ಬೆಟಗೇರಿ ಪಿಕೆಪಿಎಸ್ ಸಂಘ ಇನ್ನೂ ಹೆಮ್ಮರವಾಗಿ ಬೆಳೆಯಲಿ:ಸರ್ವತ್ತೋಮ ಜಾರಕಿಹೊಳಿ
*ಸ್ಥಳೀಯ ಪಿಕೆಪಿಎಸ್ ಸಂಘದ ಗೋದಾಮು ನೂತನ ಕಟ್ಟಡದ ಉದ್ಘಾಟನೆ*
ಗಣ್ಯರಿಗೆ ಸತ್ಕಾರ* ಶ್ರೀಗಳಿಂದ ಆರ್ಶೀವಚನ
ಬೆಟಗೇರಿ:ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ರೈತರು ಆರ್ಥಿಕವಾಗಿ ಸಬಲರಾಗಲು ಸಹಕಾರಿಯಾಗಿವೆ. ರೈತರು ದೇಶದ ಬೆನ್ನಲುಬು, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ರೈತರ ಹಿತಕ್ಕಾಗಿ ಶ್ರಮೀಸುತ್ತಾ ಬಂದಿದ್ದಾರೆ. ಜಾರಕಿಹೊಳಿ ಕುಟುಂಬದವರು ಸದಾ ನಿಮ್ಮೂಂದಿಗೆ ಇರುತ್ತೇವೆ ಎಂದು ಯುವ ನಾಯಕ ಸರ್ವತ್ತೋಮ ಜಾರಕಿಹೊಳಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ನಿರ್ಮಿಸಿದ ಗೋದಾಮು ನೂತನ ಕಟ್ಟಡದ ಉದ್ಘಾಟನೆ ಸೆ.21ರಂದು ನೆರವೇರಿಸಿ ಮಾತನಾಡಿದ ಅವರು, ಬೆಟಗೇರಿ ಪಿಕೆಪಿಎಸ್ ಸಂಘ ಇನ್ನೂ ಹೆಮ್ಮರವಾಗಿ ಬೆಳೆಯಲಿ. ರೈತರು ಆರ್ಥಿಕವಾಗಿ ಸದೃಢವಾಗಿರಬೇಕು ಎಂದರು.
ಬೆಳಗಾವಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ ಗೌರವಾನ್ವಿತ ಅತಿಥಿಗಳಾಗಿ ಮಾತನಾಡಿ, ಪಿಕೆಪಿಎಸ್ ಸಂಘಗಳು ಗ್ರಾಮೀಣ ವಲಯದ ಜನರ ಜೀವನಾಡಿಯಾಗಿವೆ. ಬೆಟಗೇರಿಯಲ್ಲಿ ಸದ್ಗುರು ಸಿದ್ಧಾರೂಢರು ಸೇರಿದಂತೆ ಅನೇಕ ಜನ ಮಹಾತ್ಮರು ಪಾದಸ್ಪರ್ಶ ಮಾಡಿದ ಪುಣ್ಯನೆಲವಿದು, ಬಿಡಿಸಿಸಿ ಬ್ಯಾಂಕ್ ಮತ್ತು ಪಿಕೆಪಿಎಸ್ ಸಂಘಗಳಲ್ಲಿ ಹಲವಾರು ಸಹಾಯ, ಸೌಲಭ್ಯಗಳ ಪ್ರಯೋಜನಗಳಿವೆ ರೈತರು ಪಡೆದುಕೊಳ್ಳಬೇಕು. ಬೆಟಗೇರಿ ಗ್ರಾಮಕ್ಕೆ ಶೀಘ್ರದಲ್ಲಿಯೇ ಇನ್ನೂಂದು ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಬಿಡಿಸಿಸಿ ಬ್ಯಾಂಕ್ ಶಾಖೆಯನ್ನು ಸ್ಥಾಪಿಸಲು ಪ್ರಯತ್ನಿಸಲಾಗುವುದು ಎಂದರು.
ಜಿಪಂ ಮಾಜಿ ಸದಸ್ಯ ರಾಜೇಂದ್ರ ಸಣ್ಣಕ್ಕಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವ, ಮಾರ್ಗದರ್ಶನ ಹಾಗೂ ಸಹಕಾರದಿಂದ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿಯವರ ಬೆಂಬಲದೊಂದಿಗೆ ಅರಭಾಂವಿ ಮತಕ್ಷೇತ್ರದ ಸಹಕಾರಿ ಸಂಘ, ಸಂಸ್ಥೆಗಳು ಸಾಕಷ್ಟು ಬೆಳವಣಿಗೆಯ ಹೆಜ್ಜೆಯನ್ನಿಟ್ಟಿವೆ. ರೈತರಿಗೆ ಪಿಕೆಪಿಎಸ್ ಸಂಘಗಳು ಹೆಚ್ಚಿನ ಸಾಲ ಸೌಲಭ್ಯ ನೀಡಬೇಕು ಎಂದರು.
ಭಾಗೋಜಿಕೊಪ್ಪದ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಜಿ ದಿವ್ಯ ಸಾನಿಧ್ಯ, ಸುಣಧೋಳಿಯ ಅಭಿನವ ಶಿವಾನಂದ ಮಹಾಸ್ವಾಮಿಜಿ ನೇತೃತ್ವ ವಹಿಸಿ ಜ್ಯೋತಿ ಪ್ರಜ್ವಲಿಸಿದ ಬಳಿಕ ಆರ್ಶೀವಚನ ನೀಡಿದರು. ಸ್ಥಳೀಯ ಪಿಕೆಪಿಎಸ್ ಅಧ್ಯಕ್ಷ ಚಂದ್ರಶೇಖರ ನೀಲಣ್ಣವರ ಅಧ್ಯಕ್ಷತೆ ವಹಿಸಿದ್ದರು. ಬೈಲಹೊಂಗಲದ ಸಹಾಯಕ ನಿಬಂಧಕಿ ಶಾಹಿನ್ ಅಖ್ತರ್ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಶ್ರೀಗಳು, ಗಣ್ಯರನ್ನು ಶಾಲು ಹೊದಿಸಿ ಸತ್ಕರಿಸಿದರು.
ಗೋಕಾಕ ಎನ್‍ಎಸ್‍ಎಫ್ ಪ್ರತಿನಿಧಿ ನಿಂಗಪ್ಪ ಕುರಬೇಟ, ಬೆಳಗಾವಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಡೋಣಿ, ಸಹಕಾರ ಇಲಾಖೆ ಜಂಟಿ ನಿದೇರ್ಶಕ ಬಸವರಾಜು, ಗೋಕಾಕ ತಾಲೂಕಾ ನಿಯಂತ್ರಣಾಧಿಕಾರಿ ಎಮ್.ಎಮ್.ಕುರಬೇಟ, ಗೋಕಾಕ ಪೂರ್ವಭಾಗದ ಬ್ಯಾಂಕ್ ನಿರೀಕ್ಷಕ ಆರ್.ಎಸ್.ಸನದಿ, ಗೋಕಾಕ ಸಹಕಾರಿ ಅಭಿವೃದ್ಧಿ ಅಧಿಕಾರಿ ಬಿ.ಕೆ.ಗೋಖಲೆ, ಗೋಕಾಕ ಸನ್ನದ್ದು ಲೆಕ್ಕಪರಿಶೋಧಕ ಸೈದಪ್ಪ ಗದಾಡಿ, ಮಮದಾಪೂರ ಬಿಡಿಸಿಸಿ ಬ್ಯಾಂಕ್ ಶಾಖಾ ವ್ಯವಸ್ಥಾಪಕ ವಿನೋದಕುಮಾರ ವಾಲಿ, ಧರೆಪ್ಪ ಚಂದರಗಿ, ಲಕ್ಷ್ಮಣ ನೀಲಣ್ಣವರ, ಬಸವಂತ ಕೋಣಿ, ಲಕ್ಷ್ಮಣ ಚಂದರಗಿ, ಈಶ್ವರ ಬಳಿಗಾರ, ಹನಮಂತ ಪಾಟೀಲ, ಮುಖ್ಯ ಕಾರ್ಯನಿರ್ವಾಹಕ ಅಡಿವೆಪ್ಪ ಮುರಗೋಡ, ಬಸವರಾಜ ಪಣದಿ, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ತಾಪಂ, ಗ್ರಾಪಂ, ಪಿಕೆಪಿಎಸ್ ಆಡಳಿತ ಮಂಡಳಿ ಹಾಲಿ ಮತ್ತು ಮಾಜಿ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿ, ಗಣ್ಯರು, ಸಹಕಾರಿ ಧುರೀಣರು, ರೈತರು, ಗ್ರಾಮಸ್ಥರು ಇತರರು ಇದ್ದರು.