ಬೆಟಗೇರಿ ಗ್ರಾಮದಲ್ಲಿ ವಿಶ್ವಕರ್ಮ ಜಯಂತಿ ಆಚರಣೆ
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿಶ್ವಕರ್ಮ ಸಮುದಾಯದ ವತಿಯಿಂದ ಸ್ಥಳೀಯ ಗ್ರಾಮ ದೇವತೆ ದ್ಯಾಮವ್ವದೇವಿ ದೇವಾಲಯದಲ್ಲಿ ಸೆ.17 ರಂದು ನಡೆದ ವಿಶ್ವಕರ್ಮ ಜಯಂತಿ ಆಚರಣೆ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.
ಸಂಗಯ್ಯ ಹಿರೇಮಠ ಕಾರ್ಯಕ್ರಮದ ಸಾನಿಧ್ಯ ವಹಿಸಿ ವಿಶ್ವಕರ್ಮರ ಭಾವ ಚಿತ್ರಕ್ಕೆ ಪೂಜೆ, ಪುಷ್ಪ ಸಮರ್ಪನೆ ನೆರವೇರಿಸಿದ ಬಳಿಕ ಸಿಹಿ ವಿತರಿಸಲಾಯಿತು. ಯುವ ಮುಖಂಡರಾದ ಬಸವರಾಜ ಕೋಣಿ, ಗುಳಪ್ಪ ಪಣದಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಶಿವರಾಜ ಪತ್ತಾರ, ಉಮೇಶ ಬಡಿಗೇರ, ಮಲ್ಲಿಕಾರ್ಜುನ ಸೋಮಗೌಡ್ರ, ಬಸವರಾಜ ಮಾಳೇದ, ಕಾಳಪ್ಪ ಪತ್ತಾರ, ಭೀಮಶೆಪ್ಪ ಬಡಿಗೇರ, ಬಾಳಪ್ಪ ಬಡಿಗೇರ, ಮಾಂತು ಬಡಿಗೇರ, ಪರಸಪ್ಪ ಬಡಿಗೇರ, ಮಹೇಶ ಪತ್ತಾರ, ಮಂಜು ಪತ್ತಾರ, ಪ್ರಕಾಶ ಬಡಿಗೇರ, ಬೀರಪ್ಪ ಬಾಣಸಿ, ಬಸವರಾಜ ಬಡಿಗೇರ, ಬಸಪ್ಪ ಸಂಕಾನಟ್ಟಿ ಸೇರಿದಂತೆ ವಿಶ್ವಕರ್ಮ ಸಮುದಾಯದ ಹಿರಿಯ ನಾಗರಿಕರು, ಯುವಕರು, ಗ್ರಾಮಸ್ಥರು ಇದ್ದರು.