75ನೇ ವರ್ಷದ ಸ್ವಾತ್ರಂತ್ರ್ಯ ಅಮೃತ ಮಹೋತ್ಸವ ಸಂಭ್ರಮಾಚರಣೆ
ಬೆಟಗೇರಿ ಪತ್ರೇಪ್ಪನ ತೋಟದ ಕನ್ನಡ ಶಾಲೆಯ ಮಕ್ಕಳಿಂದ ಗಮನ ಸೆಳೆದ ಮಹಾನ್ ವ್ಯಕ್ತಿಗಳ ರೂಪಕಗಳು
ಬೆಟಗೇರಿ: ಗ್ರಾಮದ ಪತ್ರೇಪ್ಪನ ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಆ.15ರಂದು ನಡೆದ 75ನೇ ವರ್ಷದ ಸ್ವಾತ್ರಂತ್ರ್ಯ ಅಮೃತ ಮಹೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ದೇಶಕ್ಕಾಗಿ ತಮ್ಮ ಬದುಕನ್ನೆ ತ್ಯಾಗಗೈದ ಮಹಾನ್ ವೀರ ಪುರುಷ ಮತ್ತು ಮಹಿಳೆಯರ ರೂಪಕದ ವೇಷಭೂಷಣವನ್ನು ಇಲ್ಲಿಯ ಶಾಲೆಯ ಮಕ್ಕಳು ತೊಟ್ಟು ಎಲ್ಲರ ಗಮನ ಸೆಳೆದರು.
ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ವಿಠಲ ಕೋಣಿ ಧ್ವಜಾರೋಹಣ ನೆರವೇರಿಸಿದರು. ಮುಖ್ಯಶಿಕ್ಷಕ ಬಿ.ಎ.ಕೋಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾತ್ಮಗಾಂಧೀಜಿ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಭಾವ ಚಿತ್ರಕ್ಕೆ ಪೂಜೆ, ಪುಷ್ಪ ಸಮರ್ಪನೆ, ವಿದ್ಯಾರ್ಥಿಗಳಿಗೆ ಸಿಹಿ ವಿತರಣೆ ಸಡಗರದಿಂದ ನಡೆಯಿತು. ಶಾಲೆಯ ಎಸ್‍ಡಿಎಂಸಿ ಸದಸ್ಯರು, ಶಿಕ್ಷಕರು, ಶಿಕ್ಷಕಿಯರು, ಬಿಸಿಯೂಟ ಸಿಬ್ಬಂದಿ, ಶಿಕ್ಷಣಪ್ರೇಮಿಗಳು, ಗ್ರಾಮಸ್ಥರು ಇದ್ದರು.