ಬೆಟಗೇರಿ ಪ್ರೌಢ ಶಾಲೆಯಲ್ಲಿ ಅದ್ದೂರಿಯಾಗಿ ನಡೆದ ಶಾಲಾ ಪ್ರಾರಂಭೋತ್ಸವ
ಬೆಟಗೇರಿ:ಗ್ರಾಮದ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮೇ.16ರಂದು ಸನ್ 2022-23 ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು.
ಶಾಲೆಯ ಪ್ರವೇಶ ದ್ವಾರ ಹಸಿರು ತಳಿರು ತೋರಣಗಳಿಂದ ಕಂಗೊಳಿಸುತ್ತಿತ್ತು. ಶಾಲಾ ಕೊಠಡಿಗಳ ಪ್ರಮುಖ ಬೀದಿಗಳು ರಂಗೊಲಿ ಚಿತ್ತಾರಗಳಿಂದ ಕೊಡಿತ್ತು. ಶಾಲಾ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಅವರು, ಮಕ್ಕಳಿಗೆ ಗುಲಾಬಿ ಹೂ, ಪೆನ್ನು, ನೀಡಿ ಪುಷ್ಪ ವೃಷ್ಠಿಗೈವುದರ ಮೂಲಕ ಬರಮಾಡಿಕೊಂಡ ಬಳಿಕ ಶಾರದಾ ಮಾತೆ ಭಾವಚಿತ್ರಕ್ಕೆ ಪೂಜೆ, ಪುಷ್ಪ ಸಮರ್ಪನೆ ಸಮರ್ಪಿಸಲಾಯಿತು.
ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಮಾತನಾಡಿ, ಸರ್ಕಾರ ಈ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ವರ್ಷವೆಂದು ಘೋಷಿಸಿದದ್ದರಿಂದ, ಕೋವಿಡ್ ಅಲೆಯಲ್ಲಿ ಎರಡು ವರ್ಷ ಹಿಂದುಳಿದ ವಿಷಯಗಳನ್ನು ವಿಶೇಷವಾಗಿ ಬೋದಿಸಲು ಕಾರ್ಯೋನ್ಮುಖರಾಗುವ ಸದುದ್ದೇಶ ಹೊಂದಿದ್ದೇವೆ. ಈ ವರ್ಷದ ಮಕ್ಕಳಿಗೆ ಮಳೆ ಬಿಲ್ಲು ಕಾರ್ಯಕ್ರಮದಡಿಯಲ್ಲಿ ವಿವಿಧ ಕಲಿಕಾ ಚಟುವಟಿಕೆ ಹಮ್ಮಿಕೊಂಡು ಮಕ್ಕಳಲ್ಲಿ ಕಲಿಕಾ ಉತ್ಸಾಹ, ಪ್ರೋತ್ಸಾಹ ತುಂಬಿ ಕಾರ್ಯನಿರ್ವಹಿಸುತ್ತೇವೆ ಎಂದರು.
ಮಲ್ಲಿಕಾರ್ಜುನ ಹಿರೇಮಠ, ಮೋಹನ ತುಪ್ಪದ, ಶುಭಾ.ಬಿ., ವಿವಿ.ಬಿರಾದಾರ, ಪ್ರಕಾಶ ಕುರಬೇಟ, ವೈ.ಎಂ.ವಗ್ಗರ, ಈರಣ್ಣ ಪಟಗುಂದಿ, ಎ.ಬಿ.ತಾಂವಶಿ, ಈಶ್ವರ ಮುನವಳ್ಳಿ, ರಾಕೇಶ ನಡೋಣೆ, ಮಲ್ಹಾರಿ ಪೋಳ, ಸೌಮ್ಯಶ್ರೀ ಗಂಗಾ., ಶಮಾ ಪ್ರರ್ವೀಣ ಮುರಗೋಡ, ಬೆಟಗೇರಿ, ಅಕ್ಕಿಸಾಗರ, ತಪಸಿ, ಕೆಮ್ಮನಕೋಲ, ಮರಡಿಶಿವಾಪೂರ, ಬಗರನಾಳ ಗ್ರಾಮಗಳ ಶಿಕ್ಷಣಪ್ರೇಮಿಗಳು, ಪಾಲಕರು, ಶಾಲೆಯ ವಿದ್ಯಾರ್ಥಿಗಳು ಇತರಿದ್ದರು ಇದ್ದರು.