ವಿವಿಧ ಯೋಜನೆಗಳ ಸದುಪಯೋಗ ಸ್ಥಳೀಯರು ಪಡೆದುಕೊಳ್ಳಬೇಕು: ಪಿಡಿಒ ಎಮ್.ಎಲ್ ಯಡ್ರಾಂವಿ
ಬೆಟಗೇರಿ:ಸರ್ಕಾರ ವಿವಿಧ ಇಲಾಖೆಗಳ ಮೂಲಕ ಸ್ಥಳೀಯರಿಗೆ, ಗ್ರಾಮದ ಸಮಗ್ರ ಪ್ರಗತಿಗೆ ಸಾಕಷ್ಟು ಯೋಜನೆಗಳಿಂದ ಸಹಾಯ ಸಹಕಾರ ನೀಡುತ್ತಿದೆ. ಇಲ್ಲಿಯ ಗ್ರಾಪಂ ಸಹಯೋಗದ ವಿವಿಧ ಯೋಜನೆಗಳ ಸದುಪಯೋಗವನ್ನು ಸ್ಥಳೀಯರು ಪಡೆದುಕೊಳ್ಳಬೇಕು ಎಂದು ಗೋಸಬಾಳ ಗ್ರಾಮ ಪಂಚಾಯತಿ ಪಿಡಿಒ ಎಮ್.ಎಲ್ ಯಡ್ರಾಂವಿ ಹೇಳಿದರು.
ಸಮೀಪದ ಗೋಸಬಾಳ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಮಾ.22ರಂದು ನಡೆದ ಸನ್ 2021-22ನೇ ಸಾಲಿನ 2ನೇ ಸುತ್ತಿನ ಗ್ರಾಮ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಗೋಸಬಾಳ ಗ್ರಾಮ ಪಂಚಾಯ್ತಿಯನ್ನು ಅಮೃತ ಗ್ರಾಮ ಯೋಜನೆಗೆ ಆಯ್ಕೆ ಮಾಡಲು ಶ್ರಮಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯವನ್ನು ಶ್ಲಾಘಿಸಿದರು.
ಗೋಸಬಾಳ ಗ್ರಾಪಂ ಅಧ್ಯಕ್ಷೆ ಆಶೆವ್ವ ಡಬರಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ವಿಠಲ ಸವದತ್ತಿ ಮಾತನಾಡಿದರು. ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಯಿಂದ ಸ್ಥಳೀಯರಿಗೆ ದೊರಕುವ ವಿವಿಧ ಸಹಾಯ, ಸೌಲಭ್ಯಗಳ ಕುರಿತು ತಿಳಿಸಿದರು.
ನೋಡಲ್ ಅಧಿಕಾರಿ ಎಸ್.ಪಿ. ವೆಂಕಟಾಪೂರ, ಕೃಷಿ ಇಲಾಖೆಯ ಆರ್.ಬಿ.ಗೋಲಬಾಂವಿ, ನೀರಾವರಿ ಇಲಾಖೆಯ ಕುಮಾರೇಶ ರಾಠೊಡ, ಅರಣ್ಯ ಇಲಾಖೆ ಉಪ ವಲಯಾಧಿಕಾರಿಗಳಾದ ಜಾಫರ್ ಮುಜಾವರ, ಅರ್ಜುನ ಹುಲಮನಿ, ತೋಟಗಾರಿಕೆ ಇಲಾಖೆಯ ಶ್ರೀಮತಿ ಕಾವ್ಯಶ್ರೀ ಶಿಂಗಳಾಪೂರ, ಅಬಕಾರಿ ಇಲಾಖೆಯ ಮಹಾದೇವಪ್ಪ ಗುಡ್ಡದ, ಎಸ್.ಪೂಜೇರಿ, ಗ್ರಾಮ ಲೆಕ್ಕಾಧಿಕಾರಿ ವಿ.ತಳ್ಳಿ, ಸುರೇಖಾ ಹಿರಿಹೊಳಿ, ಪಿ.ಎಸ್.ಕಡಕೋಳ, ಪಿ.ಎಮ್.ಇಟ್ನಾಳ, ಎಮ್.ವೈ.ಹೊಸಮನಿ, ಬಿ.ಪಿ.ಬುಳ್ಳಿ, ಎಸ್.ಪಿ. ಮತ್ತಿಕೊಪ್ಪ, ಗ್ರಾಪಂ ಉಪಾಧ್ಯಕ್ಷ, ಸದಸ್ಯರು, ಗ್ರಾಪಂ ವ್ಯಾಪ್ತಿಯ ಹಳ್ಳಿಗಳ ಸ್ಥಳೀಯರು, ಸಿಬ್ಬಂದಿ, ಇತರರು ಇದ್ದರು.