ಬೆಟಗೇರಿ:ಶಾಲಾ ಮಕ್ಕಳ ಬದುಕಿಗೊಂದು ಗುರಿ ಇರಲಿ, ವಿದ್ಯಾರ್ಥಿಗಳು ಸಾಧನೆಯ ಕನಸು ಕಾಣಬಾರದು, ಕನಸನ್ನು ಸಕಾರಗೊಳಿಸಿಕೊಳ್ಳಬೇಕು. ಪ್ರತಿಯೊಬ್ಬರೂ ದೇಶ ಪ್ರೇಮ, ಭಕ್ತಿ ಮೈಗೊಡಿಸಿಕೊಳ್ಳಬೇಕು ಎಂದು ಭಾರತ ದೇಶದ ನೌಕಾ ದಳದ ನಿವೃತ್ತ ರೀರ್ ಆಡ್ಮಿರಲ್ ರಘುವೀರ ಪುರಂದರೆ ಹೇಳಿದರು.
ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಗೆ ಜ.24ರÀಂದು ಭೇಟಿ ನೀಡಿ ಶಾಲಾ ಮಕ್ಕಳಿಗೆ ಎಸ್‍ಎಸ್‍ಎಲ್‍ಸಿ ನಂತರ ಮುಂದೇನು? ವಿಷಯದ ಕುರಿತು ಉಪನ್ಯಾಸ ಹಾಗೂ ವಿದ್ಯಾರ್ಥಿಗಳ ಜೋತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ದೈಹಿಕ ಮತ್ತು ಮಾನಸಿಕ ಕ್ಷೇಮತೆ ಇಟ್ಟಿಗೊಂಡರೆ ಏನೆಲ್ಲಾ ಸಾಧನೆ ಸಾಧ್ಯ. ಪಿಯುಸಿ ಮತ್ತು ಪದವಿ ನಂತರ ದೇಶದ ನೌಕಾ ದಳದಲ್ಲಿ ಸೇವೆ ಸಲ್ಲಿಸಲು ವಿವಿಧ ಅವಕಾಶಗಳ ಹಾಗೂ ತಾವು ನೌಕಾ ದಳದಲ್ಲಿ ಸೇವೆಗೈದ ತಮ್ಮ ಅನುಭವಗಳ ಕುರಿತು ಶಾಲಾ ವಿದ್ಯಾರ್ಥಿಗಳಿಗೆ ತಿಳಿಸಿದರು.
ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಅಧ್ಯಕ್ಷತೆ ವಹಿಸಿ, ಚಿಕ್ಕೋಡಿ ಕೆಆರ್‍ಐ ಅಭಿಯಂತರಾದ ಜಿ.ಎಸ್.ಕಲ್ಲೂರ ಅತಿಥಿಗಳಾಗಿ ಮಾತನಾಡಿದರು. ಪ್ರೌಢ ಶಾಲೆಯ ವಿದ್ಯಾರ್ಥಿಗಳ ಜೋತೆ ವಿವಿಧ ವಿಷಯಗಳ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು. ಅತಿಥಿಗಳನ್ನು ಪ್ರೌಢ ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.
ಮಲ್ಲಿಕಾರ್ಜುನ ಹಿರೇಮಠ, ಮೋಹನ ತುಪ್ಪದ, ರಾಕೇಶ ನಡೋಣಿ, ಎ.ಬಿ.ತಾಂವಶಿ, ಜಿ.ಆರ್.ಬಾಗೋಜಿ, ವಿ.ಬಿ.ಬಿರಾದಾರ, ವೈ.ಎಂ.ವಗ್ಗರ, ಸೌಮ್ಯಾಶ್ರೀ ಗಂಗಾ ಕೆ.ಎಸ್., ಪ್ರಕಾಶ ಕುರಬೇಟ, ಎಸ್.ಎಸ್.ಜಿಡ್ಡಿಮನಿ, ಈಶ್ವರ ಮುನವಳ್ಳಿ, ಮಲ್ಹಾರಿ ಪೋಳ, ಅನಂತ ಕರಿಕಟ್ಟಿ, ಶಾಲೆಯ ಎಸ್‍ಡಿಎಂಸಿ ಶಿಕ್ಷಕರು, ಅತಿಥಿ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಇತರರು ಇದ್ದರು.