Breaking News
Home / Recent Posts / ಬಸವ ಜಯಂತಿ-ರಂಜಾನ ಹಬ್ಬವನ್ನು ಶಾಂತಿ-ಸೌಹಾರ್ದತೆಯಿಂದ ಆಚರಿಸಬೇಕು:ಪಿಎಸ್‍ಐ ಗೋವಿಂದಗೌಡ ಪಾಟೀಲ

ಬಸವ ಜಯಂತಿ-ರಂಜಾನ ಹಬ್ಬವನ್ನು ಶಾಂತಿ-ಸೌಹಾರ್ದತೆಯಿಂದ ಆಚರಿಸಬೇಕು:ಪಿಎಸ್‍ಐ ಗೋವಿಂದಗೌಡ ಪಾಟೀಲ

Spread the love

ಬಸವ ಜಯಂತಿ-ರಂಜಾನ ಹಬ್ಬವನ್ನು ಶಾಂತಿ-ಸೌಹಾರ್ದತೆಯಿಂದ ಆಚರಿಸಬೇಕು:ಪಿಎಸ್‍ಐ ಗೋವಿಂದಗೌಡ ಪಾಟೀಲ

ಬೆಟಗೇರಿ: ಬಸವ ಜಯಂತಿ ಹಾಗೂ ರಂಜಾನ ಹಬ್ಬವನ್ನು ಸ್ಥಳೀಯ ಸಮಾಜ ಭಾಂಧವರು ಸೌಹಾರ್ದತೆ ಮತ್ತು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಕುಲಗೋಡ ಪೊಲೀಸ್ ಠಾಣೆ ಪಿಎಸ್‍ಐ ಗೋವಿಂದಗೌಡ ಪಾಟೀಲ ಹೇಳಿದರು.
ಕುಲಗೋಡ ಪೊಲೀಸ್ ಠಾಣೆಯ ಸಹಯೋಗದಲ್ಲಿ ಬಸವ ಜಯಂತಿ ಹಾಗೂ ರಂಜಾನ ಹಬ್ಬದ ಪ್ರಯುಕ್ತ ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದಲ್ಲಿ ಏ.30 ರಂದು ನಡೆದ ಶಾಂತಿಪಾಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಸವ ಜಯಂತಿ ಹಾಗೂ ರಂಜಾನ ಹಬ್ಬವನ್ನು ಸೌಹಾರ್ದತೆಯಿಂದ, ಯಾವುದೇ ಅಹಿತಕರ ಘಟನೆ ನಡೆಯದಂತೆ ವಿವಿಧ ಸಮಾಜದ ಮುಖಂಡರು ಮುತುವರ್ಜಿವಹಿಸಿ ಶಾಂತತೆಯಿಂದ ಹಬ್ಬಗಳನ್ನು ಆಚರಣೆ ಮಾಡಬೇಕೆಂದರು.
ಕುಲಗೋಡ ಪೊಲೀಸ್ ಠಾಣೆ ವ್ಯಾಪ್ತಿಯ ಬೆಟಗೇರಿ, ಕೌಜಲಗಿ ಸೇರಿದಂತೆ ಹಲವು ಹಳ್ಳಿಗಳಲ್ಲಿ ಬಸವ ಜಯಂತಿ ಹಾಗೂ ರಂಜಾನ ಹಬ್ಬವನ್ನು ಆಚರಿಸಲು ಸ್ಥಳೀಯ ವಿವಿಧ ಸಮುದಾಯದ ಹಿರಿಯ ನಾಗರಿಕರ, ಯುವಕರ ಹಾಗೂ ಸಾರ್ವಜನಿಕರು ಸಹಕಾರ ಅಗತ್ಯವಾಗಿದೆ. ಹಬ್ಬ ಹರಿದಿನಗಳಲ್ಲಿ ಕಾನೂನು ಬಾಹಿರ ಚಟುವಟಿಕೆ ಕೈಗೊಂಡವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಪಿಎಸ್‍ಐ ಗೋವಿಂದಗೌಡ ಪಾಟೀಲ ಸೂಚನೆ ನೀಡಿದ್ದಾರೆ.
ಮಹೇಶ ಪಟ್ಟಣಶೆಟ್ಟಿ, ರವಿ ಪರುಶೆಟ್ಟಿ, ಅಲ್ಲಾಭಕ್ಷ ಹುನ್ನೂರ, ರಾಮಣ್ಣ ಈಟಿ, ಪ್ರಕಾಶ ಹಿರೇಮೇತ್ರಿ, ರಂಜಾನ ಪೋದಿ, ಶಂಕರ ಜೋತೆನ್ನವರ, ಮಹಾದೇವ ಬುದ್ನಿ, ದಸ್ತಗೀರ ಮುಲ್ತಾನಿ, ರಜಾಕ ಮುಲ್ತಾನಿ, ಕೌಜಲಗಿ ಗ್ರಾಮದ ಬೀಟ್ ಪೊಲೀಸ್ ಪೇದೆಗಳಾದ ಮಲ್ಲಪ್ಪ ಆಡಿನ, ಕಲ್ಮೇಶ ಬಾಗಲಿ, ಸ್ಥಳೀಯ ವಿವಿಧ ಸಮಾಜದ ಮುಖಂಡರು, ಗಣ್ಯರು, ಸ್ಥಳೀಯರು ಇದ್ದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ