ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಪ್ಪಟ ದೇಶ ಭಕ್ತರಾಗಿದ್ದರು : ರಮೇಶ ಹಾಲನ್ನವರ
ಬೆಟಗೇರಿ: ದೇಶಕ್ಕಾಗಿ ತಮ್ಮ ಬದುಕನ್ನು ತ್ಯಾಗಮಾಡಿದ ಮಹಾನ್ ಪುರುಷರನ್ನು ಇಂದು ಪ್ರತಿಯೊಬ್ಬರೂ ಸ್ಮರಿಸಬೇಕಿದೆ ಎಂದು ರಮೇಶ ಹಾಲಣ್ಣವರ ಹೇಳಿದರು.
ಬೆಟಗೇರಿ ಗ್ರಾಮದ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸಹಯೋಗದಲ್ಲಿ ಜ.26ರಂದು ಆಯೋಜಿಸಿದ ಸಂಗೊಳ್ಳಿ ರಾಯಣ್ಣನ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಗೊಳ್ಳಿ ರಾಯಣ್ಣ ಅಪ್ಪಟ ದೇಶ ಭಕ್ತರಾಗಿದ್ದರು ಎಂದರು.
ಸ್ಥಳೀಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕ್ರಾಂತಿವೀರ ರಾಯಣ್ಣನ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಪಣೆ ಸುರೇಶ ವಡೇರ ಸಮರ್ಪಿಸಿದರು. ಗೋಸಬಾಳ ಗ್ರಾಮಲೆಕ್ಕಾಧಿಕಾರಿ ವಿನಯ ತಳ್ಳಿ ಮುಖ್ಯಅತಿಥಿಗಳಾಗಿ ಆಗಮಿಸಿದ್ದರು.
ವಿಠಲ ಕೋಣಿ, ಮಹಾದೇವ ಹೊರಟ್ಟಿ, ಹಣಮಂತ ವಡೇರ, ರವಿ ಉಪ್ಪಾರ, ಭೀಮಶಿ ಬಾಣಸಿ, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸದಸ್ಯರು, ಅಭಿಮಾನಿಗಳು, ಗ್ರಾಮಸ್ಥರು ಇದ್ದರು.