ಬೆಟಗೇರಿ:ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನ, ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಅವರ ನೇತೃತ್ವದ ಗುಂಪಿನ ಅಭ್ಯರ್ಥಿ ಭಾಗ್ಯಶ್ರೀ ಮಹೇಶ ಪಟ್ಟಣಶೆಟ್ಟಿ ಅವರು ಕೌಜಲಗಿ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷೆಯಾಗಿ ಅವಿರೂಧವಾಗಿ ಆಯ್ಕೆಯಾಗಿದ್ದಾರೆ.
ಮಾ.3ರಂದು ಕೌಜಲಗಿ ಗ್ರಾಪಂ ಕಾರ್ಯಾಲಯದಲ್ಲಿ ಅಧ್ಯಕ್ಷರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಭಾಗ್ಯಶ್ರೀ ಮಹೇಶ ಪಟ್ಟಣಶೆಟ್ಟಿ ಅವರು ಗ್ರಾಪಂ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಗೋಕಾಕ ಜಿಆರ್‍ಬಿಸಿ ಉಪವಿಭಾಗ ನಂ-7ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶ್ರೀನಿವಾಸ ಬಿರಾದಾರ ತಿಳಿಸಿದರು.
ನೂತನ ಗ್ರಾಪಂ ಅಧ್ಯಕ್ಷರ ಆಯ್ಕೆ ಬಳಿಕ ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ಪ್ರತಿಯೊಬ್ಬ ಮನುಷ್ಯನಿಗೆ ಅಧಿಕಾರ ಮುಖ್ಯವಲ್ಲ, ಗ್ರಾಮದ ಅಭಿವೃದ್ಧಿ ಅತ್ಯಂತ ಮುಖ್ಯವಾಗಿದೆ. ನೂತನ ಅಧ್ಯಕ್ಷರು ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ದುಡಿಯಬೇಕು. ಗ್ರಾಪಂ ಸದಸ್ಯರು ನೂತನ ಅಧ್ಯಕ್ಷರಿಗೆ ಸಹಕಾರ ನೀಡಬೇಕು ಎಂದರು.
ಅಶೋಕ ಉದ್ದಪ್ಪನ್ನವರ, ಶಾಂತಪ್ಪ ಹಿರೆಮೇತ್ರಿ, ನೀಲಪ್ಪ ಕೇವಟಿ, ರಾಯಪ್ಪ ಬಲೋದಾರ, ಜಿ.ಎಸ್.ಲೋಕನ್ನವರ, ಎಂ.ಐ.ಶಿವನಮಾರಿ, ಶ್ರೀಶೈಲ ಗಾಣಗೇರ, ವೆಂಕಟೇಶ ದಳವಾಯಿ, ಆರ್.ಎಂ.ಈಟಿ, ಬಸವರಾಜ ಜೋಗಿ, ರಮಂಜಾನ ಪೋದಿ, ನಾರಾಯಣ ಕೌಜಲಗಿ, ಅಶೋಕ ಹೊಸಮನಿ, ಗ್ರಾಪಂ ಪಿಡಿಒ ನಂದಗಾವಿ, ಗ್ರಾಪಂ ಸದಸ್ಯರು, ಗಣ್ಯರು, ಗ್ರಾಮಸ್ಥರು ಇದ್ದರು.

????????????????????????????????????