Breaking News
Home / Recent Posts / ಬೆಟಗೇರಿಯಲ್ಲಿ ಜರುಗಲಿರುವ 38ನೇ ಸತ್ಸಂಗ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ

ಬೆಟಗೇರಿಯಲ್ಲಿ ಜರುಗಲಿರುವ 38ನೇ ಸತ್ಸಂಗ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ

Spread the love

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಈಶ್ವರ ದೇವರ ದೇವಸ್ಥಾನದಲ್ಲಿ ಆ.29 ರಿಂದ ಸೆ.2ರ ವರೆಗೆ ನಡೆಯಲಿರುವ 38ನೇ ಸತ್ಸಂಗ ಸಮ್ಮೇಳನದ ಆಯೋಜನೆಯ ಹಿನ್ನಲೆಯಲ್ಲಿ ಸ್ಥಳೀಯ ಡಾ.ಬೆಟಗೇರಿ ಕೃಷ್ಣಶರ್ಮ ವೃತ್ತದಲ್ಲಿ ಇಚೆಗೆ ಸತ್ಸಂಗ ಸಮ್ಮೇಳನ ಆಹ್ವಾನ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಸ್ಥಳೀಯ ಪ್ರವಚನಕಾರ ಪುಂಡಲೀಕಪ್ಪ ಪಾರ್ವತೇರ ಮಾತನಾಡಿ, ಬೆಟಗೇರಿ ಗ್ರಾಮದಲ್ಲಿ ಇದೇ ಆ.29ರಿಂದ ಸೆ.2ರವರೆಗೆ ನಡೆಯಲಿರುವ 38ನೇ ಸತ್ಸಂಗ ಸಮೇಳನದ ಸಮಗ್ರ ಯಶಸ್ವಿಗೆ ಇಲ್ಲಿಯ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ಥಳೀಯರು ಸಹಾಯ, ಸಹಕಾರ ನೀಡಬೇಕೆಂದು ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡರು.
ಬಾಕ್ಸ್ ಐಟಮ್: ನಾಡಿನ ಹೆಸರಾಂತ ಮಹಾಸ್ವಾಮಿಜಿಗಳಿಂದ ಪ್ರವಚನ : ಇಂಚಲ ಶಿವಯೋಗಿಶ್ವರ ಸಾಧು ಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಮಹಾಸ್ವಾಮಿಜಿ ಅವರ ಘನ ಅಧ್ಯಕ್ಷತೆಯಲ್ಲಿ ಐದು ದಿನಗಳ ಕಾಲ ಬೆಟಗೇರಿ ಗ್ರಾಮದಲ್ಲಿ ಹಮ್ಮಿಕೊಂಡ 38ನೇ ಸತ್ಸಂಗ ಸಮೇಳನದಲ್ಲಿ ನಾಡಿನ ಹೆಸರಾಂತ ಹಲವಾರು ಜನ ಮಹಾಸ್ವಾಮಿಜಿ, ಸಂತ-ಶರಣರು, ಮಾತೋಶ್ರೀಗಳು ಸೇರಿದಂತೆ ಆಧ್ಯಾತ್ಮ ಪ್ರವೀಣರು ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರವಚನ ನೀಡಲಿದ್ದಾರೆ ಎಂದು ಸ್ಥಳೀಯ ಈಶ್ವರ ಭಜನಾ ಮಂಡಳಿ ಅಧ್ಯಕ್ಷ ಬಸಪ್ಪ ದೇಯನ್ನವರ ತಿಳಿಸಿದರು.
ಸ್ಥಳೀಯ ಶರಣರಾದ ಬಸಪ್ಪ ತೋಟಗಿ, ಬಸವರಾಜ ಪಣದಿ, ಚಿಂತಪ್ಪ ಸಿದ್ನಾಳ, ಸುರೇಶ ಸಿದ್ನಾಳ, ಮಹಾದೇವಪ್ಪ ಹಡಪದ, ಮನೋಹರ ಕತ್ತಿ, ನಿಂಗಪ್ಪ ಕಂಬಿ, ರಾಮಣ್ಣ ಕತ್ತಿ, ಈಶ್ವರ ಬಳಿಗಾರ, ಈಡಪ್ಪ ರಾಮಗೇರ, ಫಕೀರಪ್ಪ ಪೇದನ್ನವರ, ನಿಂಗಪ್ಪ ಚಂದರಗಿ, ಬಸು ನೀಲಣ್ಣವರ, ಬಸನಪ್ಪ ದೇಯಣ್ಣವರ, ಗೌಡಪ್ಪ ಮೇಳೆಣ್ಣವರ, ರಾಮಣ್ಣ ಮುಧೋಳ ಈಶ್ವರ ಭಜನಾ ಮಂಡಳಿ ಸದಸ್ಯರು, ಗಣ್ಯರು, ಹಿರಿಯರು, ಇತರರು ಇದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ