latest Kannada News