ವಿನೋದ ಗೋದಿ ಅವರಿಗೆ ಪಿಎಚ್‍ಡಿ ಪದವಿ ಗೌರವ
ಬೆಟಗೇರಿ:ಸಮೀಪದ ಮಮದಾಪೂರ ಗ್ರಾಮದ ಸ್ನಾತಕೋತ್ತರ ಪದವಿ ವಿದ್ಯಾರ್ಥಿ ವಿನೋದ ಕಲ್ಲಪ್ಪ ಗೋದಿ ಅವರು ತೋಟಗಾರಿಕೆ (ಪಪ್ಪಾಯಿ) ಬೆಳೆ ಕುರಿತು ವಿಷಯ ಮಂಡಿಸಿದ್ದಕ್ಕೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಇತ್ತೀಚೆಗೆ ಅವರಿಗೆ ಪಿಎಚ್‍ಡಿ ಪದವಿ ನೀಡಿ ಗೌರವಿಸಿದೆ.
ಮಮದಾಪೂರ ಗ್ರಾಮದ ಶಿಕ್ಷಣ ಪ್ರೇಮಿಗಳು, ಸ್ಥಳೀಯರು ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಪಿಎಚ್‍ಡಿ ಪದವಿ ತರಗತಿಯ ಉಪನ್ಯಾಸಕರು ಸಾಧನೆಗೈದ ವಿನೋದ ಗೋದಿ ಅವರ ಸಾಧನೆಯನ್ನು ಶ್ಲಾಘಿಸಿದ್ದಾರೆ.