Breaking News
Home / Recent Posts / ಡಾ.ರಾಜೇಂದ್ರ ಸಣ್ಣಕ್ಕಿ ಅವರ ಗುಂಪಿಗೆ ಭರ್ಜರಿ ಜಯ ಕೌಜಲಗಿ ಅರ್ಬನ್ ಬ್ಯಾಂಕ್ ಆಡಳಿತ ಮಂಡಳಿ ಸದಸ್ಯರ ಆಯ್ಕೆ ನಡೆದ ಚುನಾವಣೆ

ಡಾ.ರಾಜೇಂದ್ರ ಸಣ್ಣಕ್ಕಿ ಅವರ ಗುಂಪಿಗೆ ಭರ್ಜರಿ ಜಯ ಕೌಜಲಗಿ ಅರ್ಬನ್ ಬ್ಯಾಂಕ್ ಆಡಳಿತ ಮಂಡಳಿ ಸದಸ್ಯರ ಆಯ್ಕೆ ನಡೆದ ಚುನಾವಣೆ

Spread the love

ಡಾ.ರಾಜೇಂದ್ರ ಸಣ್ಣಕ್ಕಿ ಅವರ ಗುಂಪಿಗೆ ಭರ್ಜರಿ ಜಯ

ಕೌಜಲಗಿ ಅರ್ಬನ್ ಬ್ಯಾಂಕ್ ಆಡಳಿತ ಮಂಡಳಿ ಸದಸ್ಯರ ಆಯ್ಕೆ ನಡೆದ ಚುನಾವಣೆ

ಬೆಟಗೇರಿ:ಸಮೀಪದ ಕೌಜಲಗಿ ಪಟ್ಟಣದ ಪ್ರತಿಷ್ಠಿತ ಸಹಕಾರ ಸಂಸ್ಥೆಯಾದ ದಿ. ಕೌಜಲಗಿ ಅರ್ಬನ್ ಕೋ-ಆಪ್ ಕ್ರೆಡಿಟ್ ಬ್ಯಾಂಕಿನ ಐದು ವರ್ಷದ ಅವಧಿಗಾಗಿ ಆಡಳಿತ ಮಂಡಳಿ ಸದಸ್ಯರ ಆಯ್ಕೆಗೆ ಮಾ.27ರಂದು ನಡೆದ ಚುನಾವಣೆಯಲ್ಲಿ ಡಾ,ರಾಜೇಂದ್ರ ಸಣ್ಣಕ್ಕಿ ಗುಂಪಿನ ಅಭ್ಯರ್ಥಿಗಳು ಭರ್ಜರಿ ಜಯ ಗಳಿಸಿದ್ದಾರೆ.
ಕೌಜಲಗಿ ಪಟ್ಟಣದ ಅರ್ಬನ್ ಬ್ಯಾಂಕಿನ ನೂತನ ಕಟ್ಟಡದಲ್ಲಿ ಸನ್ 2022-2027ನೇ ಸಾಲಿನ ಆಡಳಿತ ಮಂಡಳಿ ಸದಸ್ಯರ ಒಟ್ಟು 13 ಸ್ಥಾನದ ಆಯ್ಕೆಗಾಗಿ ಚುನಾವಣೆ ಜರುಗಿತು. 7 ಸಾಮಾನ್ಯ, 1 ಹಿಂದುಳಿದ ಅ ವರ್ಗ, 1 ಹಿಂದುಳಿದ ವರ್ಗ ಬ, 2 ಮಹಿಳೆಯರು, ಪರಿಶಿಷ್ಟ ಜಾತಿ 1, ಪರಿಶಿಷ್ಟ ಪಂಗಡದ 1 ಸ್ಥಾನಗಳು ಮೀಸಲಾಗಿರಿಸಲಾಗಿದ್ದವು. ಆಯ್ಕೆ ಬಯಸಿ 28 ಜನ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು.
ಡಾ.ರಾಜೇಂದ್ರ ಸಣ್ಣಕ್ಕಿ ಮತ್ತು ಭೋವಿ, ಲೋಕನ್ನವರ, ಪರುಶೆಟ್ಟಿ ಗುಂಪಿನ ನಡುವೆ ತುರುಸಿನ ತೀವ್ರ ಪೈಪೋಟಿ ಏರ್ಪಟಿತ್ತು. ಡಾ.ರಾಜೇಂದ್ರ ಸಣ್ಣಕಿ ಗುಂಪಿನ ಪರ 8 ಜನ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದರಿಂದ ವಿರೋಧ ಬಣದÀ ಅಭ್ಯರ್ಥಿಗಳು ಸೋಲು ಅನುಭವಿಸಿದ್ದಾರೆ.
ಡಾ.ರಾಜೇಂದ್ರ ಸಣ್ಣಕ್ಕಿ ಸೇರಿ ಇವರ ಗುಂಪಿನ ಅಭ್ಯರ್ಥಿಗಳಾದ ಮಹಾಂತಪ್ಪ ಶಿವನಮಾರಿ, ಈರಣ್ನ ಹುದ್ದಾರ,ನೀಲಪ್ಪ ಕೇವಟಿ, ಅಶೋಕ ಹೊಸಮನಿ, ಅಶೋಕ ಪಾಟೀಲ, ಶಿವಲಿಂಗಪ್ಪ ಮರೆನ್ನವರ, ಶೋಭಾದೇವಿ ಲೋಕನ್ನವರ ಜಯಗಳಿಸಿದ್ದಾರೆ.
ಡಾ.ರಾಜೇಂದ್ರ ಸಣ್ಣಕ್ಕಿ ಸೇರಿ ಇವರ ಗುಂಪಿನ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ ಹಿನ್ನಲೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು, ಗುಲಾಲು ಎರಚಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಡಾ.ರಾಜೇಂದ್ರ ಸಣ್ಣಕ್ಕಿ ಗುಂಪಿನ ಪರ ಅಭ್ಯರ್ಥಿಗಳು, ಹಿರಿಯ ಮುಖಂಡರು, ಗಣ್ಯರು, ಕಾರ್ಯಕರ್ತರು, ಅಭಿಮಾನಿಗಳು, ಇತರರು ಇದ್ದರು.


Spread the love

About inmudalgi

Check Also

ಆರ್.ಡಿ.ಎಸ್. ಪಿಯು ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಬೀಳ್ಕೊಡುವ ಸಮಾರಂಭ

Spread the love  ಮೂಡಲಗಿ : ದಿನಾಂಕ 19-01-2026 ರಂದು ಇಲ್ಲಿನ ಶೈಕ್ಷಣಿಕ ಸಂಸ್ಥೆಯಾದ ಆರ್.ಡಿ.ಎಸ್. ಸ್ವತಂತ್ರ ಪದವಿ ಪೂರ್ವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ