ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಹಾಗೂ ಬಗರನಾಳ ಗ್ರಾಮದಲ್ಲಿ ಶನಿವಾರದಂದು ಸಂಜೆ ಗಾಳಿ ಮಿಶ್ರಿತ ಸುರಿದ ಅಕಾಲಿಕ ಮಳೆಯ ಪರಿಣಾಮ ಸದಕ ಮತ್ತು ಗೋಧಿ ಬೆಳೆಗಳು ನೆಲಕ್ಕೆರುಳಿದ್ದರಿಂದ ಈ ಭಾಗದ ರೈತರಿಗೆ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ.
ಸಾಲ-ಶೂಲ ಮಾಡಿ ಬೀಜ ಗೊಬ್ಬರ ಹಾಕಿ ಕಷ್ಟಪಟ್ಟು ಸದಕ ಮತ್ತು ಗೋಧಿ ಬೆಳೆಗಳು ಬೆಳೆದು ಇನ್ನೇನು ಕಟಾವು ಹಂತಕ್ಕೆ ಬಂದಿದ್ದ ಅಪಾರ ಪ್ರಮಾಣದ ಬೆಳೆಗಳು ಅಕಾಲಿಕವಾಗಿ ಸುರಿದ ಈ ಮಳೆಯಿಂದ ನೆಲಕಚ್ಚಿ ಮಣ್ಣು ಪಾಲಾಗಿ ನಾಶವಾಗಿದ್ದರಿಂದ ಈ ಭಾಗದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ ಎಂದು ಇಲ್ಲಿಯ ರೈತರು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.
ಅಕಾಲಿಕ ಮಳೆಗೆ ನಾಶವಾದ ಬೆಳೆಗಳಿಗೆ ಸರ್ಕಾರ ಬೆಳೆ ನಾಶದ ಪರಿಹಾರ ನೀಡಬೇಕು. ಸಂಬಂಧಿಸಿದ ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ನಾಶವಾದ ರೈತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲು ಮುಂದಾಗಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
“ಗೋಕಾಕ ತಾಲೂಕಿನ ಬಗರನಾಳ ಗ್ರಾಮದ ಸರಹದ್ಧಿನಲ್ಲಿರುವ ಸದಕ ಮತ್ತು ಗೋಧಿ ಬೆಳೆಗಳು ಶನಿವಾರ ಸಂಜೆ ಹೊತ್ತಿಗೆ ಸುರಿದ ಅಕಾಲಿಕ ಮಳೆಗೆ ಬಹಳ ಪ್ರಮಾಣ ಬೆಳೆ ನೆಲಕಚ್ಚಿ ನಾಶವಾಗಿದೆ. ಸರ್ಕಾರ ಈ ಭಾಗದ ರೈತರಿಗೆ ಬೆಳೆ ನಾಶದ ಪರಿಹಾರ ನೀಡಲು ಮುಂದಾಗಬೇಕಿದೆ.
* ಶ್ರೀಶೈಲ ಗಾಣಗಿ.ಸದಕಿನ ಬೆಳೆ ನಾಶವಾದ ರೈತ ಬೆಟಗೇರಿ, ತಾ.ಗೋಕಾಕ.
“ಬಗರನಾಳ ಗ್ರಾಮದ ಕೆಲವು ರೈತರ ತೋಟದಲ್ಲಿ ಬೆಳೆದಿದ್ದ ಸದಕಿನ ಬೆಳೆಗಳು ಅಕಾಲಿಕ ಸುರಿದ ಗಾಳಿ ಮಿಶ್ರಿತ ಮಳೆಗೆ ನೆಲಕ್ಕುರಳಿ ನಾಶವಾಗಿವೆ. ಈ ಬೆಳೆ ನಾಶದ ಕುರಿತು ಸಂಬಂಧಿಸಿದ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು.
ವಿ. ಎಲ್.ತಳ್ಳಿ ಗ್ರಾಮ ಲೆಕ್ಕಾಧಿಕಾರಿ. ಗೋಸಬಾಳ. ತಾ.ಗೋಕಾಕ.