ಬೆಟಗೇರಿ ಪ್ರೌಢ ಶಾಲೆಯಲ್ಲಿ ಫೆ.18ರಂದು ಬೇಗ ಬೇಡ ಕೊರಳಿಗೆ ಉರುಳು ಕಾರ್ಯಕ್ರಮ
ಬೆಟಗೇರಿ:ಮಹಿಳಾ ಸಮಾಖ್ಯ ಕರ್ನಾಟಕ ಸಂಸ್ಥೆಯ ಸಹಯೋಗದೊಂದಿಗೆ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ತರಬೇತಿ ಕಾರ್ಯಾಗಾರ, ತಾಯಂದಿರ ಸಭೆ ಹಾಗೂ ಬೇಗ ಬೇಡ ಕೊರಳಿಗೆ ಉರುಳು ಬಾಲ್ಯ ವಿವಾಹ ಜಾಗೃತಿ ಅಭಿಯಾನ ಕಾರ್ಯಕ್ರಮ ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಫೆ.17ರಂದು ಮುಂಜಾನೆ 10 ಗಂಟೆಗೆ ನಡೆಯಲಿದೆ.
ಇಲ್ಲಿಯ ಪ್ರೌಢ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಕುತುಬುಸಾಬ ಮಿರ್ಜಾನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಉಪನ್ಯಾಸಕರಾಗಿ ಬೆಳಗಾವಿ ಜಿಲ್ಲಾ ಎಂಎಸ್‍ಕೆ ಸಂಯೋಜಕರಾದ ನಾಗರತ್ನಾ ಗೂಳಿ, ಧಾರವಾಡ ಜಿಲ್ಲಾ ಎಂಎಸ್‍ಕೆ ಸಂಯೋಜಕರಾದ ಆರತಿ ಸಬರದ ವಿವಿಧ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ.
ಮೂಡಲಗಿ ಬಿಇಒ ಅಜೀತ ಮನ್ನಿಕೇರಿ, ಬೆಳಗಾವಿ ಎಸ್‍ಪಿಸಿ ನೋಡಲ್ ಅಧಿಕಾರಿ ಜ್ಯೋತಿ ಪರಾಂಡೆ, ಬೆಳಗಾವಿ ಜಿಲ್ಲಾ ಮಾನವ ಹಕ್ಕುಗಳ ಮತ್ತು ಸಾಮಾಜಿಕ ನ್ಯಾಯ ಆಯೋಗದ ಕಾರ್ಯಾಧ್ಯಕ್ಷರಾದ ವೈಶಾಲಿ ಭರಭರಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಗೋಕಾಕದ ರಜನಿ ಜಿರಗ್ಯಾಳ, ನ್ಯಾಯವಾದಿ ಮಂಗಲಾ ಜಕಾತಿ, ಜಯಾ ಚುನುಮರಿ, ಸ್ಥಳೀಯ ಪಿಎಚ್‍ಸಿ ವೈದ್ಯಾಧಿಕಾರಿ ಭುವನೇಶ್ವರಿ ಚೆನ್ನಾಳ, ಕಿರಿಯ ಸಂಪನ್ಮೂಲ ವ್ಯಕ್ತಿ ಸಂಪತ್ತಾ ಘಂಟೆ, ಸಿಆರ್‍ಸಿ ಪೂರ್ಣಿಮಾ ಭಾವಿಕಟ್ಟಿ, ಗ್ರಾಪಂ ಅಧ್ಯಕ್ಷೆ ಬಸವ್ವ ದೇಯಣ್ಣವರ ವಿಶೇಷ ಆಮಂತ್ರಿತರಾಗಿ, ಗಣ್ಯರು, ಶಿಕ್ಷಣ ಪ್ರೇಮಿಗಳು, ಹಿರಿಯ ಮಹಿಳಾ ನಾಗರಿಕರು, ಶಾಲೆಯ ಎಸ್‍ಡಿಎಂಸಿ ಸದಸ್ಯರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ತಿಳಿಸಿದ್ದಾರೆ.