ಬೆಟಗೇರಿ:ಗ್ರಾಮದ ಕುರುಬ ಸಮಾಜದ ಹಿರಿಯರಾದ ವಿಠಲ ಲಕ್ಕಪ್ಪ ಚಂದರಗಿ(88) ಅವರು ಶುಕ್ರವಾರ ಮೇ.13ರಂದು ನಿಧನರಾದರು. ಮೃತರು ಪತ್ನಿ, ಬೆಂಗಳೂರು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಉದಯ ಚಂದರಗಿ ಸೇರಿದಂತೆ ಮೂರು ಜನ ಪುತ್ರರು, ಇಬ್ಬರು ಪುತ್ರಿಯರು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನಗಲಿದ್ದಾರೆ.
