ಬೆಟಗೇರಿ:ಕಂದಾಯ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಫೆ.28ರಂದು ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಬೆಟಗೇರಿ ಗ್ರಾಮದ ತಾಲೂಕಾ ಶಿರಸ್ತದಾರ ಮೇಳೆಪ್ಪ ಹಿರೇಮಠ ಅವರ ಸೇವಾ ನಿವೃತ್ತಿ ಸನ್ಮಾನ, ಬಿಳ್ಕೋಡುವ ಕಾರ್ಯಕ್ರಮ ನಡೆಯಿತು.
ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಗೋಕಾಕ ಕಂದಾಯ ಇಲಾಖೆ ವತಿಯಿಂದ ಸೇವಾ ನಿವೃತ್ತಿ ಹೊಂದಿದ ತಾಲೂಕಾ ಶಿರಸ್ತದಾರÀ ಮೇಳೆಪ್ಪ ಹಿರೇಮಠ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು. ನಿವೃತ್ತ ಶಿರಸ್ತದಾರ ಆರ್.ಎಂ.ನಕಾತಿ ಅವರು ಸೇವಾ ನಿವೃತ್ತಿ ಹೊಂದಿದ ತಾಲೂಕಾ ಶಿರಸ್ತದಾರ ಮೇಳೆಪ್ಪ ಹಿರೇಮಠ ಅವರ ಸೇವಾ ದಿನಗಳ ಕುರಿತು ಮಾತನಾಡಿದರು.
ಗ್ರೇಡ್2ತಹಶೀಲ್ದಾರ ಎಲ್.ಎಚ್.ಭೋವಿ, ವೈ.ಎಲ್.ಡಬ್ಬನ್ನವರ, ಈಶ್ವರ ದೇಯಣ್ಣವರ, ಎಸ್.ಬಿ.ಕಟ್ಟಿಮನಿ, ಶಿವಾಜಿ ನೀಲಣ್ಣವರ, ಶ್ರೀಶೈಲ ಗಾಣಗಿ, ವಿವಿಧ ಗ್ರಾಮಗಳ ಕಂದಾಯ ನಿರೀಕ್ಷಕರು, ಗ್ರಾಮಲೆಕ್ಕಾಧಿಕಾರಿಗಳು, ಗೋಕಾಕ ಕಂದಾಯ ಇಲಾಖೆಯ ಸಿಬ್ಬಂದಿ, ಗಣ್ಯರು, ಮತ್ತೀತರರು ಇದ್ದರು.
