Breaking News
Home / Recent Posts / ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ಸಾಧಕರ ಸತ್ಕಾರ ಕಾರ್ಯಕ್ರಮ

ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ಸಾಧಕರ ಸತ್ಕಾರ ಕಾರ್ಯಕ್ರಮ

Spread the love

ಬೆಟಗೇರಿ:ಎಲ್ಲರ ಮೆಚ್ಚುಗೆಗೆ ಪಾತ್ರರಾಗುವಂತೆ ಪ್ರಾಮಾಣಿಕ, ನಿಸ್ವಾರ್ಥ ಸೇವೆಗೈದ ವ್ಯಕ್ತಿಗಳ ಬೆನ್ನತ್ತಿ ಹೆಸರು, ಪ್ರಶಸ್ತಿ, ಬಹುಮಾನಗಳು ಬರುತ್ತವೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯತಿ ಗ್ರಂಥಾಲಯ ಮೇಲ್ವಿಚಾರಕ ಬಸವರಾಜ ಪಣದಿ ಹೇಳಿದರು.
ಸ್ಥಳೀಯ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ನಡೆದ ಸಾಧಕರ ಸತ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಸಾಧನೆ ಸಾಧಕನ ಸ್ವತ್ತು ಹೊರತು ಸೋಮಾರಿಯ ಸ್ವತ್ತಲ್ಲಾ, ಜಿಲ್ಲಾ ಮತ್ತು ತಾಲೂಕಾ ಮಟ್ಟದ ಅತ್ಯುತ್ತಮ ಪ್ರಶಸ್ತಿ ಪಡೆದುಕೊಂಡ ಶಾಲೆಯ ಶಿಕ್ಷಕ ಮೋಹನ ತುಪ್ಪದ ಅವರ ಶಿಕ್ಷಕ ವೃತ್ತಿಯ ಸೇವೆಯನ್ನು ಈ ವೇಳೆ ಸ್ಮರಿಸಿದರು.
ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಅವರು ಅಧ್ಯಕ್ಷತೆ, ಈರಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು. ನ್ಯಾಯವಾದಿ ಎಂ.ಐ.ನೀಲಣ್ಣವರ, ಸವದತ್ತಿ ತಾಲೂಕಾ ಬಿಜೆಪಿ ಮುಖಂಡರಾದ ಡಾ.ಎ.ಎಂ.ಶಂಕರಲಿಂಗಪ್ಪ ಮಾತನಾಡಿದರು.
ಬಾಕ್ಸ್ ಐಟಮ್: ಬೆಟಗೇರಿ ಪ್ರೌಢ ಶಾಲೆ ಶಿಕ್ಷಕ ಮೋಹನ ತುಪ್ಪದಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಹಿಂದಿ ಭಾಷೆಯ ಶಿಕ್ಷಕ ಮೋಹನ ಪತ್ರೆಪ್ಪ ತುಪ್ಪದ ಅವರ 15 ವರ್ಷಗಳ ಅನುಪಮ ಸೇವೆ ಪರಿಗಣಿಸಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಹಾಗೂ ಮೂಡಲಗಿ ಶೈಕ್ಷಣಿಕ ವಲಯದ ತಾಲೂಕಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇಂಚಲದ ಸದ್ಗುರು ಡಾ.ಶಿವಾನಂದ ಭಾರತಿ ಮಹಾಸ್ವಾಮಿಜಿ ಸೇರಿದಂತೆ ಹಲವಾರು ಜನ ಸ್ವಾಮಿಜಿ, ಶರಣರು, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗಣ್ಯರು, ಶಿಕ್ಷಣ ಪ್ರೇಮಿಗಳು, ಶಾಲೆಯ ಮುಖ್ಯೋಪಾಧ್ಯಯ, ಶಿಕ್ಷಕರು, ಎಸ್‍ಡಿಎಂಸಿ ಮಾಜಿ ಮತ್ತು ಹಾಲಿ ಅಧ್ಯಕ್ಷರು, ಸದಸ್ಯರು ಶಿಕ್ಷಕ ಮೋಹನ ತುಪ್ಪದ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಶಿಕ್ಷಣ ಪ್ರೇಮಿಗಳಾದ ಚಂದ್ರಶೇಖರ ನೀಲಣ್ಣವರ, ರಾಮಣ್ಣ ಬಳಿಗಾರ, ವೀರಸಂಗಪ್ಪ ದೇಯಣ್ಣವರ, ಬಸನಪ್ಪ ದೇಯಣ್ಣವರ, ಚಂದ್ರಶೇಖರ ತುಪ್ಪದ, ಸಿಂಗಣ್ಣ ಅಂಗಡಿ, ಬಸವರಾಜ ತುಪ್ಪದ ಅಪ್ಪನಾಯ್ಕ ನಾಯ್ಕರ, ಮಾಸ್ತರ ಹಾರೂಗೊಪ್ಪ, ವಿಠಲ ಕೋಣಿ, ಶಾಲೆಯ ಎಸ್ಡಿಎಂಸಿ ಮಾಜಿ ಮತ್ತು ಹಾಲಿ ಅಧ್ಯಕ್ಷರು, ಸದಸ್ಯರು, ಶಿಕ್ಷಕರು, ಅತಿಥಿ ಶಿಕ್ಷಕರು, ಸಿಬ್ಬಂದಿ, ಗಣ್ಯರು, ಶಿಕ್ಷಣಪ್ರೇಮಿಗಳು, ವಿದ್ಯಾರ್ಥಿಗಳು ಇತರರಿದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ