ಬೆಟಗೇರಿ:ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವ ಹಾಗೂ ಮಾರ್ಗದರ್ಶನದಂತೆ ಬೆಟಗೇರಿ ಗ್ರಾಮದಲ್ಲಿ ಈಗಾಗಲೇ ಹಲವಾರು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಿಂಗಪ್ಪ ಕುರಬೇಟ ಹೇಳಿದರು.
ಬೆಟಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯಲ್ಲ್ಲಿ ನಬಾರ್ಡ ಆರ್‍ಐಡಿಎಫ್ 25ರ ಯೋಜನೆಯಡಿಯಲ್ಲಿ ಸುಮಾರು 22ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಿದ ನೂತನ ಎರಡು ಶಾಲಾ ಕೊಠಡಿಗಳನ್ನು ಫೆ.21ರಂದು ಉದ್ಘಾಟಿಸಿ ಮಾತನಾಡಿ, ಇಲ್ಲಿಯ ಗ್ರಾಮಸ್ಥರಿಗೆ ಅವಶ್ಯಕ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಈರಯ್ಯ ಹಿರೇಮಠ ಸಾನಿಧ್ಯ, ಮುಖ್ಯ ಶಿಕ್ಷಕ ವೈ.ಸಿ.ಶೀಗಿಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಮಾಜಿ ಸದಸ್ಯ ಲಕ್ಷ್ಮಣ ನೀಲಣ್ಣವರ, ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ ಮುಖ್ಯ ಅತಿಥಿಗಳಾಗಿ ಜ್ಯೋತಿ ಬೆಳಗಿಸಿದರು. ಸ್ಥಳೀಯ ಪ್ರೌಢ ಶಾಲೆ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣ್ಯರನ್ನು ಉಭಯ ಶಾಲೆಗಳ ವತಿಯಿಂದ ಶಾಲು ಹೊದಿಸಿ ಸತ್ಕರಿಸಲಾಯಿತು.
ಬೆಟಗೇರಿ ಗ್ರಾಮಸ್ಥರಿಂದ ಶಾಸಕ ಬಾಲಚಂದ್ರ ಅವರ ಕಾರ್ಯಕ್ಕೆ ಶ್ಲಾಘನೆ : ಅರಭಾಂವಿ ಮತಕ್ಷೇತ್ರ ವ್ಯಾಪ್ತಿಯ ಬೆಟಗೇರಿ ಗ್ರಾಮಕ್ಕೆ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ವಿವಿಧ ವಲಯದ ಮೂಲಭೂತ ಅವಶ್ಯಕ ಹಾಗೂ ಗ್ರಾಮದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಕೆಲಸಗಳನ್ನು ಸಕಾಲಕ್ಕೆ ಕಲ್ಪಿಸಿಕೊಡುತ್ತಿರುವ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಸ್ಥಳೀಯರು ಶ್ಲಾಘನೆ ಮಾಡಿದ್ದಾರೆ.
ಬೆಟಗೇರಿ ಸಿಆರ್‍ಸಿ ಬಿ.ಟಿ.ಪುಂಜಿ, ಮುಖ್ಯಶಿಕ್ಷಕ ಆರ್.ಬಿ.ಬೆಟಗೇರಿ, ಈಶ್ವರ ಬಳಿಗಾರ, ಶಿವನಪ್ಪ ಮಾಳೇದ, ಈಶ್ವರ ಮುಧೋಳ, ಶಿವಲಿಂಗ ಬಳಿಗಾರ, ಅಶೋಕ ಕೋಣಿ, ಈರಣ್ಣ ಬಳಿಗಾರ, ಗುತ್ತಿಗೆದಾರ ಬಿ.ಪಿ.ಕೋಣಿ, ಶ್ರೀಧರ ದೇಯಣ್ಣವರ, ಸದಾಶಿವ ಕುರಿ, ಲಕ್ಕಪ್ಪ ಚಂದರಗಿ, ರಾಮಣ್ಣ ನೀಲಣ್ಣವರ, ಉದ್ದಪ್ಪ ಚಂದರಗಿ, ಅಪ್ಪಣ್ಣ ಆಸೆಪ್ಪಗೋಳ, ಸಿದ್ಧಾರೂಢ ವಡೇರ, ಮಾರುತಿ ನೀಲಣ್ಣವರ, ನೀಲಪ್ಪ ಪಾರ್ವತೇರ, ಶಾಲೆಯ ಶಿಕ್ಷಕರು, ಎಸ್‍ಡಿಎಮ್‍ಸಿ ಸದಸ್ಯರು, ಸ್ಥಳೀಯರು ಇದ್ದರು.